Ramya Engagement Wedding News: ಸ್ಯಾಂಡಲ್‌ವುಡ್ ಕ್ವೀನ್, ಮೋಹಕ ತಾರೆ ನಟಿ ರಮ್ಯಾ ಅವರ ಮದುವೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಎಂಗೇಜ್‌ಮೆಂಟ್ ನಡೆಯುತ್ತಿದೆ. ನವೆಂಬರ್‌ನಲ್ಲಿ ಮದುವೆ ನಡೆಯಲಿದೆ ಎಂದೆಲ್ಲಾ ಸುದ್ದಿ ಜೋರಾಗಿ ಹಬ್ಬಿದೆ.
ಹೌದು, ಸ್ಯಾಂಡಲ್‌ವುಡ್ ಪದ್ಮಾವತಿ ನಟಿ ರಮ್ಯಾ ರಾಜಸ್ಥಾನ ಮೂಲದ ಟೆಕ್ಸ್‌ಟೈಲ್ ಉದ್ಯಮಿ ಜೊತೆ ಅಕ್ಟೋಬರ್ ನಲ್ಲಿ ಎಂಗೇಜ್‌ಮೆಂಟ್ ಆಗಲಿದ್ದಾರಂತೆ. ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಮದುವೆ ನಡೆಯಲಿದ್ದು, ರಾಜಸ್ಥಾನದಲ್ಲಿ ಆರತಕ್ಷತೆ ನಡೆಯಲಿದೆ ಅನ್ನೋ ಮಾಹಿತಿ ಹೊರಬಿದ್ದಿದೆ. ಆದರೆ, ಈ ಸುದ್ದಿ ನಿಜವಲ್ಲ
ಈ ಸುದ್ದಿ ಹಬ್ಬಿದ್ಯಾಕೆ?
ನಟಿ ರಮ್ಯಾ ಅವರು ಉದ್ಯಮಿ ಜೊತೆಗೆ ಮದುವೆ ಆಗುವುದು ಪಕ್ಕಾ ಎಂದು ಹೇಳಲಾಗುತ್ತಿದ್ದು, ಆ ಉದ್ಯಮಿ ಕುಟುಂಬದ ಕಾರ್ಯಕ್ರಮದಲ್ಲಿ ರಮ್ಯಾ ಅವರು ಭಾಗಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಇವರ ನಿಶ್ಚಿತಾರ್ಥ ನಡೆಯಲಿದ್ದು, ರಮ್ಯಾರ ಹುಟ್ಟು ಹಬ್ಬದ ದಿನದಂದೇ (ನ.29) ಈ ಜೋಡಿ ಹೊಸ ಬದುಕಿಗೆ ಕಾಲಿಡಲಿದೆ ಅಂತಾ ಸಹ ವರದಿಯಾಗಿತ್ತು.
ಆದರೆ, ಈ ಸುದ್ದಿ ನಿಜವಲ್ಲ, ರಮ್ಯಾ ಅವರು ಆಪ್ತರೊಬ್ಬರ ಫಂಕ್ಷನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಈ ಸುದ್ದಿ ಹಬ್ಬಿದೆ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ರಮ್ಯಾ, ಇದೊಂದು ರೂಮರ್ಸ್ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮಾಡಿದ್ದಾರೆ. ಹಲವಾರು ಬಾರಿಯೂ ಮದುವೆ ಸುದ್ದಿ ಬಂದಾಗ ರಮ್ಯಾ ಅಲ್ಲಗಳೆಯುತ್ತಲೇ ಬಂದಿದ್ದಾರೆ.
https://vijayaprabha.com/heart-healthy-food-in-kannada/