ಶಾರ್ಜಾ : ಐಪಿಎಲ್ 2020 ರ 13ನೇ ಆವೃತ್ತಿಯ 4ನೇ ಪಂದ್ಯದಲ್ಲಿ ರಾಜಸ್ತಾನ್ ರಾಯಲ್ಸ್ ತಂಡವು ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ 16 ರನ್ ಗಳ ಗೆಲುವು ದಾಖಲಿಸಿದೆ.
217 ರನ್ ಗಳ ಬೃಹತ್ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್, ಫಾಫ್ ಡುಪ್ಲೆಸಿಸ್ (72 ರನ್, 37 ಎಸೆತ) ಶೇನ್ ವ್ಯಾಟ್ಸನ್ (33 ರನ್, 21 ಎಸೆತ ) ಮುರಳಿ ವಿಜಯ್ (21 ರನ್ 21 ಎಸೆತ) ಕೇದಾರ್ ಜಾದವ್ (22 ರನ್ 16 ಎಸೆತ) ಮತ್ತು ನಾಯಕ ದೋನಿ (29 ರನ್ 17 ಎಸೆತ ) ಅವರ ಬ್ಯಾಟಿಂಗ್ ನೆರವಿನಿಂದ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 200 ರನ್ ಗಳಿಸಿ 16 ರನ್ ಅಂತರದಿಂದ ಸೋಲಿಗೆ ಶರಣಾಯತು. ರಾಜಸ್ತಾನ್ ರಾಯಲ್ಸ್ ತಂಡದ ಪರ ರಾಹುಲ್ ತೇವಟಿಯ 3 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇದಕ್ಕೂ ಮುಂಚೆ ಟಾಸ್ ಸೋತು ಬ್ಯಾಟಿಂಗ್ ಮಾಡಿದ ರಾಜಸ್ತಾನ್ ರಾಯಲ್ಸ್ ತಂಡ ಸಂಜು ಸ್ಯಾಮ್ ಸನ್ ಅವರ ಭರ್ಜರಿ ಬ್ಯಾಟಿಂಗ್ (74 ರನ್ 32 ಎಸೆತ), ನಾಯಕ ಸ್ಟಿವನ್ ಸ್ಮಿತ್ (69 ರನ್ 47 ಎಸತ) ಅವರ ಭರ್ಜರಿ ಆಟದಿಂದ ರಾಜಸ್ತಾನ್ ರಾಯಲ್ಸ್ ತಂಡವು ನಿಗದಿತ 20 ವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 216 ರನ್ ಗಳಿಸಿತು. ಚೆನ್ನೈ ಸೂಪರ್ ಕಿಂಗ್ಸ್ ಪರ ಸ್ಯಾಮ್ ಕರಣ್ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು.
ರಾಜಸ್ತಾನ್ ರಾಯಲ್ಸ್ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ ಸಂಜು ಸ್ಯಾಮ್ಸನ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.