ಸೋನು ಸೂದ್ ಗೆ ವಿಶ್ವಸಂಸ್ಥೆ ಗೌರವ; ಪ್ರತಿಷ್ಠಿತ ಪ್ರಶಸ್ತಿ ಪಡೆದು, ದಿಗ್ಗಜರ ಸಾಲಿನಲ್ಲಿ ನಿಂತ ಸೋನು ಸೂದ್…!

ಮುಂಬೈ: ಕರೋನಾ ವೈರಸ್ ನಿಂದ ತೊಂದರೆಗೊಳಗಾದ ಲಕ್ಷಾಂತರ ವಲಸೆ ಕಾರ್ಮಿಕರನ್ನು ನಿಸ್ವಾರ್ಥವಾಗಿ ತಮ್ಮ ಮನೆಗಳಿಗೆ ಕಳುಹಿಸಿದ ಮತ್ತು ಸಹಾಯ ಕೇಳಿದ ಎಲ್ಲರಿಗೂ ಸಹಾಯ ಮಾಡಿದ ಖ್ಯಾತ ನಟ ಮತ್ತು ರಿಯಲ್ ಹೀರೊ ಸೋನು ಸೂದ್…

sonu sood-vijayaprabha

ಮುಂಬೈ: ಕರೋನಾ ವೈರಸ್ ನಿಂದ ತೊಂದರೆಗೊಳಗಾದ ಲಕ್ಷಾಂತರ ವಲಸೆ ಕಾರ್ಮಿಕರನ್ನು ನಿಸ್ವಾರ್ಥವಾಗಿ ತಮ್ಮ ಮನೆಗಳಿಗೆ ಕಳುಹಿಸಿದ ಮತ್ತು ಸಹಾಯ ಕೇಳಿದ ಎಲ್ಲರಿಗೂ ಸಹಾಯ ಮಾಡಿದ ಖ್ಯಾತ ನಟ ಮತ್ತು ರಿಯಲ್ ಹೀರೊ ಸೋನು ಸೂದ್ ಅವರನ್ನು ವಿಶ್ವಸಂಸ್ಥೆ ಗೌರವಿಸಿದೆ. ಯುನೈಟೆಡ್ ಶೇಷನ್ಸ್ ಡೆವಲಪಮೆಂಟ್ ಪ್ರೋಗ್ರಾಂ (ಯುಎನ್‌ಡಿಪಿ), ಸೋನು ಸೂದ್‌ಗಾಗಿ ಪ್ರತಿಷ್ಠಿತ ‘ಎಸ್‌ಡಿಜಿ ಸ್ಪೆಷಲ್ ಯುಮರಿಟಿಯನ್ ಯಕ್ಷನ್’ ಪ್ರಶಸ್ತಿಯನ್ನು ಪ್ರಕಟಿಸಿದೆ. ಸೋಮವಾರ ಆನ್‌ಲೈನ್‌ನಲ್ಲಿ ನಡೆದ ಸಮಾರಂಭದ ಮೂಲಕ ಈ ಪ್ರಶಸ್ತಿಯನ್ನು ಸೋನು ಸೂದ್ ಅವರಿಗೆ ನೀಡಲಾಯಿತು.

ಇದಕ್ಕೂ ಮುಂಚೆ ಈ ಪ್ರಶಸ್ತಿಯನ್ನು ಏಂಜಲೀನಾ ಜೋಲೀ, ಡೇವಿಡ್ ಬೆಕ್ಹ್ಯಾಮ್, ಲಿಯೊನಾರ್ಡೊ ಡಿಕಾಪ್ರಿಯೊ, ಎಮ್ಮಾ ವ್ಯಾಟ್ಸನ್, ಲಿಯಾಮ್ ನೀಸನ್, ಕೇಟ್ ಬ್ಲಾಂಕೆಟ್, ಆಂಟೋನಿಯೊ ಬಾಂಡೆರಾಸ್, ನಿಕೋಲಸ್ ಕಿಡ್ಮನ್ ಮತ್ತು ಪ್ರಿಯಾಂಕಾ ಚೋಪ್ರಾ ಅವರು ಪ್ರಶಸ್ತಿಯನ್ನು ಪಡೆದಿದ್ದು, ಅವರ ನಂತರದ ಸ್ತಾನವನ್ನು ನಟ ಸೋನು ಸೂದ್ ಅವರು ಪಡೆದಿದ್ದಾರೆ. ಸಿನಿಮಾ, ಕ್ರೀಡೆ, ಇತ್ಯಾದಿ ಕ್ಷೇತ್ರಗಳ ಹೆಸರು ಮಾಡಿದ ಯುಎಸ್ ನ ವಿವಿಧ ಸಂಸ್ಥೆಗಳಿಂದ ಇದೇ ರೀತಿಯ ಗೌರವಗಳನ್ನು ಪಡೆದಿದ್ದಾರೆ. ಮತ್ತೊಂದೆಡೆ, ಸೋನು ಸೂದ್ ಯುಎಸ್ ಪ್ರಶಸ್ತಿಯನ್ನು ಪಡೆದಿರುವುದಕ್ಕೆ ಸಂತೋಷ ವ್ಯಕ್ತ ಪಡಿಸಿದ್ದಾರೆ.

ಇದು ಪ್ರತಿಷ್ಠಿತ ಗೌರವ. ಯುಎನ್ ಮಾನ್ಯತೆ ಬಹಳ ವಿಶೇಷವಾಗಿದೆ. ಏನನ್ನೂ ನಿರೀಕ್ಷಿಸದೆ ನನ್ನ ದೇಶದ ಜನರಿಗೆ ನಾನು ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡಿದ್ದೇನೆ. ಆ ಸೇವೆಗಳಿಗೆ ಗೌರವ ಮತ್ತು ಪ್ರಶಸ್ತಿ ದೊರಕಿದೆ. 2030 ರ ಹೊತ್ತಿಗೆ ಯುಎನ್‌ಡಿಪಿ ತನ್ನ ರಾಯಭಾರಿಗಳ ಮೂಲಕ ತನ್ನ ಗುರಿಗಳನ್ನು ತಲುಪಲು ನನ್ನ ಸಂಪೂರ್ಣ ಬೆಂಬಲವನ್ನು ನೀಡುತ್ತೇನೆ. ಈ ಗುರಿಗಳನ್ನು ಜಾರಿಗೊಳಿಸಿದರೆ, ಭೂಮಿ ಮತ್ತು ಜೀವಕೋಟಿಗಳಿಗೆ ಅನುಕೂಲವಾಗುತ್ತದೆ ”ಎಂದು ಸೋನು ಸೂದ್ ಹೇಳಿದರು.

Vijayaprabha Mobile App free

ಇದನ್ನು ಓದಿ: ದಲಿತ ಯುವತಿ ಹತ್ಯಾಚಾರ ಪ್ರಕರಣ; ಅತ್ಯಾಚಾರ ಎನ್ನುವುದು ವೈರಸ್ ಗಿಂತ ಹೆಚ್ಚು ಅಪಾಯಕಾರಿ: ಆನಂದ್ ಮಹೀಂದ್ರಾ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.