ನಕಲಿ ಅಂಕ ಪಟ್ಟಿ ದಂಧೆ: 3 ಸರ್ಕಾರಿ ಅಧಿಕಾರಿಗಳು ಸೇರಿ 48 ಮಂದಿ CCB ಪೋಲೀಸರ ಬಲೆಗೆ!

ಬೆಂಗಳೂರು : ರಾಜ್ಯದಲ್ಲಿ ರಾಜರೋಷವಾಗಿ ನಡೆಯುತ್ತಿದ್ದ ನಕಲಿ ಅಂಕಪಟ್ಟಿ( Fake marks card) ದಂಧೆಯ ಜಾಲವನ್ನು ಸಿಸಿಬಿ  ಭೇದಿಸಿದ್ದು, 3 ಸರ್ಕಾರಿ ಅಧಿಕಾರಿಗಳು ಸೇರಿ  48 ಮಂದಿಯನ್ನು ಬಂಧಿಸಿದ್ದಾರೆ. ಈ ಧಂದೆಯ ಕಿಂಗ್ ಪಿನ್…

ಬೆಂಗಳೂರು : ರಾಜ್ಯದಲ್ಲಿ ರಾಜರೋಷವಾಗಿ ನಡೆಯುತ್ತಿದ್ದ ನಕಲಿ ಅಂಕಪಟ್ಟಿ( Fake marks card) ದಂಧೆಯ ಜಾಲವನ್ನು ಸಿಸಿಬಿ  ಭೇದಿಸಿದ್ದು, 3 ಸರ್ಕಾರಿ ಅಧಿಕಾರಿಗಳು ಸೇರಿ  48 ಮಂದಿಯನ್ನು ಬಂಧಿಸಿದ್ದಾರೆ. ಈ ಧಂದೆಯ ಕಿಂಗ್ ಪಿನ್ ಬಂದೇ ನವಾಜ್‌ ತಲೆಮೆಸಿಕೊಂಡಿದ್ದಾನೆ .

ಅಕ್ರಮದಲ್ಲಿ ಶಾಮೀಲಾದ ಬಂಧಿತರಲ್ಲಿ  11 ಮಂದಿ ಮಧ್ಯವರ್ತಿಗಳು ಹಾಗೂ 37 ಅಭ್ಯರ್ಥಿಗಳು ಸೇರಿದ್ದಾರೆ. ಇನ್ನು 11 ಮಂದಿ ಅಭ್ಯರ್ಥಿಗಳು ತಲೆಮರೆಸಿಕೊಂಡಿದ್ದಾರೆ.  ಆರೋಪಿಗಳು ಪಿಯುಸಿ, ಪದವಿ, ಎಸ್‌ಎಸ್‌ಎಲ್‌ಸಿ ಸೇರಿದಂತೆ ಎಲ್ಲಾ ಕೋರ್ಸ್‌ಗಳ ಅಂಕಪಟ್ಟಿಗಳಿಗೂ 4ರಿಂದ 5 ಲಕ್ಷ ರೂ. ನಿಗದಿ ಮಾಡಿದ್ದರು. ಪ್ರತ್ಯೇಕ ತಂಡಗಳಾಗಿ ತಮಗೆ ಸಂಪರ್ಕಕ್ಕೆ ಪಡೆದ ಅಭ್ಯರ್ಥಿಗಳಿಂದ ಹಣ ಪಡೆದು ಪಿಯು ಬೋರ್ಡ್‌ನಿಂದ ವಿತರಿಸಲಾಗುವ ಅಂಕಪಟ್ಟಿಗಳ ಮಾದರಿಯಲ್ಲೇ ನಕಲಿ ಅಂಕಪಟ್ಟಿ ತಯಾರಿಸಿ ಕೊಡುತ್ತಿದ್ದರು.  ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿಯಿದ್ದ ‘ಸಿ’ ವೃಂದದ ದ್ವಿತೀಯ ದರ್ಜೆ ಸಹಾಯಕರ 182 ಪರಿಶಿಷ್ಟ ಜಾತಿ ಬ್ಯಾಕ್‌ಲಾಗ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಿದ್ದವರ ಪೈಕಿ 1:3ರ ಅನುಪಾತದಲ್ಲಿ 546 ಅಭ್ಯರ್ಥಿಗಳಿಗೆ ಶೈಕ್ಷಣಿಕ ದಾಖಲೆಗಳನ್ನು ಸಲ್ಲಿಸುವಂತೆ ಇಲಾಖೆ ಸೂಚಿಸಿತ್ತು. ಈ ಪೈಕಿ ಸಲ್ಲಿಕೆಯಾಗಿದ್ದ 546 ಅಂಕಪಟ್ಟಿಗಳ ನೈಜತೆ ಪರಿಶೀಲನೆಗೆ ಶಿಕ್ಷಣ ಇಲಾಖೆ ಹಾಗೂ ಇತರೆ ಸಕ್ಷಮ ಪ್ರಾಧಿಕಾರಗಳಿಗೆ ಕಳುಹಿಸಲಾಗಿತ್ತು. ಪರಿಶೀಲನೆ ವೇಳೆ 24 ಪಿಯುಸಿ ಅಂಕಪಟ್ಟಿಗಳು, ಎಂಟು ಎನ್‌ಐಓಸ್‌ ಅಂಕಪಟ್ಟಿ, 32 ಸಿಬಿಎಸ್‌ಇ ಅಂಕಪಟ್ಟಿಗಳು ನಕಲಿ ಎಂಬುದು ಧೃಡಪಟ್ಟಿತ್ತು. ಈ ನಿಟ್ಟಿನಲ್ಲಿಸರಕಾರಿ ಹುದ್ದೆ ಗಿಟ್ಟಿಸಲು ನಕಲಿ ಅಂಕಪಟ್ಟಿ ಸಲ್ಲಿಸಿದ್ದ 62 ಅಭ್ಯರ್ಥಿಗಳ ವಿರುದ್ಧ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಕಳೆದ ವರ್ಷ ಶೇಷಾದ್ರಿಪುರಂ ಠಾಣೆಯಲ್ಲಿಸಲ್ಲಿಸಿದ್ದ ಪ್ರಕರಣದ ತನಿಖೆ ಜವಾಬ್ದಾರಿ ಸಿಸಿಬಿಗೆ ವಹಿಸಲಾಗಿತ್ತು.

ಕಲಬುರಗಿ ಮೊರಾರ್ಜಿ ದೇಸಾಯಿ ಪಿಯು ಕಾಲೇಜು ಪ್ರಾಂಶುಪಾಲ ಆನಂದ್‌, ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮದ ಎಫ್‌ಡಿಎ ಕೃಷ್ಣ ಗುರುನಾಥ್‌ ರಾಥೊಡ್‌, ಜಲಸಂಪನ್ಮೂಲ ಇಲಾಖೆ ಎಫ್‌ಡಿಎ ಹಾಸನದ ಗಂಗೂರ್‌ ಪ್ರದೀಪ್‌, ಮಧ್ಯವರ್ತಿಗಳಾದ ಹಾಸನದ ಟಿ.ರವಿ, ಮಳವಳ್ಳಿ ಪ್ರದೀಪ್‌, ಜೇವರ್ಗಿ ಮೂಲದ ನಿಂಗಪ್ಪ ನಡುವಿನಮನಿ, ಸಿಂಧಗಿಯ ಮಲ್ಲಿಕಾರ್ಜುನ ಸೋಂಪುರ್‌, ಕಲಬುರಗಿಯ ಮುಸ್ತಾಫ, ಕೆಜಿಎಫ್‌ನ ಸುರೇಶ್‌ಕುಮಾರ್‌, ತುಮಕೂರಿನ ಮುತ್ತುರಾಜ್‌, ಬೆಂಗಳೂರಿನ ಶರತ್‌ ಬಂಧಿತ ಆರೋಪಿಗಳಾಗಿದ್ದಾರೆ.  ಆರೋಪಿಗಳಿಂದ 40 ಲಕ್ಷ ರೂ. ಮೌಲ್ಯದ ಎರಡು ಕಾರು, 17 ಮೊಬೈಲ್‌ ಹಾರ್ಡ್‌ಡಿಸ್ಕ್‌ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆಸರಕಾರಿ ನೌಕರರಾದ ಆನಂದ್‌, ಪ್ರದೀಪ್‌ ಹಾಗೂ ಕೃಷ್ಣಗುರುನಾಥ್‌ ಸರಕಾರಿ ಹುದ್ದೆ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಂದ ನಾಲ್ಕರಿಂದ ಐದು ಲಕ್ಷ ರೂ. ಪಡೆದು ನಕಲಿ ಅಂಕಪಟ್ಟಿ ಜತೆಗೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ವಂಚಿಸಿದ್ದರು. ಉಳಿದ ಮಧ್ಯವರ್ತಿ ಆರೋಪಿಗಳು ಕಂಪ್ಯೂಟರ್‌ ಬ್ರೌಸಿಂಗ್‌ ಸೆಂಟರ್‌ಗಳಲ್ಲಿನಕಲಿ ಅಂಕಪಟ್ಟಿ ತಯಾರಿಸಿ ಕೊಟ್ಟು ಅಭ್ಯರ್ಥಿಗಳಿಂದ ಹಣ ಪಡೆದಿದ್ದರು.ಈ ದಂಧೆಯ ಜಾಲ ಪಶ್ಚಿಮ ಬಂಗಾಳದ ಕಾಲೇಜೊಂದರಲ್ಲಿಯೂ ನಕಲಿ ಅಂಕಪಟ್ಟಿ ತಯಾರಿಸಿಕೊಟ್ಟಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಈ ಜಾಲದ ಪ್ರಮುಖ ಕಿಂಗ್‌ಪಿನ್‌ ಬಂದೇ ನವಾಜ್‌ ಎಂಬುವವನು ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.