ದಾವಣಗೆರೆ: ರಾಜ್ಯದಲ್ಲಿ ವರುಣನ ಆರ್ಭಟ ಜೋರಾಗಿದ್ದು, ದಾವಣಗೆರೆ ಜಿಲ್ಲೆಯಲ್ಲಿ ಕೂಡ ವರುಣನ ಮುಂದುವರೆದಿದ್ದು, ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯಲ್ಲಿ 23 ಮನೆಗಳಿಗೆ ಹಾನಿ ಉಂಟಾಗಿದೆ ಎಂದು ತಿಳಿದು ಬಂದಿದೆ.
ಇನ್ನು ರೈತರು ಹೊಲದಲ್ಲಿ ಬೆಳೆದಿದ್ದ ಹತ್ತಿ, ಬತ್ತ, ಈರುಳ್ಳಿ ಬೆಳೆಗಳು ಮಳೆಯಿಂದ ನೀರು ನುಗ್ಗಿದ ಪರಿಣಾಮ ಅಪಾರ ಪ್ರಮಾಣದ ಬೆಳೆಹಾನಿ ಉಂಟಾಗಿದ್ದು, ರೈತರನ್ನು ಕಂಗಾಲಾಗುವಂತೆ ಮಾಡಿದೆ. ಇನ್ನು ಜಿಲ್ಲೆಯ ದೊಡ್ಡಘಟ್ಟ ಮತ್ತು ಚಿರಡೋಣಿ ಗ್ರಾಮದ ರಸ್ತೆ ಬಂದ್ ಆಗಿದೆ.
ಕೊಪ್ಪಳದಲ್ಲಿ ಕೊಚ್ಚಿ ಹೋಗುತಿದ್ದ ವ್ಯಕ್ತಿಯ ರಕ್ಷಣೆ:
ಈಗಾಗಲೇ ಹವಾಮಾನ ಇಲಾಖೆಯಿಂದ ಆರೆಂಜ್ ಅಲರ್ಟ್ ಮಾಡಿರುವ ಕೊಪ್ಪಳ ಜಿಲ್ಲೆಯಲ್ಲಿಯೂ ಸಹ ಬಾರಿ ಮಳೆಯಿಂದ ಅವಾಂತರ ಉಂಟಾಗಿದ್ದು, ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯ ರಕ್ಷಣೆ ಮಾಡಲಾಗಿದೆ.
ಹೌದು ಹಳ್ಳ ದಾಟುವಾಗ ಮೌಲಾಸಾಬ್ ಎಂಬ ವ್ಯಕ್ತಿ ತನ್ನ ಸೈಕಲ್ ಸಮೇತ ಕೊಚ್ಚಿಹೋಗುತ್ತಿದ್ದಾಗ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.