ತುಂಗಭದ್ರಾ ಡ್ಯಾಂ ಮೇಲೆ ಪ್ರೀ ವೆಡ್ಡಿಂಗ್ ಫೋಟೋ​ ಶೂಟ್ – ಸಾರ್ವಜನಿಕರ ಆಕ್ರೋಶ

ಕೊಪ್ಪಳ: ಭದ್ರತಾ ದೃಷ್ಟಿಯಿಂದ ತುಂಗಭದ್ರಾ ಜಲಾಶಯದ ಮೇಲೆ ಯಾವುದೇ ತರಹದ ಚಿತ್ರೀಕರಣ ನಿಷೇಧಿಸಲಾಗಿದೆ. ಆದರೂ ಕೂಡ ತುಂಗಭದ್ರಾ ಜಲಾಶಯದ ಮೇಲಿನ ಪ್ರೀ ವೆಡ್ಡಿಂಗ್ ಫೋಟೋ ವೈರಲ್ ಆಗಿದೆ. ಬೆಂಗಳೂರು ಪಾಸಿಂಗ್​ ಕಾರನ್ನು ಜಲಾಶಯ ಮೇಲ್ಭಾಗದಲ್ಲಿ…

ಕೊಪ್ಪಳ: ಭದ್ರತಾ ದೃಷ್ಟಿಯಿಂದ ತುಂಗಭದ್ರಾ ಜಲಾಶಯದ ಮೇಲೆ ಯಾವುದೇ ತರಹದ ಚಿತ್ರೀಕರಣ ನಿಷೇಧಿಸಲಾಗಿದೆ. ಆದರೂ ಕೂಡ ತುಂಗಭದ್ರಾ ಜಲಾಶಯದ ಮೇಲಿನ ಪ್ರೀ ವೆಡ್ಡಿಂಗ್ ಫೋಟೋ ವೈರಲ್ ಆಗಿದೆ.

ಬೆಂಗಳೂರು ಪಾಸಿಂಗ್​ ಕಾರನ್ನು ಜಲಾಶಯ ಮೇಲ್ಭಾಗದಲ್ಲಿ ಕಾರು ತೆಗೆದುಕೊಂಡು ಹೋಗಿ, ಅಲ್ಲಿ ಕಾರಿನ ಮುಂದೆ ಮತ್ತು ಮೇಲೆ ಜೋಡಿ ಫೋಟೋ ತೆಗೆಸಿಕೊಂಡಿದ್ದಾರೆ.

ನಿಷೇಧ ಇದ್ದರೂ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಹೇಗೆ ನಡೆಯಿತು. ಪ್ರೀ ವೆಡ್ಡಿಂಗ್ ಫೋಟೋ ಶೂಟ್​ಗೆ ಅಧಿಕಾರಿಗಳು ಅನುಮತಿ ನೀಡಿದ್ರಾ ಎಂಬ ಪ್ರಶ್ನೆಗಳು ಹುಟ್ಟಿದೆ.

Vijayaprabha Mobile App free

ಯಾವಾಗ ಫೋಟೋ ಶೂಟ್ ಆಗಿದೆ, ಪರವಾನಿಗೆ ನೀಡಿದವರು ಯಾರು ಎಂಬುವುದರ ಬಗ್ಗೆ ತನಿಖೆ ನಡೆಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಅಲ್ಲದೇ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.