ಪ್ರತಿ ದಿನ ಹಾಲು ಕುಡಿಯುವುದರಿಂದ ಸಿಗುವ ಅದ್ಬುತ ಉಪಯೋಗಗಳೇನು ಗೊತ್ತೇ? ಇಲ್ಲಿದೆ ಮಾಹಿತಿ

ಹಾಲು ಕುಡಿಯುವುದರಿಂದ ಆಗುವ ಅದ್ಬುತ ಉಪಯೋಗಗಳು:- 1) ಹಸುವಿನ ಹಾಲನ್ನು ಮಣ್ಣಿನ ಪಾತ್ರೆಯಲ್ಲಿ ಪಟ್ಟುಕೊಂಡು ಕುಡಿದರೆ ವೀರ್ಯ ವೃದ್ಧಿಯಾಗುತ್ತದೆ. 2) ಹಾಲನ್ನು ನಿತ್ಯವೂ ಉಪಯೋಗಿಸುವುದರಿಂದ ಪಿತ್ತಶಮನವಾಗುತ್ತದೆ. 3) ಕಂಚಿನ ಪಾತ್ರೆಯಲ್ಲಿ ಹಸುವಿನ ಹಾಲನ್ನು ಇಟ್ಟು…

milk

ಹಾಲು ಕುಡಿಯುವುದರಿಂದ ಆಗುವ ಅದ್ಬುತ ಉಪಯೋಗಗಳು:-

1) ಹಸುವಿನ ಹಾಲನ್ನು ಮಣ್ಣಿನ ಪಾತ್ರೆಯಲ್ಲಿ ಪಟ್ಟುಕೊಂಡು ಕುಡಿದರೆ ವೀರ್ಯ ವೃದ್ಧಿಯಾಗುತ್ತದೆ.

2) ಹಾಲನ್ನು ನಿತ್ಯವೂ ಉಪಯೋಗಿಸುವುದರಿಂದ ಪಿತ್ತಶಮನವಾಗುತ್ತದೆ.

Vijayaprabha Mobile App free

3) ಕಂಚಿನ ಪಾತ್ರೆಯಲ್ಲಿ ಹಸುವಿನ ಹಾಲನ್ನು ಇಟ್ಟು ಕುಡಿದರೆ ತ್ರಿದೋಷಗಳು ನಾಶವಾಗುವುದು.

4) ಕುರಿಯ ಹಾಲಿಗೆ ನಿಂಬೆ ರಸವನ್ನು ಬೆರೆಸಿ ಕುಡಿದರೆ ರಕ್ತಭೇದಿ ನಿಲ್ಲುತ್ತದೆ.

5) ಬಾದಾಮಿ ಬೀಜಗಳನ್ನು ಹಾಲಿನಲ್ಲಿ ಅರೆದು ಹತ್ತಿಯ ಉಂಡೆಯನ್ನು ಅದ್ದಿ ಮೊಡವೆಗಳ ಮೇಲೆ ಉಜ್ಜುವುದರಿಂದ ಮೊಡವೆಗಳು ಇಲ್ಲವಾಗಿ ಮುಖ ಸುಂದರವಾಗುವುದು.

6) ಬಿಸಿ ಹಾಲಿಗೆ ಕಾಳು ಮೆಣಸಿನ ಪುಡಿ ಮತ್ತು ಕಲ್ಲು ಸಕ್ಕರೆ ಪುಡಿಯನ್ನು ಸೇರಿಸಿ ಕುಡಿದರೆ ನೆಗಡಿ ಗುಣವಾಗುವುದು.

7) ಕತ್ತೆಯ ಹಾಲನ್ನು ದಿನಕ್ಕೆ ಒಂದು ಬಾರಿ ಎಳೆಯ ಮಕ್ಕಳಿಗೆ ಕುಡಿಸಿದರೆ ಕೆಮ್ಮು ವಾಸಿಯಾಗುವುದು.

8) ಚಳಿಗಾಲದಲ್ಲಿ ಮುಖ ಒಡೆದಿದ್ದರೆ ಹಾಲು ಸೇರಿಸಿದ ನೀರಿನಲ್ಲಿ ಮುಖ ತೊಳೆಯುತ್ತಿದ್ದರೆ ಗುಣವಾಗುತ್ತದೆ.

9) ಒಂದು ಬಟ್ಟಲು ಹಾಲಿಗೆ ಅರಿಶಿನ ಪುಡಿ, ಜೇನುತುಪ್ಪ ಬೆರೆಸಿಕೊಂಡು ಕುಡಿದರೆ ಬಾಯಾರಿಕೆ ಇಲ್ಲದಂತಾಗುವುದು.

10) ಹಸುವಿನ ಹಾಲು ಮತ್ತು ಮೊಲೆ ಹಾಲಿನಲ್ಲಿ ಸ್ವಲ್ಪ ಶುಂಠಿಯನ್ನು ತೇದು ಹಣೆಗೆ ಪಟ್ಟು ಹಾಕಿಕೊಂಡರೆ ತಲೆನೋವು ವಾಸಿಯಾಗುವುದು.

11) ಹಾಲಿನ ಕೆನೆಯನ್ನು ಮುಖ, ಅಂಗೈ, ಅಂಗಾಲುಗಳು ಹಚ್ಚಿ ಚೆನ್ನಾಗಿ ಉಜ್ಜಿದರೆ ಚರ್ಮದ ಮೇಲಿನ ಕಲೆಗಳು ಮತ್ತು ಮೊಡವೆಗಳು ಮಾಯವಾಗಿ ಚರ್ಮ ಮೃದುವಾಗುವುದು.

12) ಆಗ ತಾನೆ ಕರೆದ ನೊರೆ ಹಾಲನ್ನು ನಾಲ್ಕು ದಿನಗಳು ಬಿಡದೆ ಕುಡಿದರೆ ಬಾಯಿ ಹುಣ್ಣು ವಾಸಿಯಾಗುವುದು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.