Pradosha Vrata: ಪ್ರದೋಷ ವ್ರತ ಎಂದರೇನು? ಪ್ರದೋಷ ವ್ರತ ಆಚರಣೆ, ಪೂಜೆ ವಿಧಾನ

Pradosha Vrata: ಪ್ರದೋಷ ವ್ರತವು ಶಿವ ಮತ್ತು ಪಾರ್ವತಿ ದೇವಿಗೆ ಸಂಬಂಧಿಸಿದ ವ್ರತವಾಗಿದ್ದು, ಈ ವ್ರತ ತಿಂಗಳಿಗೆ 2 ಬಾರಿ ಬರುತ್ತದೆ. ಹಾಗೆಯೇ ಅನೇಕರು ಉತ್ತಮ ಆರೋಗ್ಯ ವೃದ್ದಿಗಾಗಿ ಪ್ರದೋಷ ವ್ರತವನ್ನು (Pradosha Vrata)…

Pradosha Vrata

Pradosha Vrata: ಪ್ರದೋಷ ವ್ರತವು ಶಿವ ಮತ್ತು ಪಾರ್ವತಿ ದೇವಿಗೆ ಸಂಬಂಧಿಸಿದ ವ್ರತವಾಗಿದ್ದು, ಈ ವ್ರತ ತಿಂಗಳಿಗೆ 2 ಬಾರಿ ಬರುತ್ತದೆ. ಹಾಗೆಯೇ ಅನೇಕರು ಉತ್ತಮ ಆರೋಗ್ಯ ವೃದ್ದಿಗಾಗಿ ಪ್ರದೋಷ ವ್ರತವನ್ನು (Pradosha Vrata) ಆಚರಿಸುತ್ತಾರೆ. ಈ ಪವಿತ್ರ ವ್ರತವನ್ನು ಆಚರಿಸುವುದರಿಂದ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ಸಿಗುತ್ತದೆ ಎಂದು ಪುರಾಣಗಳಲ್ಲಿ ಮಾಹಿತಿ ಇದೆ. ಈ ವ್ರತವನ್ನು ತ್ರಯೋದಶಿ ವ್ರತ ಎಂದೂ ಕರೆಯುತ್ತಾರೆ.

ಶನಿವಾರ ಪ್ರದೋಷ ವ್ರತ ಮಾಡಿದರೆ ಇದೆ ಸಾಕಷ್ಟು ಪ್ರಯೋಜನ!

ಶನಿವಾರದ ಪ್ರದೋಷ ವ್ರತವನ್ನು ಶನಿ ಪ್ರದೋಷ ಎಂದು ಕೂಡಾ ಕರೆಯಲಾಗುತ್ತದೆ. ಶನಿ ಪ್ರದೋಷದಂದು ವ್ರತ ಮಾಡುವುದರಿಂದ ಸಂತಾನ ಸಂಬಂಧಿಸಿದ ಕೋರಿಕೆಗಳು ನೆರವೇರುತ್ತದೆ ಎಂಬ ನಂಬಿಕೆಯಿದೆ. ಭಕ್ತರು ಈ ದಿನ ಸಂತಾನವನ್ನು ಪಡೆಯುವ ಬಯಕೆಯಿಂದ ಈ ಉಪವಾಸವನ್ನು ಆಚರಿಸುತ್ತಾರೆ. ಈ ಉಪವಾಸವನ್ನು ಪ್ರಾಮಾಣಿಕ ಹೃದಯದಿಂದ ಆಚರಿಸುವುದರಿಂದ, ವ್ಯಕ್ತಿಯು ಬಯಸಿದ ವಸ್ತುವನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ.

ಪ್ರದೋಷ ವ್ರತದ ದಿನ ಉಪವಾಸದ ಫಲ ಎರಡು ಹಸುಗಳ ದಾನಕ್ಕೆ ಸಮ!

ಪ್ರದೋಶ ವ್ರತದ ಬಗ್ಗೆ ಪರಶಿವನು ತಾಯಿ ಸತಿ ದೇವಿಗೆ ಹೇಳಿದ್ದನು. ಪುರಾಣಗಳ ಪ್ರಕಾರ ಒಂದು ಪ್ರದೋಷ ಉಪವಾಸದ ಫಲ ಎರಡು ಹಸುಗಳ ದಾನಕ್ಕೆ ಸಮ. ಕಲಿಯುಗದಲ್ಲಿ ಅಧರ್ಮವು ಹೆಚ್ಚಾದಾಗ ಜನರು ಧರ್ಮದ ಹಾದಿಯನ್ನು ತೊರೆದು ಅನ್ಯಾಯದ ಹಾದಿಯಲ್ಲಿ ಸಾಗುತ್ತಾರೆ, ಆ ಸಮಯದಲ್ಲಿ ಪ್ರದೋಷ ವ್ರತವು ಉತ್ತಮ ಜನರನ್ನು ಉತ್ತಮ ಮಾರ್ಗಕ್ಕೆ ಸಹಾಯ ಮಾಡುತ್ತದೆ ಎನ್ನಲಾಗಿದೆ. ಈ ಉಪವಾಸದ ಮಹತ್ವವನ್ನು ವೇದಗಳ ಮಹಾನ್ ವಿದ್ವಾಂಸರು ಸೂತಜಿ ಗಂಗಾನದಿಯ ದಡದಲ್ಲಿರುವ ಶೌಂಕದಿ ಋಷಿಗಳಿಗೆ ತಿಳಿಸಿದರು ಎನ್ನಲಾಗಿದೆ.

Vijayaprabha Mobile App free

ಶನಿ ಪ್ರದೋಷ ವ್ರತದ ಪೂಜೆ ವಿಧಾನ

Pradosha Vrata
How to perform Pradosha Vrata Ritual, Pooja

ಶನಿ ದೇವರು ಭಗವಾನ್‌ ಶಿವನ ಪರಮ ಭಕ್ತ. ಹಾಗಾಗಿ ಪ್ರದೋಷದ ದಿನ ಶಿವನನ್ನು ಆರಾಧಿಸುವುದರಿಂದ ಶನಿ ದೋಷದಿಂದ ಮುಕ್ತಿ ಪರಿಹಾರ ಸಿಗುತ್ತದೆ. ಈ ದಿನ ಪೂಜೆ ಮಾಡುವಾಗ ಶನಿ ಮೂಲ ಮಂತ್ರವನ್ನು ಪಠಿಸಿದರೆ ಹೆಚ್ಚಿನ ಫಲ ಸಿಗುತ್ತದೆ. ಪೂಜೆಯ ವೇಳೆ ಶಿವಲಿಂಗಕ್ಕೆ ಬಿಲ್ವ ಪತ್ರೆ, ಹೂವು, ದೀಪ ಮತ್ತು ನೈವೇದ್ಯವನ್ನು ಅರ್ಪಿಸಬೇಕು. ನಂತರ ಎಳ್ಳಿನ ಎಣ್ಣೆಯನ್ನು ಉಕ್ಕಿನ ಬಟ್ಟಲಿನಲ್ಲಿ ಹಾಕಿ, ಅದರಲ್ಲಿ ನಿಮ್ಮ ಮುಖವನ್ನು ನೋಡಿ. ಅದನ್ನು ಶನಿದೇವರಿಗೆ ಅರ್ಪಿಸಿ ಪ್ರಾರ್ಥನೆ ಮಾಡಿ. ಅದರ ನಂತರ ತೈಲವನ್ನು ಬಡವರಿಗೆ ದಾನ ಮಾಡಿ.

ಪ್ರದೋಷ ವ್ರತದಂದು ದಾನ ಮಾಡುವಾಗ ಇವುಗಳನ್ನು ನೆನಪಿಡಿ

ದಾನದ ಅವಶ್ಯಕತೆ ಇರುವವರಿಗೆ ದಾನ ಮಾಡಿದರೆ ಹೆಚ್ಚು ಫಲ ಸಿಗುತ್ತದೆ. ದಾನ ಮಾಡುವ ಮೊದಲು ಕಲ್ಮಶವಿಲ್ಲದ, ಶುದ್ಧ ಮನಸ್ಸಿನಿಂದ ದೇವರನ್ನು ಸ್ಮರಿಸಿ ದಾನ ಮಾಡಬೇಕು. ಬಡವರಿಗೆ, ಅಸಹಾಯಕರಿಗೆ ಮತ್ತು ನಿರ್ಗತಿಕರಿಗೆ ದಾನ ಮಾಡಿ. ಇದು ಶಿವನ ವಿಶೇಷ ಅನುಗ್ರಹವನ್ನು ತರುತ್ತದೆ. ಶಿವನ ಅನುಗ್ರಹ ಸಿಕ್ಕರೆ ಸಂತೋಷ ಮತ್ತು ಸಮೃದ್ಧಿ ಹೆಚ್ಚುತ್ತದೆ. ಪ್ರದೋಷ ವ್ರತ ಮತ್ತು ದಾನದಿಂದ ಜೀವನದ ಸಂಕಷ್ಟಗಳಿಗೆ ಪರಿಹಾರ ದೊರೆಯುತ್ತದೆ. ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ.

ಯಾವ ವಾರ ಪ್ರದೋಷ ವ್ರತ ಮಾಡಿದರೆ ಏನೇನು ಫಲ?

ಭಾನುವಾರ ಪ್ರದೋಷ ವ್ರತವನ್ನು ಮಾಡುವ ವ್ಯಕ್ತಿಯು ಸದಾ ಕಾಲ ಆರೋಗ್ಯವಂತನಾಗಿರುತ್ತಾನೆ. ಸೋಮವಾರ ಬೀಳುವ ಪ್ರದೋಷ ವ್ರತವನ್ನು ಆಚರಿಸಿದರೆ ಎಲ್ಲಾ ಮನೋಕಾಮನೆಗಳು ಈಡೇರುತ್ತದೆ. ಮಂಗಳವಾರ ಪ್ರದೋಷ ವ್ರತವನ್ನು ಮಾಡುವುದರಿಂದ ರೋಗಗಳಿಂದ ಪರಿಹಾರ ಸಿಗುತ್ತದೆ. ಬುಧವಾರ ಪ್ರದೋಷ ವ್ರತವನ್ನು ಆಚರಿಸಿದ್ರೆ ಆಶಯಗಳು ಫಲಿಸುತ್ತದೆ. ಗುರುವಾರದ ವ್ರತದಿಂದ ಶತ್ರುಗಳು ನಾಶವಾಗುತ್ತಾರೆ. ಶುಕ್ರವಾರದ ವ್ರತದಿಂದ ಅದೃಷ್ಟ ಹೆಚ್ಚಾಗುತ್ತದೆ. ಶನಿವಾರ ಪ್ರದೋಷ ವ್ರತದಿಂದ ಪುತ್ರ ಸಂತಾನ ಪ್ರಾಪ್ತವಾಗುತ್ತದೆ ಎನ್ನುವ ನಂಬಿಕೆಯಿದೆ.

ಪ್ರದೋಷ ವ್ರತ ಆಚರಣೆ ಹೇಗೆ ಮಾಡಬೇಕು?

ಶ್ರಾವಣ ಮಾಸ ಕೃಷ್ಣ ಪಕ್ಷದ ತ್ರಯೋದಶಿ ಬಹಳ ವಿಶೇಷ. ಈ ದಿನ ಪ್ರದೋಷ ವ್ರತವನ್ನು ಶಿವನ ಸ್ಮರಣೆ ಮಾಡುತ್ತ ಆಚರಿಸಲಾಗುತ್ತದೆ. ಅಂದು ಮಾಡುವ ಪೂಜೆ, ಪುನಸ್ಕಾರ, ಆರಾಧನೆ, ಉಪವಾಸ, ಜಪತಪಗಳು ಪುಣ್ಯಕರವೆಂದು ಹೇಳಲಾಗುತ್ತದೆ. ಈ ಪೂಜೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಯೂಟ್ಯೂಬ್‌ ವಿಡಿಯೋದಲ್ಲಿದೆ.

ಪ್ರದೋಷದ ವ್ರತದ ಸಮಯದಲ್ಲಿಈ ಪ್ರದೋಷ ಸ್ತೋತ್ರ ಕೇಳಿ!

ಹಿಂದೂ ಧರ್ಮದ ಪ್ರಕಾರ ಪ್ರದೋಷ ವ್ರತವನ್ನು ಕಲಿಯುಗದಲ್ಲಿ ಶಿವನ ಆಶೀರ್ವಾದವನ್ನು ಪಡೆಯಲು ಮಾಡುವ ವ್ರತವೆಂದು ಪರಿಗಣಿಸಲಾಗುತ್ತದೆ. ಈ ಪ್ರದೋಷ ಉಪವಾಸವು ತಿಂಗಳ ತ್ರಯೋದಶಿ ದಿನದಂದು ಬರುತ್ತದೆ. ಪ್ರದೋಷ ಸಮಯದಲ್ಲಿ ಶಿವನು ಕೈಲಾಸ ಪರ್ವತದಲ್ಲಿ ನರ್ತಿಸುತ್ತಾನೆ ಎನ್ನುವ ನಂಬಿಕೆಯಿದೆ. ಈ ದಿನದಂದು ಪೂಜಾ ಸಮಯದಲ್ಲಿ ಈ ಪ್ರದೋಷ ಸ್ತೋತ್ರವನ್ನು ಕೇಳಿದರೆ ಶುಭವಾಗುತ್ತದೆ ಎನ್ನಲಾಗುತ್ತದೆ. ಪೂರ್ಣ ಪ್ರದೋಷ ಸ್ತೋತ್ರಂ ಈ ಯ್ಯೂಟ್ಯೂಬ್‌ ವಿಡಿಯೋದಲ್ಲಿದೆ.

https://vijayaprabha.com/deepfake-video-using-ai-technology/

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.