ಭಾರತೀಯ ನೌಕಾಪಡೆಯಿಂದ 741 ಹುದ್ದೆಗಳ ನೇಮಕಾತಿ: ಅರ್ಹ ಅಭ್ಯಥಿಗಳು ಕೂಡಲೇ ಅರ್ಜಿ ಸಲ್ಲಿಸಿ

ಭಾರತೀಯ ನೌಕಾಪಡೆಯಲ್ಲಿ ಅಡಿಗೆ ಸಹಾಯಕ, ಮಲ್ಟಿ ಟಾಸ್ಕಿಂಗ್ ಸ್ಟಾಪ್ ಸೇರಿದಂತೆ ವಿವಿಧ ಒಟ್ಟು 741 ಹುದ್ದೆಗಳಿಗೆ ನೇಮಕಾತಿ(Indian Navy Recruitment 2024) ಮಾಡಿಕೊಳ್ಳಲು ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ನೇಮಕಾತಿಗೆ ಅರ್ಜಿ ಸಲ್ಲಿಸಲು…

ಭಾರತೀಯ ನೌಕಾಪಡೆಯಲ್ಲಿ ಅಡಿಗೆ ಸಹಾಯಕ, ಮಲ್ಟಿ ಟಾಸ್ಕಿಂಗ್ ಸ್ಟಾಪ್ ಸೇರಿದಂತೆ ವಿವಿಧ ಒಟ್ಟು 741 ಹುದ್ದೆಗಳಿಗೆ ನೇಮಕಾತಿ(Indian Navy Recruitment 2024) ಮಾಡಿಕೊಳ್ಳಲು ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ.

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಜುಲೈ 20 ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದ್ದು ಅರ್ಜಿ ಸಲ್ಲಿಸಲು ಆಗಸ್ಟ್ 2, 2024ರವರೆಗೆ ಅವಕಾಶ ನೀಡಲಾಗಿದ್ದು ಅಭ್ಯರ್ಥಿಗಳ ಸಂಪೂರ್ಣ ಅರ್ಹತೆಗಳನ್ನು ತಿಳಿದುಕೊಂಡು ನಿಗದಿತ ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಿ.

ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹತೆಗಳು, ಅರ್ಜಿ ಸಲ್ಲಿಸುವ ಲಿಂಕ್ ಹಾಗೂ ಇತರೆ ಅಗತ್ಯ ಮಾಹಿತಿಗಳನ್ನು ಕೆಳಗಿನ ಲೇಖನದಲ್ಲಿ ನೀಡಲಾಗಿದ್ದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಪೂರ್ಣ ಅರ್ಹತೆಗಳನ್ನು ತೆಗೆದುಕೊಂಡು ನಿಗದಿತ ಕೊನೆಯ ದಿನಾಂಕದ ಒಳಗಾಗಿ ಅರ್ಜಿ ಸಲ್ಲಿಸಿ.

Vijayaprabha Mobile App free

ನೇಮಕಾತಿ ವಿವರ : Indian Navy Recruitment 2024 

• ನೇಮಕಾತಿ ಇಲಾಖೆ : ಭಾರತೀಯ ನೌಕಾಪಡೆ

• ಹುದ್ದೆಗಳ ಸಂಖ್ಯೆ : 741

• ಉದ್ಯೋಗ ಸ್ಥಳ : ಭಾರತ ದೇಶಾದ್ಯಂತ

ನೌಕಾಪಡೆಯಲ್ಲಿ ಖಾಲಿ ಹುದ್ದೆಗಳ ವಿವರ : 

ಭಾರತೀಯ ನೌಕಾಪಡೆಯಲ್ಲಿ ಒಟ್ಟು 444 ಫೈಯರ್ ಮ್ಯಾನ್ (Fire man), ಟ್ರೇಡ್ಸ್ ಮ್ಯಾನ್ ಮೇಟ್ 151 ಹುದ್ದೆಗಳು ಹಾಗೂ ಇತರೆ ವಿವಿಧ  ಹುದ್ದೆಗಳು ಸೇರಿದಂತೆ ಒಟ್ಟು 741 ಹುದ್ದೆಗಳಿಗೆ ಈ ಒಂದು ನೇಮಕಾತಿ ನಡೆಯುತ್ತಿದೆ.

ಶೈಕ್ಷಣಿಕ ವಿದ್ಯಾರ್ಹತೆಗಳು : Educational Qualification 

ನೌಕಾಪಡೆಯ ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ, ದ್ವಿತೀಯ ಪಿಯುಸಿ, ಸಂಬಂಧಪಟ್ಟ ವಿಷಯದಲ್ಲಿ ಪದವಿ, ಐಟಿಐ ಅರ್ಹತೆಗಳನ್ನು ಹೊಂದಿರುವವರು ಅರ್ಜಿ ಸಲ್ಲಿಸಬಹುದು.

Age limit for this job-ವಯೋಮಿತಿ – ಅರ್ಜಿ ಸಲ್ಲಿಸುವವರು ಕನಿಷ್ಠ 18ರಿಂದ ಗರಿಷ್ಠ 27 ವರ್ಷದ ವಯೋಮಿತಿಯಲ್ಲಿರಬೇಕು.

Selection procedure: ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ನೂರು ಅಂಕಗಳ ಆನ್ಲೈನ್ ಪರೀಕ್ಷೆ ನಡೆಸಿ ನಂತರದಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ದೈಹಿಕ ಪರೀಕ್ಷೆ ಹಾಗೂ ದಾಖಲಾತಿ ಪರಿಶೀಲನೆ ಮುಖಾಂತರ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

How to Apply-ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳು ಕೆಳಗೆ ನೀಡಿರುವ Apply Now ಬಟನ್ ಮೇಲೆ ಕ್ಲಿಕ್ ಮಾಡಿ, ಭಾರತೀಯ ನೌಕಾಪಡೆ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

Useful Website links-ನೇಮಕಾತಿಯ ಪ್ರಮುಖ ಲಿಂಕುಗಳು: 

• ಅರ್ಜಿ ಸಲ್ಲಿಸಲು ಲಿಂಕ್- Apply now 

• ಅಧಿಸೂಚನೆ : ಡೌನ್ಲೋಡ್

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.