Pakistan vs Sri Lanka: ಏಷ್ಯಾಕಪ್ ಸೂಪರ್ 4 ಪಂದ್ಯದಲ್ಲಿ ಪಾಕ್ ವಿರುದ್ಧ ಶ್ರೀಲಂಕಾ 2 ವಿಕೆಟ್ ಗಳ ರೋಚಕ ಗೆಲುವು ಸಾಧಿಸಿದ್ದು, ಈ ಗೆಲುವಿನಿಂದ ಏಷ್ಯಾಕಪ್ ಫೈನಲ್ ಪ್ರವೇಶಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಪಾಕ್ ನಿಗದಿತ 42 ಓವರ್ ಗಳಲ್ಲಿ 7 ವಿಕೆಟ್ ನಷ್ಟ ಅನುಭವಿಸಿ 253 ರನ್ ಗಳಿಸಿತು. ಪಾಕಿಸ್ತಾನ ಪರ ರಿಜ್ವಾನ್ 86*, ಅಬ್ದುಲ್ಲಾ ಶಫೀಕ್ 52, ಇಫ್ತಿಕರ್ ಅಹಮದ್ 47, ನಾಯಕ ಬಾಬಾರ ಅಜಂ 29 ರನ್ ಗಳಿಸಿದರು. ಲಂಕಾ ಪರ ಪತಿರಾನ 3 ಹಾಗೂ ಪ್ರಮೋದ್ ಮದುಶನ್ 2 , ತೀಕ್ಷಣ ಹಾಗು ವೆಲ್ಲಲಾಗೆ ತಲಾ 1 ವಿಕೆಟ್ ಪಡೆದರು.
ಇದನ್ನೂ ಓದಿ: ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಭರ್ಜರಿ ಜಯಭೇರಿ.. ಏಷ್ಯಾಕಪ್ ಫೈನಲ್ಗೆ ಭಾರತ!
Pakistan vs Sri Lanka: ಕೊನೆಯ ಎಸತದಲ್ಲಿ ಲಂಕಾಗೆ ಐತಿಹಾಸಿಕ ಜಯ
ನಂತರ ಪಾಕ್ ನೀಡಿದ 253 ರನ್ ಗಳ ಗುರಿ ಬೆನ್ನತ್ತಿದ ಶ್ರೀಲಂಕಾ 42 ಓವರ್ ಗಳಲ್ಲಿ 8 ವಿಕೆಟ್ ನಷ್ಟದೊಂದಿಗೆ ಕೊನೆ ಎಸತದಲ್ಲಿ ರೋಚಕ ಗೆಲವು ಸಾಧಿಸಿತು ಗುರಿ ಮುಟ್ಟಿದೆ. ಕೊನೆಯ ಓವರ್ನಲ್ಲಿ ಶ್ರೀಲಂಕಾಗೆ 8 ರನ್ ಅಗತ್ಯವಿದ್ದಾಗ, ಮೊದಲ 4 ಎಸೆತಗಳಲ್ಲಿ 2 ರನ್ ನೀಡಿ ಜಮಾನ್ ವಿಕೆಟ್ ಪಡೆದಿದ್ದರು. ಆದರೆ ಕೊನೆಯ ಎರಡು ಎಸೆತಗಳಲ್ಲಿ ಅಸಲಂಕಾ 4 ಮತ್ತು 2 ರನ್ ಗಳಿಸಿ ಲಂಕಾಗೆ ಐತಿಹಾಸಿಕ ಜಯ ತಂದುಕೊಟ್ಟರು. ಶ್ರೀಲಂಕಾ ಪರ ಪಾತುಂ ನಿಸ್ಸಾಂಕ 29 ರನ್, ಕುಸಾಲ್ ಮೆಂಡಿಸ್ 91 ರನ್, ಸದೀರ ಸಮರವಿಕ್ರಮ 48 ರನ್, ಚರಿತ್ ಅಸಲಂಕಾ 49 ರನ್ ಗಳಿಸಿ ಲಂಕಾ ಗೆಲುವಿಗೆ ಕಾರಣರಾದರು. ಇನ್ನು ಪಾಕಿಸ್ತಾನ ಪರ ಇಫ್ತಿಕರ್ ಅಹಮದ್ 3, ಶಾಹೀನ್ ಅಫ್ರಿದಿ 2, ಶಾದಾಬ್ ಖಾನ್ 1 ವಿಕೆಟ್ ಪಡೆದರು. ಲಂಕಾ ಪರ ಅದ್ಬುತ ಪ್ರದರ್ಶನ ನೀಡಿದ ಕುಸಾಲ್ ಮೆಂಡಿಸ್ ಪಂದ್ಯ ಪುರೋಷೋತ್ತಮ ಪ್ರಶಸ್ತಿಗೆ ಭಾಜನರಾದರು,
ಇದನ್ನೂ ಓದಿ: ಫಿದಾ ಬ್ಯೂಟಿಗೆ ಒಲಿದ ಅದೃಷ್ಟ , ಅಮಿರ್ ಖಾನ್ ಪುತ್ರನಿಗೆ ಸಾಯಿ ಪಲ್ಲವಿ ನಾಯಕಿ!
ಪಾಕ್ ಆಟಗಾರ ಕಣ್ಣೀರು!
ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಪಾಕ್ ಆಟಗಾರ ಜಮಾನ್ ಖಾನ್ ಕೊನೆಯ ಬಾಲ್ ಎಸೆದು ಕಣ್ಣೀರು ಹಾಕಿದ್ದಾರೆ. ಈ ವೇಳೆ ಅವರಿಗೆ ಪಾಕಿಸ್ತಾನ & ಶ್ರೀಲಂಕಾ ಆಟಗಾರರು ಸಾಂತ್ವನ ಹೇಳಿದ್ದಾರೆ. ಕೊನೆಯ ಓವರ್ನಲ್ಲಿ ಶ್ರೀಲಂಕಾಗೆ 8 ರನ್ ಅಗತ್ಯವಿದ್ದಾಗ, ಮೊದಲ 4 ಎಸೆತಗಳಲ್ಲಿ 2 ರನ್ ನೀಡಿ ಜಮಾನ್ ವಿಕೆಟ್ ಪಡೆದಿದ್ದರು. ಆದರೆ ಕೊನೆಯ ಎರಡು ಎಸೆತಗಳಲ್ಲಿ ಅಸಲಂಕಾ 4 ಮತ್ತು 2 ರನ್ ಗಳಿಸಿ ಲಂಕಾಗೆ ಐತಿಹಾಸಿಕ ಜಯ ತಂದುಕೊಟ್ಟರು. ಇದನ್ನು ಕಂಡ ಕೂಡಲೇ ಜಮಾನ್ ಭಾವುಕರಾಗಿದರು.
ಇದನ್ನೂ ಓದಿ: RBI ನಲ್ಲಿ 450 ಹುದ್ದೆಗೆ ಅರ್ಜಿ ಆಹ್ವಾನ – Apply online for RBI Recruitment 2023
ಫೈನಲ್ ನಲ್ಲಿ ಭಾರತ vs ಲಂಕಾ ಸೆಣಸಾಟ
ಈ ಗೆಲುವಿನೊಂದಿಗೆ ಅಂತಿಮ ಪಂದ್ಯವನ್ನು ಟೀಮ್ ಇಂಡಿಯಾ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕ್ ಜತೆ ಆಡುವ ಕನಸು ಕನಸಾಗಿಯೇ ಉಳಿದಿದೆ. ಪರಿಣಾಮ ಕೊಲಂಬೊದ ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುವ ಫೈನಲ್ ನಲ್ಲಿ ಲಂಕಾ ಮತ್ತು ಭಾರತದ ನಡುವೆ ಹಣಾಹಣಿ ನಡೆಯಲಿದೆ.
ಪ್ರಮುಖ ಲಿಂಕುಗಳು/ Important links
ವಾಟ್ಸಾಪ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಫೇಸ್ ಬುಕ್ ಪೇಜ್ | ಇಲ್ಲಿ ಕ್ಲಿಕ್ ಮಾಡಿ |
ಟೆಲಿಗ್ರಾಮ್ ಗ್ರೂಪ್ | ಇಲ್ಲಿ ಕ್ಲಿಕ್ ಮಾಡಿ |
ಟ್ವಿಟ್ಟರ್ | ಇಲ್ಲಿ ಕ್ಲಿಕ್ಮಾಡಿ |
ಶೇರ್ ಚಾಟ್ | ಇಲ್ಲಿಕ್ಲಿಕ್ಮಾಡಿ |