ಪಿಎಂ ಸೂರ್ಯ ಘರ್ ಯೋಜನೆ: ಈ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ ಭರ್ಜರಿ ಸಬ್ಸಿಡಿ ಜೊತೆಗೆ ಆದಾಯ

ಪ್ರತಿ ತಿಂಗಳು 300 ಯುನಿಟ್ ಉಚಿತ ವಿದ್ಯುತ್ ಲಾಭವನ್ನು ಸುಲಭವಾಗಿ ಪಡೆಯಲು ತಮ್ಮ ಮನೆಯ ಮೇಲೆ ಸೌರಫಲಕ ಅಳವಡಿಸುವ ಮೂಲಕ ಉಚಿತ ವಿದ್ಯುತ್ ಹಾಗೂ ಹೆಚ್ಚುವರಿ ವಿದ್ಯುತ್ ಮಾರಾಟ ಮಾಡಿ ಅದರಿಂದಲೂ ಆದಾಯಗಳಿಸುವ ಪ್ರಧಾನಿ ಸೂರ್ಯ ಘರ್…

ಪ್ರತಿ ತಿಂಗಳು 300 ಯುನಿಟ್ ಉಚಿತ ವಿದ್ಯುತ್ ಲಾಭವನ್ನು ಸುಲಭವಾಗಿ ಪಡೆಯಲು ತಮ್ಮ ಮನೆಯ ಮೇಲೆ ಸೌರಫಲಕ ಅಳವಡಿಸುವ ಮೂಲಕ ಉಚಿತ ವಿದ್ಯುತ್ ಹಾಗೂ ಹೆಚ್ಚುವರಿ ವಿದ್ಯುತ್ ಮಾರಾಟ ಮಾಡಿ ಅದರಿಂದಲೂ ಆದಾಯಗಳಿಸುವ ಪ್ರಧಾನಿ ಸೂರ್ಯ ಘರ್ ಯೋಜನೆ (Surya Ghar Yojana) ಈ ಯೋಜನೆಯಲ್ಲಿ ಕೇಂದ್ರ ಸರ್ಕಾರ ಭರ್ಜರಿ ಸಬ್ಸಿಡಿಯನ್ನು ನೀಡುತ್ತಿದೆ.

ಮುಖ್ಯವಾಗಿ ಸೌರಫಲಕ ಅಳವಡಿಕೆಗೆ 1 ಕಿಲೋವ್ಯಾಟ್ ಅಳವಡಿಕೆ ವೆಚ್ಚ ಸರಿಸುಮಾರು 90,000 ರೂಪಾಯಿ, ಇನ್ನು 2 ಕಿಲೋವ್ಯಾಟ್‌ಗೆ 1.5 ಲಕ್ಷ ರೂಪಾಯಿ ಹಾಗೂ 3 ಕಿಲೋವ್ಯಾಟ್‌ಗೆ 2 ಲಕ್ಷ ರೂಪಾಯಿ ವೆಚ್ಚವಾಗಲಿದೆ. ಇಷ್ಟು ಮೊತ್ತ ವೆಚ್ಚ ಮಾಡಿ ಸೌರಫಲಕ ಹಾಕಿದಲ್ಲಿ ಕೇಂದ್ರ ಸರ್ಕಾರ ಸಬ್ಸಿಡಿ ಮೊತ್ತವನ್ನು ಬಳಕೆದಾರನ ಖಾತೆಗೆ ಜಮೆ ಮಾಡಲಿದೆ.

ಒಂದು ವೇಳೆ ನೀವು ಒಂದು ಕಿಲೋವ್ಯಾಟ್ ಸೌರಫಲಕ ವ್ಯವಸ್ಥೆ ಅಳವಡಿಸಿದರೆ ಕೇಂದ್ರ ಸರ್ಕಾರ 18,000 ರೂಪಾಯಿ ಸಬ್ಸಿಡಿ ನೀಡಲಿದೆ. ಇನ್ನು 2 ಕಿಲೋವ್ಯಾಟ್‌ಗೆ 30,000 ರೂಪಾಯಿ ಹಾಗೂ 3 ಕಿಲೋವ್ಯಾಟ್‌ಗೆ 78,000 ರೂಪಾಯಿ ಸಬ್ಸಿಡಿ ನೀಡಲಿದೆ.

Vijayaprabha Mobile App free

ಅಲ್ಲದೆ ಉಚಿತ ವಿದ್ಯುತ್ ಜೊತೆಗೆ ಹೆಚ್ಚುವರಿ ವಿದ್ಯುತ್‌ನ್ನು ಸ್ಥಳೀಯ ಬೆಸ್ಕಾಂ, ಹೆಸ್ಕಾಂ ಅಥವಾ ಇತರ ಕೆಇಬಿ ಸಂಸ್ಥೆಗೆ ಮಾರಾಟ ಮಾಡಲು ಈ ವ್ಯವಸ್ಥೆ ಅವಕಾಶ ಮಾಡಿಕೊಡುತ್ತದೆ. ಇದರಿಂದ ಬಳಕೆದಾರರು ಆದಾಯವನ್ನೂ ಗಳಿಸಲು ಸಾಧ್ಯವಿದೆ. ಈ ಯೋಜನೆಗೆ ಯಾರು ಬೇಕಾದರೂ ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಸಲು ಕೇಂದ್ರ ಸರ್ಕಾರದ ಅಧಿಕೃತ ಪಿಎಂ ಘರ್ ಮುಕ್ತ ಬಿಜಿಲಿ ಯೋಜನೆ ಅಧಿಕೃತ ವೆಬ್‌ಸೈಟ್ (https://www.pmsuryaghar.gov.in/) ಮೂಲಕ ಸುಲಭವಾಗಿ ಸಲ್ಲಿಕೆ ಮಾಡಬಹುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.