ಅಚ್ಚ ಕನ್ನಡದ ನಿರೂಪಕಿ ಅಪರ್ಣಾ ಬಗ್ಗೆ ನಿಮಗೆಷ್ಟು ಗೊತ್ತು? ಕೊನೆಗೂ ಈಡೇರಲಿಲ್ಲ ಅಪರ್ಣಾ ಅವರ ಆ ಆಸೆ!

Kannada narrator Aparna : ಚಲನಚಿತ್ರ ನಟಿ, ರೇಡಿಯೋ ಜಾಕಿ, ಕಿರುತೆರೆ ಕಲಾವಿದೆ ಮತ್ತು ನಿರೂಪಕಿ ಅಪರ್ಣಾ ಮೂಲತಃ ಚಿಕ್ಕಮಗಳೂರಿನ ಪಂಚನಹಳ್ಳಿಯವರು. ತಂದೆ ಕೆ. ಎಸ್‌.ನಾರಾಯಣಸ್ವಾಮಿ ಕನ್ನಡ ಪ್ರಭ ಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿದ್ದರು. ವಾಸ್ತುಶಿಲ್ಪಿ…

Kannada narrator Aparna vijayaprabha news1

Kannada narrator Aparna : ಚಲನಚಿತ್ರ ನಟಿ, ರೇಡಿಯೋ ಜಾಕಿ, ಕಿರುತೆರೆ ಕಲಾವಿದೆ ಮತ್ತು ನಿರೂಪಕಿ ಅಪರ್ಣಾ ಮೂಲತಃ ಚಿಕ್ಕಮಗಳೂರಿನ ಪಂಚನಹಳ್ಳಿಯವರು. ತಂದೆ ಕೆ. ಎಸ್‌.ನಾರಾಯಣಸ್ವಾಮಿ ಕನ್ನಡ ಪ್ರಭ ಪತ್ರಿಕೆಯಲ್ಲಿ ಪುರವಣಿ ಸಂಪಾದಕರಾಗಿದ್ದರು. ವಾಸ್ತುಶಿಲ್ಪಿ ಹಾಗೂ ಕವಿ ನಾಗರಾಜ ವಸ್ತಾರೆ ಇವರ ಪತಿ.

ನಮ್ಮ ಮೆಟ್ರೋ ಅನೌನ್ಸ್​ಮೆಂಟ್​ ಸೇರಿದಂತೆ ಅನೇಕ ಪ್ರಕಟಣೆಗಳಿಗೆ ಧ್ವನಿ ನೀಡಿದ್ದ ಅಪರ್ಣಾ ಅಚ್ಚಕನ್ನಡ ಮಾತಾಡುವ ನಿರೂಪಕಿ ಆಗಿ ಜನಪ್ರಿಯರಾಗಿದ್ದರು. ನಟಿಯಾಗಿದ್ದ ಇವರನ್ನು ಜನ ಹೆಚ್ಚಾಗಿ ಗುರುತಿಸಿದ್ದು ಅಚ್ಚಗನ್ನಡದ ನಿರೂಪಕಿಯಾಗಿ.

ಇದನ್ನು ಓದಿ: ಕನ್ನಡದ ಖ್ಯಾತ ನಿರೂಪಕಿ,ನಟಿ ಅಪರ್ಣಾ ಇನ್ನಿಲ್ಲ

Vijayaprabha Mobile App free

ಅಪರ್ಣಾ ಅವರ 7 ಅಪೂರ್ವ ದಾಖಲೆಗಳು ಇಲ್ಲಿವೆ

Kannada narrator Aparna vijayaprabha news2

ಕನ್ನಡಿಗರ ಮನ ಗೆದ್ದಿದ್ದ ನಿರೂಪಕಿ ಅಪರ್ಣಾ ಅವರಿಂದು ಚಿರನಿದ್ರೆಗೆ ಜಾರಿದ್ದಾರೆ. ಹಲವು ತಿಂಗಳಿನಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಪರ್ಣಾ ಅವರು ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಇಹಲೋಕ ತ್ಯಜಿಸಿದ್ದಾರೆ. ಆದ್ರೆ ಅವರು ಅಪರೂಪದ 7 ದಾಖಲೆಗಳು ಇಲ್ಲಿವೆ.

  • 1993ರಲ್ಲಿ ಆಲ್ ಇಂಡಿಯಾ ರೇಡಿಯೋದಲ್ಲಿ ರೇಡಿಯೋ ಜಾಕಿ
  • 1998ರಲ್ಲಿ ದೀಪಾವಳಿ ಪ್ರಯುಕ್ತ 8 ಗಂಟೆಗಳ ಕಾಲ ನಿರೂಪಣೆ
  • 90ರ ದಶಕದಿಂದ ಶುರುವಾಗಿ 7000ಕ್ಕೂ ಅಧಿಕ ಕಾರ್ಯಕ್ರಮ
  • ಬಿಗ್ ಬಾಸ್ ಕನ್ನಡ ಸೀಸನ್-1ರ ಸ್ಪರ್ಧಿ ಆಗಿ 41 ದಿನ ರಂಜನೆ
  • 2015ರ ನಂತ್ರ ಮಜಾ ಟಾಕೀಸ್​​ನಲ್ಲಿ ವರಲಕ್ಷ್ಮೀಯಾಗಿ ನಟನೆ
  • 20 ವರ್ಷಗಳ ಬಳಿಕ ‘ಗ್ರೇ ಗೇಮ್ಸ್’ ಸಿನಿಮಾಕ್ಕೆ ಬಣ್ಣ ಹಚ್ಚಿದ್ರು
  • ನಮ್ಮ ಮೆಟ್ರೋ, KSRTC, BSNL ಮತ್ತು ಏರ್​ಟೆಲ್​ಗೂ ಧ್ವನಿ

ಧ್ವನಿಯ ಮೂಲಕವೇ ದಾಖಲೆ ಬರೆದಿದ್ದ ಖ್ಯಾತ ನಿರೂಪಕಿ ಅಪರ್ಣಾ

Kannada narrator Aparna vijayaprabha news1

ಕರ್ನಾಟಕದಲ್ಲಿ ದೂರದರ್ಶನ ಆರಂಭವಾದಗಿನಿಂದಲೂ ದೂರದರ್ಶನದ ಜೊತೆಗೆ ಅಪರ್ಣಾ ನಂಟು ಬಿಗಿಯಾಗಿತ್ತು. 90ರ ದಶಕದಲ್ಲಿ ಚಂದನದಲ್ಲಿ ಮೂಡಿಬಂದ ಹಲವು ಕಾರ್ಯಕ್ರಮಗಳನ್ನು ನಿರೂಪಿಸಿದ್ದರು. ನಂತರ ಭಾರತ ಸರ್ಕಾರದ ವಿವಿಧ ಭಾರತಿಯಲ್ಲಿ ರೇಡಿಯೋ ಜಾಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. 1998ರಲ್ಲಿ ನಡೆದ ದೀಪಾವಳಿ ಕಾರ್ಯಕ್ರವೊಂದನ್ನು ಎಂಟು ಗಂಟೆಗಳ ನಿರೂಪಣೆ ಮಾಡಿ ದಾಖಲೆ ಬರೆದಿದ್ದರು. ಸರ್ಕಾರಿ ಸಮಾರಂಭ ಸೇರಿದಂತೆ ಕನ್ನಡದ ಪ್ರಮುಖ ವಾಹಿನಿಗಳ ಕಾರ್ಯಕ್ರಮಗಳಲ್ಲಿ ಕನ್ನಡದಲ್ಲಿ ಸೊಗಸಾಗಿ ನಿರೂಪಣೆ ಮಾಡುತ್ತಾ ನಾಡಿನ ಮನೆಮಾತಾಗಿದ್ದರು.

ಇದನ್ನು ಓದಿ: ನೀಟ್‌-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ:ಕಿಂಗ್‌ಪಿನ್ ರಾಕೇಶ್ ರಂಜನ್ ಅರೆಸ್ಟ್

ದೂರದರ್ಶನದಲ್ಲಿ ತಮ್ಮದೇ ಆದ ‍ಛಾಪು ಮೂಡಿಸಿದ್ದ ಅಪರ್ಣಾ

Kannada narrator Aparna vijayaprabha news

ದೂರದರ್ಶನದಲ್ಲಿ ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದ ಅಪರ್ಣಾ ರಂಗಭೂಮಿ ಕಲಾವಿದೆಯಾಗಿದ್ದರು. 1989ರಲ್ಲಿ ನಿರೂಪಕಿಯಾಗಿ ಟೆಲಿವಿಷನ್ ಸೇರಿದ್ದ ಇವರು 1984ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ರ ಮಸಣದ ಹೂವು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ಇನ್ಸ್‌ಪೆಕ್ಟರ್ ವಿಕ್ರಮ್, ನಮ್ಮೂರ ರಾಜ, ಒಂದಾಗಿ ಬಾಳು ಮೊದಲಾದ ಚಿತ್ರಗಳಲ್ಲಿ ನಟಿಸಿದ ನಂತರ ಮೂಡಲ ಮನೆ, ಮುಕ್ತ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದರು. 2013ರಲ್ಲಿ ಕನ್ನಡದ ಬಿಗ್ ಬಾಸ್, 2015ರಲ್ಲಿ ಮಜಾ ಟಾಕೀಸ್ ಕಾರ್ಯಕ್ರಮದ ಮೂಲಕ ಜನರನ್ನು ಮತ್ತಷ್ಟು ರಂಜಿಸಿದ್ದರು.

ದೊಡ್ಮನೆಯಲ್ಲಿ ಕನ್ನಡದ ಕಂಪು ಹರಡಿದ್ದ ಅಪರ್ಣಾ

ಅಚ್ಚಗನ್ನಡವನ್ನು ಸ್ವಚ್ಛವಾಗಿ ಆಡುವಾಕೆಯೆಂದೇ ಹೆಸರು ಮಾಡಿದ್ದ ಅಪರ್ಣಾ 2013ರಲ್ಲಿ ಕನ್ನಡದ ಅತಿದೊಡ್ಡ ರಿಯಾಲಿಟಿ ಷೋ ಬಿಗ್ ಬಾಸ್ ನ ಮೊದಲ ಸೀಸನ್ ನಲ್ಲಿ ಭಾಗವಹಿಸಿದ್ದರು. ವಿಜಯರಾಘವೇಂದ್ರ, ಅರುಣ್ ಸಾಗರ್, ಅನುಶ್ರೀ, ನಿಖಿತಾ ಅವರಿದ್ದಂತಹ ಬಿಗ್ ಬಾಸ್ ಮನೆಯಲ್ಲಿ ಅವರ ಸ್ಪಷ್ಟ ಕನ್ನಡ ಬಳಕೆ, ಉಚ್ಛಾರ, ಏರಿಳಿತ ಎಲ್ಲವೂ ಅದ್ಭುತವಾಗಿತ್ತು. ಇವರ ಮಾತುಗಳು ಇತರೆ ಸ್ಪರ್ದಿಗಳಿಗೆ ಮತ್ತು ಕಾರ್ಯಕ್ರಮ ವೀಕ್ಷಿಸುತ್ತಿದ್ದ ವೀಕ್ಷಕರಿಗೂ ಕನ್ನಡ ಮಾತನಾಡಲು ಪ್ರೇರೇಪಿಸುವಂತಿತ್ತು.

ಇದನ್ನು ಓದಿ: ಖಾಲಿ ಹೊಟ್ಟೆಯಲ್ಲಿ ಈ ‘ಎಲೆ’ ತಿಂದ್ರೆ ಸಾಕು, ಅತಿಸಾರ, ಕ್ಯಾನ್ಸರ್ ಸಮಸ್ಯೆ ದೂರ.!

ಛೇ..ಕೊನೆಗೂ ಈಡೇರಲಿಲ್ಲ ಅಪರ್ಣಾ ಅವರ ಆ ಆಸೆ!

Kannada narrator Aparna vijayaprabha news3

ಅಪರ್ಣಾ ಅವರಿಗೆ ಕ್ಯಾನ್ಸರ್‌ ಬಂದಿರೋ ವಿಚಾರ ತಿಳಿದಿದ್ದರೂ ಒಂದು ಕೊನೆಯಾಸೆ ಇತ್ತಂತೆ. ಆದರೆ, ಅದನ್ನು ಈಡೇರಿಸುವ ಮುನ್ನವೇ ನಮ್ಮನ್ನೆಲ್ಲ ಬಿಟ್ಟು ಬಾರದ ಲೋಕಕ್ಕೆ ಹೋಗಿದ್ದಾರೆ. ಹೌದು ಅಪರ್ಣಾ ಅವರು ಒಂದು ಕನಸು ಕಂಡಿದ್ದರು. ನಿರೂಪಣಾ ಶಾಲೆಯೊಂದನ್ನು ಆರಂಭಿಸುವ ಗುರಿಯಿಟ್ಟುಕೊಂಡಿದ್ದ ಅವರು, ತಮ್ಮ ಗೆಳೆಯರ ಬಳಿ ಈ ಆಸೆಯನ್ನು ಅವರು ಹಂಚಿಕೊಂಡಿದ್ದರು. ಆದರೆ, ಆ ಆಸೆ ಕೊನೆಗೂ ಈಡೇರಲೇ ಇಲ್ಲ. ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಬಿಟ್ಟು ಅಪರ್ಣಾ ಇಹಲೋಕ ತ್ಯಜಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.