ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ: 18ನೇ ಕಂತಿನ ಅರ್ಹ ಪಟ್ಟಿ ಬಿಡುಗಡೆ

(Pmkisan) ಕೇಂದ್ರ ಸರ್ಕಾರದ ಯೋಜನೆಯಲ್ಲಿ ಒಂದಾದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ವರ್ಷಕ್ಕೆ ಮೂರು ಕಂತಿನಲ್ಲಿ ತಲಾ 2000 ಹಣವನ್ನು ಅರ್ಹ ರೈತರ ಖಾತೆಗೆ ಜಮಾ ಮಾಡುತ್ತಿದೆ. ಈಗಾಗಲೇ 17 ಕಂತಿನ ಹಣವನ್ನು…

(Pmkisan) ಕೇಂದ್ರ ಸರ್ಕಾರದ ಯೋಜನೆಯಲ್ಲಿ ಒಂದಾದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ವರ್ಷಕ್ಕೆ ಮೂರು ಕಂತಿನಲ್ಲಿ ತಲಾ 2000 ಹಣವನ್ನು ಅರ್ಹ ರೈತರ ಖಾತೆಗೆ ಜಮಾ ಮಾಡುತ್ತಿದೆ. ಈಗಾಗಲೇ 17 ಕಂತಿನ ಹಣವನ್ನು ಅರ್ಹ ರೈತರ ಖಾತೆಗೆ ಜಮಾ ಮಾಡಲಾಗಿದೆ. ಇದೀಗ ರೈತರು 18 ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. 18 ನೇ ಕಂತಿನ ಅರ್ಹರ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಲಿಸ್ಟ್ ನಲ್ಲಿ ನಿಮ್ಮ ಹೆಸರಿದ್ಯಾ ಎಂದು ಚೆಕ್ ಮಾಡಿಕೊಳ್ಳಿ.

ಇನ್ನು ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿಕೊಳ್ಳುವ ರೈತರು ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ ಸೈಟ್ ಮುಖಾಂತರ ನೊಂದಾಯಿಸಬಹುದು. ಅಥವಾ ನಿಮ್ಮ ಗ್ರಾಮ ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು.

ಪಿಎಂ ಕಿಸಾನ್ ಯೋಜನೆಯ ವೆಬ್ ಸೈಟ್ ವಿಳಾಸ:

Vijayaprabha Mobile App free

* ಕೇಂದ್ರ ಸರ್ಕಾರದ pmkisan.gov.in ಜಾಲತಾಣಕ್ಕೆ ಭೇಟಿ ನೀಡಿ

* ಅಲ್ಲಿ NEW FARMER REGISTRATION ಎಂಬ ಐಕಾನ್ ಕ್ಲಿಕ್ ಮಾಡಿ,

* ಆಗ ತೆರೆಯಲ್ಪಡುವ NEW FARMER REGISTRATION FORM ನಲ್ಲಿ ತಮ್ಮ ವಿವರಗಳನ್ನು ದಾಖಲಿಸಿ ಹೆಸರನ್ನು ನೋಂದಾಯಿಸಬಹುದು.

ಅದು ಸಾಧ್ಯವಾಗಲಿದ್ದರೆ, ಪ್ರತಿ ಜಿಲ್ಲೆಯಲ್ಲಿ ನಿಯೋಜಿಸಲಾಗಿರುವ ಕಾಮನ್ ಸರ್ವೀಸ್ ಸೆಂಟರ್ ಗಳಲ್ಲಿ (ಸಿ.ಎಸ್.ಸಿ.) ತಮ್ಮ ಹೆಸರನ್ನು ನೋಂದಾಯಿಸಬಹುದು.

ರೈತರಾಗಿದ್ದರೂ ಇವರು ಈ ಯೋಜನೆಗೆ ಅರ್ಹರಲ್ಲ:

* ಯಾವುದೇ ಸಾಂವಿಧಾನಿಕ ಹುದ್ದೆಯಲ್ಲಿ ಇರುವವರು.

* ಸೇವೆಯಲ್ಲಿರುವ ಅಥವಾ ನಿವೃತ್ತರಾಗಿರುವ ಸರ್ಕಾರಿ ಅಧಿಕಾರಿಗಳು ಅಥವಾ ಉದ್ಯೋಗಿಗಳು

* ಕೇಂದ್ರ ಅಥವಾ ರಾಜ್ಯ ಸಚಿವಾಲಯಗಳು, ಕಚೇರಿಗಳು ಹಾಗೂ ಇಲಾಖೆಗಳಲ್ಲಿ ಹಾಗೂ ಅವುಗಳ ಅಧೀನದಲ್ಲಿರುವ ಸಂಸ್ಥೆಗಳ ಸಿಬ್ಬಂದಿ

* ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾರ್ವಜನಿಕ ಸಂಸ್ಥೆಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಕಚೇರಿ, ಸ್ವಾಯತ್ತ ಸಂಸ್ಥೆ ಅಥವಾ ಅವುಗಳ ಅಧೀನದಲ್ಲಿರುವ ಸ್ಥಳೀಯ ಸಂಸ್ಥೆಗಳಲ್ಲಿ, ಕಚೇರಿಗಳಲ್ಲಿನ ಸಿಬ್ಬಂದಿ (ಬಹು ಕಾರ್ಯೋದ್ದೇಶದ ಸಿಬ್ಬಂದಿ, 4ನೇ ದರ್ಜೆಯ ನೌಕರರು, ಗ್ರೂಪ್ ಡಿ ನೌಕರರನ್ನು ಹೊರತುಪಡಿಸಿ).

ನೀವು ಫಲಾನುಭವಿಗಳೇ ಎಂಬುದನ್ನು ಪರೀಕ್ಷಿಸಲು ಹೀಗೆ ಮಾಡಿ:

* ಪಿಎಂ ಕಿಸಾನ್ ಅಧಿಕೃತ ಜಾಲತಾಣಕ್ಕೆ pmkisan.gov.in ಭೇಟಿ ನೀಡಿ.

* Farmers corner ಅಡಿಯಲ್ಲಿ Beneficiary List ಕ್ಲಿಕ್ ಮಾಡಿ.

* ರಾಜ್ಯ, ಜಿಲ್ಲೆ, ತಾಲೂಕು, ಬ್ಲಾಕ್, ಹಳ್ಳಿಯನ್ನು ಆಯ್ಕೆ ಮಾಡಿ.

* ಆನಂತರ, Get Report ಟ್ಯಾಬ್ ಒತ್ತಿ. ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ 18 ಕಂತಿನ ಹಣ ಜಮಾ ಆಗುತ್ತದೆ. Pmkisan: PM ಕಿಸಾನ್ ಯೋಜನೆ:18ನೇ ಕಂತಿನ ಅರ್ಹ ಪಟ್ಟಿ ಬಿಡುಗಡೆ

 

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.