Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಜೈಲು ಸೇರಿರುವ ನಟ ದರ್ಶನ್ ಹಾಗೂ ಎಲ್ಲಾ 17 ಆರೋಪಿಗಳ ನ್ಯಾಯಾಂಗ ಬಂಧನದ ಅವಧಿಯನ್ನು ವಿಸ್ತರಿಸಿ ಕೋರ್ಟ್ ಆದೇಶ ಹೊರಡಿಸಿದೆ.
ನ್ಯಾಯಾಂಗ ಬಂಧನ ಇವತ್ತಿಗೆ ಮುಕ್ತಾಯವಾದ ಬಳಿಕ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 24ನೇ ACMM ನ್ಯಾಯಾಲಯವು, ನಟ ದರ್ಶನ್ & ಸಹಚರರ ನ್ಯಾಯಾಂಗ ಬಂಧನದ ಅವಧಿಯನ್ನು ಸೆಪ್ಟೆಂಬರ್ 12 ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ. ಹಾಗಾಗಿ ಅಲ್ಲಿಯವರೆಗೆ ದರ್ಶನ್ ಗೆ ಜೈಲೂಟವೇ ಫಿಕ್ಸ್ ಆಗಿದೆ.
ದರ್ಶನ್ ವಿರುದ್ಧ 11 ಸೆಕ್ಷನ್ ಅಡಿ ಕೇಸ್
ಇನ್ನು, ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ವಿರುದ್ಧ 11 ಸೆಕ್ಷನ್ ಅಡಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. 120B, 364, 384, 355, 302, 201, 143, 147, 148, 149, 34 ಸೆಕ್ಷನ್ ಅಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ.
120B ಒಳ ಸಂಚು, 364 ಕಿಡ್ನ್ಯಾಪ್, 384 ಸುಲಿಗೆ, 355 ಒತ್ತಡ ಹಾಕಿ ಹತ್ಯೆ, 302 ಕೊಲೆ, 201 ಸಾಕ್ಷ್ಯನಾಶ, 143 ಕಾನೂನು ಬಾಹಿರ ಸಭೆ, 147 ಗಲಭೆ, 148, ಮಾರಕಾಸ್ತ್ರ ಬಳಕೆ, 149 ಗುಂಪಿನಲ್ಲಿ ಹಲ್ಲೆ ಮಾಡಿರುವುದು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖವಾಗಿದೆ.