ಶಂಕಿತ ಪಾಕಿಸ್ತಾನಿ ನುಸುಳುಕೋರ ಬಿಎಸ್‌ಎಫ್ ಪಡೆಗಳ ಗುಂಡಿಗೆ ಬಲಿ!

ಜಲಂಧರ್: ಪಂಜಾಬ್ ಗಡಿಯ ಮೂಲಕ ಭಾರತದೊಳಗೆ ಒಳನುಸುಳಲು ಪ್ರಯತ್ನಿಸಿದ್ದ ಶಂಕಿತ ಪಾಕಿಸ್ತಾನಿ ನುಸುಳುಕೋರನನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ತರ್ನ್ ತರನ್ ಜಿಲ್ಲೆಯ ದಾಲ್ ಗ್ರಾಮದಲ್ಲಿ ಅಂತರರಾಷ್ಟ್ರೀಯ ಗಡಿಯನ್ನು ದಾಟಿ ಭಾರತದೊಳಗೆ…

ಜಲಂಧರ್: ಪಂಜಾಬ್ ಗಡಿಯ ಮೂಲಕ ಭಾರತದೊಳಗೆ ಒಳನುಸುಳಲು ಪ್ರಯತ್ನಿಸಿದ್ದ ಶಂಕಿತ ಪಾಕಿಸ್ತಾನಿ ನುಸುಳುಕೋರನನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ತರ್ನ್ ತರನ್ ಜಿಲ್ಲೆಯ ದಾಲ್ ಗ್ರಾಮದಲ್ಲಿ ಅಂತರರಾಷ್ಟ್ರೀಯ ಗಡಿಯನ್ನು ದಾಟಿ ಭಾರತದೊಳಗೆ ನುಸುಳಲು ಪ್ರಯತ್ನಿಸುವುದನ್ನು ಕರ್ತವ್ಯದಲ್ಲಿದ್ದ ಬಿಎಸ್‌ಫ್ ಸಿಬ್ಬಂದಿ ಗಮಿಸಿದ್ದಾರೆ. ಬಳಿಕ ಆತನಿಗೆ ಎಚ್ಚರಿಕೆ ನೀಡಿದ್ದರು. ಆದರೆ ನುಸುಳುಕೋರನು ಗಡಿಯತ್ತ ಮುನ್ನುಗ್ಗಿದ್ದಾನೆ. ಈ ವೇಳೆ ಬಿಎಸ್‌ಎಫ್ ಪಡೆಯು ಗುಂಡಿ ಕೊಂದಿದ್ದಾರೆ ಎಂದು ಗಡಿ ಭದ್ರತಾ ಪಡೆಯ ವಕ್ತಾರರು ಇಂದು ತಿಳಿಸಿದ್ದಾರೆ.

ಪಾಕಿಸ್ತಾನಿ ನುಸುಳುಕೋರನ ಮೃತದೇಹ ಬಳಿ ಬಂದೂಕು ಪತ್ತೆಯಾಗಿದ್ದು, ಇದು ಅತ್ಯಾಧುನಿಕ ಗನ್ ಆಗಿದೆ. ಇದು ‘ಪಂಪ್ ಆ್ಯಕ್ಷನ್’ ಶಾಟ್‌ಗನ್ ಆಗಿದೆ ಎನ್ನಲಾಗಿದೆ. ಘಟನೆಯಿಂದಾಗಿ ಸ್ಥಳದಲ್ಲಿ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

Vijayaprabha Mobile App free

ಇನ್ನು ಸ್ವಾತಂತ್ರ‍್ಯ ದಿನಾಚರಣೆ ಹಿನ್ನೆಲೆ ಭಾರತ-ಪಾಕಿಸ್ತಾನ ಗಡಿಯಲ್ಲಿ ಹೈ ಅಲರ್ಟ್ ಘೋಷಿಸಿರುವ ಹಿನ್ನೆಲೆ ಭಿಗಿ ಭದ್ರತೆ ಕೈಗೊಳ್ಳಲಾಗಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.