ರೇಷನ್ ಕಾರ್ಡ್‌ಗಳಿಗೆ ಇ-ಕೆವೈಸಿ ಕಡ್ಡಾಯ, ಆ. 31 ಲಾಸ್ಟ್‌ ಡೇಟ್‌; ಇ ಕೆವೈಸಿ ಮಾಡಿಸದಿದ್ದರೆ ಏನಾಗುತ್ತದೆ?

Ration Card EKYC Ration Card EKYC

Ration Card EKYC: ಪಡಿತರ ಚೀಟಿದಾರರು (Ration card holder) ಕುಟುಂಬದ ಎಲ್ಲಾ ಸದಸ್ಯರ ಇ-ಕೆವೈಸಿ (EKYC) ಮಾಡಿಸುವುದು ಕಡ್ಡಾಯವಾಗಿದ್ದು, ಆ.31 ರೊಳಗೆ ನ್ಯಾಯಬೆಲೆ ಅಂಗಡಿಗಳಲ್ಲಿ (fair price shop) ಇ-ಕೆವೈಸಿ ಮಾಡಿಸಲು ಸೂಚನೆ ನೀಡಲಾಗಿದೆ.

ಹೌದು, ಮುಂಜಾನೆ 7 ರಿಂದ ರಾತ್ರಿ 9ರವರೆಗೆ ಉಚಿತವಾಗಿ ಇ-ಕೆವೈಸಿ ಮಾಡಿಸಿಕೊಬಹುದು. ಇದನ್ನು ಮಾಡಿಸಲು ಕೇವಲ 5 ದಿನ ಬಾಕಿ ಇದೆ. ಅಗಸ್ಟ್ 31, 2024 ರ ಒಳಗಾಗಿ ಈ ಪ್ರಕ್ರಿಯೆ ಮುಗಿಸಿ. ಇನ್ನು ಇ-ಕೆವೈಸಿ ಮಾಡಿಸದಿರುವ ಪಡಿತರ ಚೀಟಿದಾರರಿಗೆ ಮುಂದಿನ ದಿನಗಳಲ್ಲಿ ಪಡಿತರ ಹಂಚಿಕೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು & ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಅವಿನ್ ಆ‌ರ್. ತಿಳಿಸಿದ್ದಾರೆ.

ಇ ಕೆವೈಸಿ ಮಾಡಿಸದಿದ್ದರೆ ಏನಾಗುತ್ತದೆ?

ಒಂದು ವೇಳೆ ಪಡಿತರದಾರರು ಈ-ಕೆವೈಸಿ ಅನ್ನು ಆಗಸ್ಟ 31ರೊಳಗೆ ಮಾಡಿಸದಿದ್ದರೆ ಇದು ಸಾಮಾನ್ಯ ಜನರ ಮೇಲೆ ತೀವ್ರ ಪರಿಣಾಮ ಬೀರಬಹುದಾಗಿದ್ದು, ತಮ್ಮ ಪಡಿತರ ಹಂಚಿಕೆಯನ್ನು ಮುಂದಿನ ತಿಂಗಳುಗಳಿಂದ ಪಡೆಯಲು ಸಾಧ್ಯವಾಗದೇ ಹೋಗಬಹುದು. ಅಷ್ಟೇ ಅಲ್ಲ, ‘ಇ-ಕೆವೈಸಿ’ ಮಾಡಿಸದ ಸದಸ್ಯರ ಹೆಸರನ್ನ ರೇಷನ್‌ ಕಾರ್ಡ್‌ನಿಂದ ತೆಗೆಯಲಾಗುತ್ತದೆ.

Advertisement

ಬಿಪಿಎಲ್‌ ಕಾರ್ಡ್‌ ಅನ್ನು ಗೃಹಲಕ್ಷ್ಮಿ ಯೋಜನೆಗೆ ಮಾನದಂಡ ಮಾಡಲಾಗಿದ್ದು ಒಂದು ವೇಳೆ ಕಾರ್ಡ್ ಕೂಡ ರದ್ದಾದರೆ ಈ ಯೋಜನೆ ಸೌಲಭ್ಯ ಕಡಿತವಾಗುವ ಸಾಧ್ಯತೆ ಇದೆ. ಹೀಗಾಗಿ ಜನರು ಈ ಸಮಯದವನ್ನು ಸದುಪಯೋಗ ಪಡಿಸಿಕೊಂಡು ಈ ಕೆವೈಸಿ ಮಾಡಿಸಬೇಕಾದುದು ಅವಶ್ಯಕ.

ಇ ಕೆವೈಸಿ ಏಕೆ ಕಡ್ಡಾಯವಾಗಿದೆ?

BPL card vijayaprabha news
last date for ration card EKYC

ಇ ಕೆವೈಸಿ ಪ್ರಕ್ರಿಯೆ ಮೂಲಕ ಪಡಿತರ ಚೀಟಿದಾರರ ಬಗ್ಗೆ ಸರಿಯಾದ ಮಾಹಿತಿ ಪಡೆಯುವುದು ಹಾಗೂ ಹಗರಣ ತಡೆಯುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಅಲ್ಲದೆ ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದಿದ್ದರೆ, ಒಂದಕ್ಕಿಂತ ಹೆಚ್ಚು ಬಿಪಿಎಲ್ ಕಾರ್ಡ್ ಇದ್ದರೆ & ಸರ್ಕಾರಿ ನೌಕರರು ಈ ಕಾರ್ಡ್ ಹೊಂದಿದ್ದರೆ ಅವರ ಕಾರ್ಡ್ ಗಳನ್ನು ಸರ್ಕಾರದ ನಿಯಮಾನುಸಾರ ರದ್ದು ಮಾಡಲಾಗುತ್ತದೆ. ಒಂದು ವೇಳೆ ಇ ಕೆವೈಸಿ ಆಗದಿದ್ದರೆ ಬಿಪಿಎಲ್ ಪಡಿತರ ಚೀಟಿಯಿಂದ ಹೆಸರು ತೆಗೆದು ಹಾಕಲಾಗುತ್ತದೆ.

ರೇಷನ್ ಕಾರ್ಡ್’ಗೆ ಇ-ಕೆವೈಸಿ ಹೇಗೆ ಮಾಡಿಸಬೇಕು?

ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಸದ್ಯ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದು, ಅದರಲ್ಲಿ ಅನ್ನಭಾಗ್ಯ ಯೋಜನೆ ಸಹ ಪ್ರಮುಖವಾಗಿದೆ. ಆದರೆ, ಈಗ ರೇಷನ್‌ ಕಾರ್ಡ್‌ಗೆ ಇ-ಕೆವೈಸಿ ಸಂಕಷ್ಟ ಎದುರಾಗಿದ್ದು, ಇ-ಕೆವೈಸಿ ಮಾಡಿಸದಿದ್ದರೆ ಕೂಡಲೇ ಮಾಡಿಸಿಕೊಳ್ಳುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಹೀಗಾಗಿ ಇ-ಕೆವೈಸಿಯನ್ನು ಹೇಗೆ ಅಪ್ಡೇಟ್‌ ಮಾಡುವುದು ಹೇಗೆ ಮಾಡುವುದು ಎಂಬ ಮಾಹಿತಿ ಈ ನೋಡಿ.

ರೇಷನ್ ಕಾರ್ಡ್ ಇ ಕೆವೈಸಿ ಎಲ್ಲಿ ಮಾಡಿಸಬೇಕು?

ಈ ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸಲು ಈ ಹಿಂದೆಯೇ ಸೂಚನೆ ನೀಡಲಾಗಿದ್ದು, ಹಾಗಾಗಿ ರೇಷನ್ ಕಾರ್ಡ್ ಹೊಂದಿರುವ ಕುಟುಂಬದ ಮುಖ್ಯಸ್ಥರು ಹಾಗೂ ಈ ಕಾರ್ಡ್ ನಲ್ಲಿರುವ ಪ್ರತಿಯೊಬ್ಬ ಕುಟುಂಬ ಸದಸ್ಯರು ಖುದ್ದಾಗಿ ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಇ ಕೆವೈಸಿ ಮಾಡಿಸಬಹುದಾಗಿದೆ. ಕೆಲವು ಕಡೆ ಕೆವೈಸಿ ಆಗದೇ ಇರುವವರ ಪಟ್ಟಿಯನ್ನು ಆಯಾ ನ್ಯಾಯಬೆಲೆ ಅಂಗಡಿಗಳಲ್ಲಿ ಈಗಾಗಲೇ ಪ್ರದರ್ಶಿಸಲಾಗಿದೆ. ಅಲ್ಲದೆ ಹತ್ತಿರದ ಗ್ರಾಮ ಒನ್ , ಕರ್ನಾಟಕ ಒನ್ ಕೇಂದ್ರದಲ್ಲಿ ಇ-ಕೆವೈಸಿ ಮಾಡಿಕೊಳ್ಳಬಹುದು.

ಇ ಕೆವೈಸಿ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳುವ ವಿಧಾನ

  • ಆಹಾರ ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್ಸೈಟ್ ಗೆ https://ahara.kar.nic.in/ ಹೋಗಿ ನಿಮ್ಮ ಜಿಲ್ಲೆಯ ಡಿವಿಜನ್ ಲಿಂಕ್ ಸೆಲೆಕ್ಟ್ ಮಾಡಬೇಕು.
  • ನಂತರ ಪಡಿತರ ಚೀಟಿ ವಿವರ ಮೇಲೆ ಕ್ಲಿಕ್ ಮಾಡಿ.
  • ನಂತರ ವಿಥೌಟ್ ಒಟಿಪಿ ಸೆಲೆಕ್ಟ್ ಮಾಡಿ ನಿಮ್ಮ ಆರ್ ಸಿ ನಂಬರ್ ನಮೂದಿಸಿ.
  • ಇಲ್ಲಿ ನಿಮ್ಮ ರೇಷನ್ ಕಾರ್ಡ್ ನ ಬಗ್ಗೆ ಮಾಹಿತಿ ತೋರಿಸುತ್ತದೆ.
  • ಅದೇ ಪರದೆ ಮೇಲೆ ಇ ಕೆವೈಸಿ ರಿಮೇನಿಂಗ್ ಜಾಗದಲ್ಲಿ ಮನೆಯ ಸದಸ್ಯರ ಕೆವೈಸಿ ಆಗಿದ್ದರೆ done ಎಂದು ತೋರಿಸುತ್ತದೆ.
  • ಒಂದು ವೇಳೆ eKyc Remaining ಕಾಲಂನಲ್ಲಿ 1 ಎಂದು ತೋರಿಸಿದರೆ ಒಬ್ಬರ ಕೆವೈಸಿ ಬಾಕಿ ಉಳಿದಿದೆ ಎಂದರ್ಥ.

https://vijayaprabha.com/actress-namitha-at-madurai-meenakshi-temple/

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.
Add a comment

Leave a Reply

Your email address will not be published. Required fields are marked *

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement