ಕಾಜಲ್‌ ಅಗರ್​ವಾಲ್ ಸ್ಟೇಟ್‌ಮೆಂಟ್‌ಗೆ ಬಿಟೌನ್‌ ಶಾಕ್‌; ಭಾರಿ ವಿವಾದ ಹುಟ್ಟುಹಾಕಿದ ಕಾಜಲ್ ಅಗರ್​ವಾಲ್ ಹೇಳಿಕೆ

ತೆಲುಗು, ತಮಿಳು ಸೇರಿದಂತೆ ಬಾಲಿವುಡ್ ನಲ್ಲಿ ಸಹ ನಟಿಸಿ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್​ವಾಲ್(Kajal Aggarwal’) ಅವರು ಸದಾ ವಿವಾದದಿಂದ ದೂರವಿದ್ದು, ಟ್ರೋಲ್​ಗಳ ಬಗ್ಗೆ ಅವರು…

Actress Kajal Aggarwal1

ತೆಲುಗು, ತಮಿಳು ಸೇರಿದಂತೆ ಬಾಲಿವುಡ್ ನಲ್ಲಿ ಸಹ ನಟಿಸಿ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್​ವಾಲ್(Kajal Aggarwal’) ಅವರು ಸದಾ ವಿವಾದದಿಂದ ದೂರವಿದ್ದು, ಟ್ರೋಲ್​ಗಳ ಬಗ್ಗೆ ಅವರು ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ.

ಇದನ್ನು ಓದಿ: ಹೊಸ ಆರ್ಥಿಕ ವರ್ಷ: ಸಿಲಿಂಡರ್ ಬೆಲೆ ಭಾರೀ ಇಳಿಕೆ, ಚಿನ್ನ ಕೊಳ್ಳಲು ಹೊಸ ನಿಯಮ, ಇಂದಿನಿಂದ‌ ಏನೆಲ್ಲಾ ಬದಲಾವಣೆ?

ಈಗ ಕಾಜಲ್ ಅಗರ್​ವಾಲ್ ಬಾಲಿವುಡ್‌(Bollywood) ಕುರಿತು ನೀಡಿರೋ ಹೇಳಿಕೆ ಸಾಕಷ್ಟು ಚರ್ಚೆಹುಟ್ಟು ಹಾಕಿದೆ ವಿವಾದ ಸ್ವರೂಪ ಪಡೆದುಕೊಂಡಿದೆ. ಹೌದು ವಾಹಿನಿಯೊಂದು ನಡೆಸಿದ ‘ರೈಸಿಂಗ್ ಇಂಡಿಯಾ ರಿಯಲ್ ಹೀರೋಸ್’ ವೇದಿಕೆ ಮೇಲೆ ಮಾತನಾಡಿರುವ ಕಾಜಲ್, ದಕ್ಷಿಣ ಸಿನಿಮಾ ಇಂಡಸ್ಟ್ರಿಯ ನೈತಿಕತೆ, ಶಿಸ್ತು ನನಗೆ ಇಷ್ಟವಾಗುತ್ತದೆ. ಅಷ್ಟೇ ಅಲ್ಲ, ಹಿಂದಿ ಚಿತ್ರರಂಗದಲ್ಲಿ ಅದರ ಕೊರತೆಯಿದೆ ಎಂದು ನನಗೆ ಅನಿಸುತ್ತದೆ ಎಂದು ಕಾಜಲ್ ಹೇಳಿಕೆ ನೀಡಿದ್ದಾರೆ. ಬಾಲಿವುಡ್​-ದಕ್ಷಿಣ ಭಾರತ ಎಂಬ ಚರ್ಚೆಗೆ ನಟಿ ಕಾಜಲ್ ನೀಡಿರುವ ಈ ಹೇಳಿಕೆ ಮತ್ತಷ್ಟು ತುಪ್ಪ ಸುರಿಯುವಂತಿದೆ.

Vijayaprabha Mobile App free

Actress Kajal Aggarwal

ಇದನ್ನು ಓದಿ: ಎಣ್ಣೆ ಹೊಡೆದಾಗ ಕೊಹ್ಲಿ ಸ್ಥಿತಿ ಹೇಗಿರುತ್ತೆ.. ವಿರಾಟ್ ಕೊಹ್ಲಿ ಕುಡಿತದ ಸೀಕ್ರೆಟ್‌ ಬಿಚ್ಚಿಟ್ಟ ಪತ್ನಿ ಅನುಷ್ಕಾ ಶರ್ಮಾ

ನಟಿ ಕಾಜಲ್ ಅಗರ್​ವಾಲ್ (Kajal Aggarwal) ಮಾಡಲು ಚಿತ್ರರಂಗಕ್ಕೆ ಕಾಲಿಟ್ಟಿದ್ದು ಹಿಂದಿ (ಬಾಲಿವುಡ್) ಚಿತ್ರರಂಗದ ಮೂಲಕ. ಆದರೆ, ಖ್ಯಾತಿಗಳಿಸಿದ್ದು ಧಕ್ಷಿಣ ಭಾರತದ ಸಿನಿಮಾಗಳ ಮೂಲಕ. ಹೌದು, ಧಕ್ಷಿಣದ ತಲುಗು, ತಮಿಳು ಸಿನಿಮಾಗಳಲ್ಲಿ ಖ್ಯಾತ ನಟರ ಜೊತೆ ನಟಿಸಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದರು. ಬಳಿಕ ಮತ್ತೆ ಬಾಲಿವುಡ್ ಕಡೆ ಮುಖ ಮಾಡಿದ ನಟಿ ಕಾಜಲ್, ಸಿಂಗಮ್​ ಮೊದಲಾದ ಹಿಂದಿ ಚಿತ್ರಗಳಲ್ಲಿ ನಟಿಸಿದ್ದು, ಈಗ ಅಲ್ಲಿನವರಿಗೆ ಎಥಿಕ್ಸ್​ನ ಕೊರತೆ ಇದೆ ಎಂದು ನೇರ ಮಾತುಗಳಲ್ಲಿ ಕಾಜಲ್ ಹೇಳಿದ್ದಾರೆ. ಇದಕ್ಕೆ ಬಾಲಿವುಡ್​ನ ಕೆಲವರು ಅಪಸ್ವರ ತೆಗೆದಿದ್ದಾರೆ ಎನ್ನಲಾಗಿದ್ದು, ಈ ಹೇಳಿಕೆಯಿಂದ ನಟಿ ಕಾಜಲ್ ಅಗರ್​ವಾಲ್​ಗೆ ಬಾಲಿವುಡ್ ನಲ್ಲಿ ಆಫರ್​ಗಳು ಕೈತಪ್ಪಿದರೂ ಅಚ್ಚರಿ ಏನಿಲ್ಲ

ಇದನ್ನು ಓದಿ: ಕೇಂದ್ರದಿಂದ ಭರ್ಜರಿ ಗುಡ್ ನ್ಯೂಸ್: ಹಿರಿಯ ನಾಗರಿಕ, ಸುಕನ್ಯಾ ಸಮೃದ್ಧಿ ಸೇರಿದಂತೆ ಈ ಉಳಿತಾಯ ಯೋಜನೆಗಳ ಮೇಲೆ ಬಂಪರ್ ಬಡ್ಡಿ..ಇಂದಿನಿಂದಲೇ ಜಾರಿ!

Actress Kajal Aggarwal

ಇನ್ನು, ನಟಿ ಕಾಜಲ್ ಅವರ ಈ ಹೇಳಿಕೆಗೆ, ಕಾಜಲ್ ಅಗರ್​ವಾಲ್​ ನಿಜವಾದ ಕ್ವೀನ್. ಈ ರೀತಿ ವೇದಿಕೆ ಮೇಲೆ ಮಾತನಾಡಲು ಧೈರ್ಯ ಬೇಕು’ ಎಂದು ಅನೇಕರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಕಾಜಲ್ ಅಗರ್​ವಾಲ್ ಅವರ ವಿರುದ್ಧ ಕ್ಯಾತೆ ತೆಗೆದಿದ್ದು, ಬಾಲಿವುಡ್​ನಲ್ಲಿ ನಟಿಸಿ ಕೂಡ ಈ ರೀತಿ ಹೇಳೋದು ಸರಿ ಅಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: Ration Card ಹೊಂದಿರುವವರಿಗೆ ಇನ್ಮುಂದೆ ಉಚಿತವಾಗಿ ಸಿಗಲಿದೆ 150 ಕೆಜಿ ಅಕ್ಕಿ, ಇವರಿಗೆ ಮಾತ್ರ..!

ಕಾಜಲ್ ಅಗರ್​ವಾಲ್​ ಅವರು ಸದ್ಯ ಕಮಲ್ ಹಾಸನ್ (Kamal Hasan)ನಟನೆಯ ‘ಇಂಡಿಯನ್ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದು, ‘ಉಮಾ’ ಹೆಸರಿನ ಹಿಂದಿ ಚಿತ್ರ ಅವರ ಕೈಯಲ್ಲಿದೆ. ಆದರೆ, ಕಾಜಲ್ ಅವರ ಈ ಬೋಲ್ಡ್ ಹೇಳಿಕೆ ಯಾವ ಸ್ವರೂಪ ಪಡೆದುಕೊಳ್ಳಲಿದೆ ಕಾದುನೋಡಬೇಕು.

ಇದನ್ನು ಓದಿ: 7 ದಿನಗಳಲ್ಲಿ ಪಾನ್ ಕಾರ್ಡ್‌ ಪಡೆಯುವುದು ಹೇಗೆ? PAN ಕಳೆದು ಹೋದರೆ 5 ನಿಮಿಷದಲ್ಲಿ ಹೀಗೆ ಡೌನ್‌ಲೋಡ್ ಮಾಡಿ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.