ಹಾವೇರಿಯ ಹಿರೇಕೆರೂರಿನಲ್ಲಿ ನಟಿ ಶ್ರುತಿ ಮಾಡಿರುವ ಭಾಷಣ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೌದು, ನಿಮ್ಮ ವಂಶ ಬಿಟ್ಟು, ಬೇರೆ ವಂಶ ಬೆಳೆಯಬೇಕು ಎಂದರೆ ಜೆಡಿಎಸ್ಗೆ ಮತ ಹಾಕಿ. ನಿಮ್ಮ ವಂಶ ಬಿಟ್ಟು ಬೇರೆ ದೇಶದ ವಂಶ ಬೆಳೆಯಬೇಕು ಎಂದರೆ ಕಾಂಗ್ರೆಸ್ಗೆ ಮತ ನೀಡಿ, ಆದರೆ ದೇಶದ ವಂಶ ಬೆಳೆಯಬೇಕು ಎಂದರೆ ಭಾರತೀಯ ಜನತಾ ಪಾರ್ಟಿಗೆ ಮತ ನೀಡಿ ಎಂಬ ಶ್ರುತಿ ಭಾಷಣ ವೈರಲ್ ಆಗಿದೆ.
ನಟಿ ಶ್ರುತಿ ವಿರುದ್ಧ ಚುನಾವಣಾ ಆಯೋಗಕ್ಕೆ JDS ದೂರು:
ನಟಿ ಹಾಗೂ ಬಿಜೆಪಿ ನಾಯಕಿ ಶೃತಿ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆಂದು ಆರೋಪಿಸಿ JDS ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ಇದನ್ನು ಓದಿ: Krishi Ashirwad Yojana: ರೈತರಿಗೆ ಪ್ರತಿ ಎಕರೆಗೆ 5000 ಸಹಾಯಧನ, ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ
ನಿಮ್ಮ ವಂಶ ಬಿಟ್ಟು ಬೇರೆ ವಂಶ ಬೆಳೆಯಬೇಕು ಎಂದರೆ JDSಗೆ ಮತ ಹಾಕಿ. ದೇಶದ ವಂಶ ಬೆಳೆಯಬೇಕು ಎಂದರೆ ಭಾರತೀಯ ಜನತಾ ಪಾರ್ಟಿಗೆ ಮತ ನೀಡಿʼ ಎಂದು ಹಿರೇಕೇರೂರಿನಲ್ಲಿ ನಡೆದ ಸಭೆಯಲ್ಲಿ ಶೃತಿ ಹೇಳುವ ಮೂಲಕ ಮತದಾರರನ್ನು ಓಲೈಸಲು ಯತ್ನಿಸಿದ್ದಾರೆ ಎಂದು JDS ದೂರಿನಲ್ಲಿ ಉಲ್ಲೇಖಿಸಿದೆ.
ಇದನ್ನು ಓದಿ: ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್: ಈ ಯೋಜನೆಯಡಿ ಪ್ರತಿಯೊಬ್ಬರಿಗೂ 50 ಸಾವಿರ ಉಚಿತ, ಕೂಡಲೇ ಅರ್ಜಿ ಸಲ್ಲಿಸಿ!