(KEF Scholarships) SSLC ಪಾಸ್ ಆದ ವಿದ್ಯಾರ್ಥಿಗಳಿಗೆ 2024-24 ನೇ ಸಾಲಿನ ಕೋಟಕ್ ಜೂನಿಯರ್ ಸ್ಕಾಲರ್ಶಿಪ್ ನೀಡುತ್ತಿದ್ದು, ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ.
ಕೋಟಕ್ ಮಹೀಂದ್ರಾ ಗ್ರೂಪ್ ಕಂಪನೀಸ್ನಿಂದ ಶಿಕ್ಷಣ ಮತ್ತು ಜೀವನೋಪಾಯದ ಕುರಿತು ಸಿಎಸ್ ಆರ್ ಉಪಕ್ರಮದ ಅಡಿಯಲ್ಲಿ, ಕೋಟಕ್ ಎಜುಕೇಶನ್ ಫೌಂಡೇಶನ್ ಮುಂಬೈ ಮೆಟ್ರೋಪಾಲಿಟನ್ ಪ್ರದೇಶದೊಳಗಿನ 10ನೇ ತರಗತಿ ಉತ್ತೀರ್ಣರಾದ ವಿದ್ಯಾರ್ಥಿಗಳಿಂದ ಈ ಸ್ಕಾಲರ್ ಶಿಪ್ ಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಅರ್ಹತೆ ಕುರಿತು ಈ ಕೆಳಗೆ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಅರ್ಹತೆ ಏನಿರಬೇಕು?;
* ಅರ್ಜಿದಾರರು ತಮ್ಮ 2024 ರ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ 85%ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿರಬೇಕು.
* 2024-25ರ ಶೈಕ್ಷಣಿಕ ವರ್ಷಕ್ಕಾಗಿ ಮುಂಬೈ ಮೆಟ್ರೋಪಾಲಿಟನ್ ರೀಜಿಯನ್ (ಎಂಎಂಆರ್) ನಲ್ಲಿ ಕಲೆ, ವಾಣಿಜ್ಯ ಅಥವಾ ವಿಜ್ಞಾನ ವಿಭಾಗಗಳಿಗಾಗಿ ಜೂನಿಯರ್ ಕಾಲೇಜು/ಶಾಲೆಗಳಲ್ಲಿ 11ನೇ ತರಗತಿಗೆ ಪ್ರವೇಶ ಪಡೆದಿರಬೇಕು.
* ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು 3,20,000 ಅಥವಾ ಕಡಿಮೆ ಆಗಿರಬೇಕು.
* ವಿದ್ಯಾರ್ಥಿಗಳು ಮುಂಬೈ ಮೆಟ್ರೋಪಾಲಿಟನ್ ರೀಜಿಯನ್ (ಎಂಎಂಆರ್)ನೊಳಗೆ ವಾಸಿಸುವವರಾಗಿರಬೇಕು.
ಎಷ್ಟು ಸ್ಕಾಲರ್ ಶಿಪ್ ಲಭ್ಯ:
ತಿಂಗಳಿಗೆ 3,500
ಅರ್ಜಿ ಸಲ್ಲಿಕೆ ಹೇಗೆ?;
ವಿದ್ಯಾರ್ಥಿಗಳು www.b4s.in/nwmd/KJSP2 ಈ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
15-07-2024