ಬಿಪಿಎಲ್ ಕಾರ್ಡ್ ದಾರರಿಗೆ ಭರ್ಜರಿ ಸುದ್ದಿ: ಇನ್ಮುಂದೆ ಅಕ್ಕಿಯ ಬದಲು ಈ ದಿನಸಿಗಳು ನೀಡಲು ಚಿಂತನೆ

(ration-card:-) ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಅನ್ನಭಾಗ ಯೋಜನೆಯ ಅಕ್ಕಿಯ ಹಣದ ಬದಲಾಗಿ ತೊಗರಿ ಬೇಳೆ, ತಾಳೆ ಎಣ್ಣೆ, ಸಕ್ಕರೆ, ಉಪ್ಪು ನೀಡಲು ಆಹಾರ ಇಲಾಖೆ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ…

(ration-card:-) ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಅನ್ನಭಾಗ ಯೋಜನೆಯ ಅಕ್ಕಿಯ ಹಣದ ಬದಲಾಗಿ ತೊಗರಿ ಬೇಳೆ, ತಾಳೆ ಎಣ್ಣೆ, ಸಕ್ಕರೆ, ಉಪ್ಪು ನೀಡಲು ಆಹಾರ ಇಲಾಖೆ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಬೇಳೆ, ಎಣ್ಣೆ, ಸಕ್ಕರೆ, ಉಪ್ಪು ಸೇರಿ ಅಡುಗೆಗೆ ಬೇಕಾದ ಉತ್ಪನ್ನಗಳನ್ನು ನೀಡುವುದರಿಂದ ಬಡವರಿಗೆ ಅನುಕೂಲವಾಗುತ್ತದೆ. ಖಾತೆಗೆ ಹಣ ಹಾಕಿದರೆ ಆ ಹಣವನ್ನು ಮನೆಯ ಯಜಮಾನ ಅಥವಾ ಮಕ್ಕಳು ಡ್ರಾ ಮಾಡಿಕೊಂಡು ಇತರ ಖರ್ಚಿಗೆ ಬಳಸಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಫಲಾನುಭವಿಗಳ ಬೇಡಿಕೆಯಂತೆ ಹೆಚ್ಚುವರಿ ಐದು ಕೆಜಿ ಅಕ್ಕಿ ಹಣದ ಬದಲು ದಿನಸಿ ನೀಡಲು ಚಿಂತನೆ ನಡೆಸಿದೆ.

ಒಂದು ಕುಟುಂಬದಲ್ಲಿ ನಾಲ್ವರು ಸದಸ್ಯರಿದ್ದರೆ ಕೆಜಿಗೆ 34 ರೂಪಾಯಿಯಂತೆ ಪ್ರತಿ ಸದಸ್ಯರಿಗೆ 170 ರೂ. ಸೇರಿ 680 ರೂ. ಖಾತೆಗೆ ಪಾವತಿಸಲಾಗುತ್ತಿದೆ. ತೊಗರಿ ಬೇಳೆ, ಸಕ್ಕರೆ, ತಾಳೆ ಎಣ್ಣೆ, ಉಪ್ಪು ನೀಡಲು ಇದಕ್ಕಿಂತ ಕಡಿಮೆ ಹಣ ವೆಚ್ಚವಾಗುತ್ತದೆ. ಈ ನಿಟ್ಟಿನಲ್ಲಿ ಚರ್ಚೆ ನಡೆದು ಹಣಕಾಸು ಇಲಾಖೆ ಅನುಮೋದನೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ರಾಜ್ಯದ ತೊಗರಿ ಮಂಡಳಿ, ಸಕ್ಕರೆ ನಿರ್ದೇಶನಾಲಯ, ಕರ್ನಾಟಕ ಆಯಿಲ್ ಫೆಡರೇಶನ್ ನೊಂದಿಗೆ ಆಹಾರ ಇಲಾಖೆ ಸಭೆ ನಡೆಸಿದ್ದು, ಟೆಂಡರ್ ಮೂಲಕ ಗುಜರಾತ್ ನಿಂದ ಉಪ್ಪು ತರಿಸಿಕೊಳ್ಳಲು ಚಿಂತನೆ ನಡೆದಿದೆ.

Vijayaprabha Mobile App free

ರಾಜ್ಯದಾದ್ಯಂತ ಬಿಪಿಎಲ್ ಪಡಿತರ ಕಾರ್ಡ್ ದಾರರ ಪೈಕಿ ಶೇಕಡ 93 ರಷ್ಟು ಫಲಾನುಭವಿಗಳು 5ಕೆಜಿ ಹೆಚ್ಚುವರಿ ಅಕ್ಕಿ ಹಣದ ಬದಲು ಬೇಳೆ, ಸಕ್ಕರೆ, ಎಣ್ಣೆ, ಉಪ್ಪು ನೀಡಲು ಬೇಡಿಕೆ ಇಟ್ಟಿದ್ದು ಇದಕ್ಕೆ ಸ್ಪಂದಿಸಿ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

 

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.