ಕ್ಯಾನ್ಸರ್‌ ಔಷಧ, ಖಾರದ ವಸ್ತುಗಳ GST ಇಳಿಕೆ; ಕೇಂದ್ರದ ಮಹತ್ವದ ನಿರ್ಧಾರ

GST: ಕ್ಯಾನ್ಸರ್‌ ಔಷಧ, ಖಾರದ ವಸ್ತುಗಳ ಸೇರಿದಂತೆ ಹಲವು ವಸ್ತುಗಳ ಮೇಲಿನ GST ದರವನ್ನು ಇಳಿಕೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹೇಳಿದ್ದಾರೆ. ಹೌದು, 3 ಕ್ಯಾನ್ಸರ್‌…

Nirmala Sitharaman vijayaprabhanews

GST: ಕ್ಯಾನ್ಸರ್‌ ಔಷಧ, ಖಾರದ ವಸ್ತುಗಳ ಸೇರಿದಂತೆ ಹಲವು ವಸ್ತುಗಳ ಮೇಲಿನ GST ದರವನ್ನು ಇಳಿಕೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹೇಳಿದ್ದಾರೆ.

ಹೌದು, 3 ಕ್ಯಾನ್ಸರ್‌ ಔಷಧ ಮೇಲಿನ ಕಸ್ಟಮ್ಸ್‌ ಡ್ಯೂಟಿಗೆ ವಿನಾಯಿತಿ ಘೋಷಿಸಿದ್ದ ಕೇಂದ್ರ ಸರ್ಕಾರ ಇದೀಗ ನಿರ್ದಿಷ್ಟ ಕ್ಯಾನ್ಸರ್‌ ಔಷಧಗಳ ಮೇಲಿನ GST ಪ್ರಮಾಣವನ್ನು 12%ರಿಂದ 5%ಕ್ಕೆ ಇಳಿಸಿದೆ. ಆ ಮೂಲಕ ದೇಶದಲ್ಲಿ ಕ್ಯಾನ್ಸರ್‌ ಚಿಕಿತ್ಸಾ ವೆಚ್ಚವನ್ನು ಮತ್ತಷ್ಟು ಅಗ್ಗಗೊಳಿಸಿದೆ.

ಹೌದು, ಈ ಕುರಿತು ಮಾತನಾಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕ್ಯಾನ್ಸರ್ ಔಷಧಗಳ ಮೇಲಿನ ಜಿಎಸ್‌ಟಿಯನ್ನು ಶೇ.12 ರಿಂದ ಶೇ.5ಕ್ಕೆ ಇಳಿಸಲಾಗಿದ್ದು, ಇದರಿಂದ ಕ್ಯಾನ್ಸರ್ ಚಿಕಿತ್ಸೆಯ ವೆಚ್ಚ ಕಡಿಮೆಯಾಗಲಿದೆ. ಖಾರದ ಉತ್ಪನ್ನಗಳು-ಕುರುಕಲು ತಿಂಡಿಗಳ (ನಮ್ಕೀನ್) ಮೇಲಿನ ಜಿಎಸ್ಟಿಯನ್ನು 18% ರಿಂದ 12% ಕ್ಕೆ ಇಳಿಸಲಾಗಿದ್ದು, 54ನೇ GST ಕೌನ್ಸಿಲ್ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.