ಅರ್ಹ ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಯೋಜನೆಯ(Guarantee Yojana-2024) ಹಣ ಬಿಡುಗಡೆ ಕುರಿತು ಸಾರ್ವಜನಿಕ ವಲಯದಲಿ ಉದ್ಬವಿಸಿರುವ ಗೊಂದಲಕ್ಕೆ ಸೂಕ್ತ ಸ್ಪಷ್ಟನೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಪ್ರತಿ ತಿಂಗಳ ರೂ 2,000 ಅರ್ಥಿಕ ನೆರವನ್ನು ಅರ್ಹ ಅರ್ಜಿದಾರರ ಖಾತೆಗೆ ನೇರ ನಗದು ವರ್ಗಾವಣೆ(DBT) ಮೂಲಕ ಜಮಾ ಮಾಡುವ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನೀಡಿರುವ ಸ್ಪಷ್ಟನೆ ವಿವರವನ್ನು ಈ ಲೇಖನದಲ್ಲಿ ಪ್ರಕಟಿಸಲಾಗಿದೆ.
ಸಾರ್ವಜನಿಕ ವಲಯದಲ್ಲಿ ಇನ್ನು ಮುಂದೆ ಗ್ಯಾರಂಟಿ ಯೋಜನೆಯ ಹಣ ಬರುವುದಿಲ್ಲ! ಗ್ಯಾರಂಟಿ ಯೋಜನೆಗಳು ಸ್ಥಗಿತವಾಗುತ್ತವೆ, ಸರಕಾರದ ಬಳಿ ಈ ಯೋಜನೆಗಳಿಗೆ ಬಳಕೆ ಮಾಡಲು ಹಣದ ಕೊರತೆಯಿದೆ ಎನ್ನುವ ಗೊಂದಲಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.