BCCI ಆಟಗಾರರ ಹೊಸ ಗುತ್ತಿಗೆ ಒಪ್ಪಂದ: ಸಂಜುಗೆ ಸ್ಥಾನ, ಭುವನೇಶ್ವರ್, ರಹಾನೆ, ಕನ್ನಡಿಗ ಮಾಯಾಂಕ್ ಆಟ ಅಂತ್ಯವಾಯಿತೇ?

ಬಿಸಿಸಿಐನ ವಾರ್ಷಿಕ ಒಪ್ಪಂದ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕೇರಳದ ಆಟಗಾರ ಸಂಜು ಸ್ಯಾಮ್ಸನ್ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಒಪ್ಪಂದದಲ್ಲಿ ಸ್ಥಾನ ಪಡೆದಿದ್ದಾರೆ. ಸಂಜು ಸಿ ಗ್ರೇಡ್‌ನಲ್ಲಿದ್ದು, ವಾರ್ಷಿಕ 3 ಕೋಟಿ ವೇತನ ಪಡೆಯಲಿದ್ದಾರೆ.…

Bhubaneswar, Rahane, Mayank Aggarwal, Sanju Samson

ಬಿಸಿಸಿಐನ ವಾರ್ಷಿಕ ಒಪ್ಪಂದ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕೇರಳದ ಆಟಗಾರ ಸಂಜು ಸ್ಯಾಮ್ಸನ್ ತಮ್ಮ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಒಪ್ಪಂದದಲ್ಲಿ ಸ್ಥಾನ ಪಡೆದಿದ್ದಾರೆ. ಸಂಜು ಸಿ ಗ್ರೇಡ್‌ನಲ್ಲಿದ್ದು, ವಾರ್ಷಿಕ 3 ಕೋಟಿ ವೇತನ ಪಡೆಯಲಿದ್ದಾರೆ. BCCI ಯ ಅತ್ಯುನ್ನತ ಗ್ರೇಡ್ A+ ಆಗಿದ್ದು ವಾರ್ಷಿಕ 7 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ. ಈ ಪಟ್ಟಿಯಲ್ಲಿ ನಾಯಕ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಜಸ್ಪ್ರೀತ್‌ ಬೂಮ್ರಾ ಹಾಗೂ ರವೀಂದ್ರ ಜಡೇಜಾ ಇದ್ದಾರೆ.

ಇದನ್ನು ಓದಿ: 500ರೂ ನೋಟು ನಕಲಿ ಅಥವಾ ಅಸಲಿ ಎಂದು ಗುರುತಿಸುವುದು ಹೇಗೆ? ಈ ಕುತೂಹಲಕಾರಿ ಸಂಗತಿಗಳನ್ನು ತಿಳಿದುಕೊಳ್ಳಿ

ಭುವನೇಶ್ವರ್, ರಹಾನೆ ಹಾಗು ಕನ್ನಡಿಗ ಮಾಯಾಂಕ್ ಅಗರ್ವಾಲ್ ಆಟ ಅಂತ್ಯವಾಯಿತೇ?

Vijayaprabha Mobile App free

ಇನ್ನ್ನು,ಫಾರ್ಮ್ ಕಳೆದುಕೊಂಡು ಟೀಂ ಇಂಡಿಯಾದಿಂದ ದೂರ ಉಳಿದಿದ್ದ ರಹಾನೆ, ಭುವನೇಶ್ವರ್ ಹಾಗು ಕನ್ನಡಿಗ ಮಾಯಾಂಕ್ ಅಗರ್ವಾಲ್ ಈ ಬಾರಿ ಬಿಸಿಸಿಐ ವಾರ್ಷಿಕ ವೇತನ ಒಪ್ಪಂದದಲ್ಲಿ ಸ್ಥಾನ ಪಡೆದಿಲ್ಲ. ಇದರೊಂದಿಗೆ ಭಾರತ ಮುಂದಿನ ದಿನಗಳಲ್ಲಿ ಆಡಲಿರುವ ಪಂದ್ಯಗಳಲ್ಲಿ ಆಡದೇ ಇರಬಹುದು.

2022-23ರ ಒಪ್ಪಂದದಲ್ಲಿ 26 ಆಟಗಾರರು ಸ್ಥಾನ ಪಡೆದಿದ್ದಾರೆ. ಕಳೆದ ಬಾರಿಯ 7 ಆಟಗಾರರನ್ನು ಈ ಬಾರಿ ಒಪ್ಪಂದದಿಂದ ಕೈಬಿಡಲಾಗಿದೆ. ದೀಪಕ್ ಚಹಾರ್, ಇಶಾಂತ್ ಶರ್ಮಾ, ಹನುಮ ವಿಹಾರಿ, ವೃದ್ಧಿಮಾನ್ ಸಹಾ ಈ ಬಾರಿ ಸ್ಥಾನ ಸಿಕ್ಕಿಲ್ಲ.

ಇದನ್ನು ಓದಿ: CRPF ನಲ್ಲಿ 9,212 ಕಾನ್ಸ್‌ಟೇಬಲ್‌ ಹುದ್ದೆಗಳು; SSLC ವಿದ್ಯಾರ್ಹತೆ, ಈಗಲೇ ಅರ್ಜಿ ಸಲ್ಲಿಸಿ

BCCI- ಆಟಗಾರರ ಹೊಸ ಗುತ್ತಿಗೆ ಒಪ್ಪಂದ ಹೀಗಿದೆ;

ಬಿಸಿಸಿಐ ಆಟಗಾರರ ಒಪ್ಪಂದವನ್ನು ನವೀಕರಿಸಿದೆ. ರವೀಂದ್ರ ಜಡೇಜಾ ಬಡ್ತಿ ಪಡೆದರೆ, ಕೆ.ಎಲ್‌. ರಾಹುಲ್‌ ಹಿಂಬಡ್ತಿ ಪಡೆದಿದ್ದಾರೆ.

A+ ಕೆಟಗರಿ (7 ಕೋಟಿ ರೂ.): ರೋಹಿತ್ ಶರ್ಮ, ವಿರಾಟ್‌ ಕೊಹ್ಲಿ, ಜಸ್ಪ್ರೀತ್ ಬುಮ್ರಾ. ರವೀಂದ್ರ ಜಡೇಜಾ

A ಕೆಟಗರಿ (5 ಕೋಟಿ ರೂ.): ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಮಹಮದ್ ಶಮಿ, ರಿಷಬ್ ಪಂತ್, ಅಕ್ಷರ್ ಪಟೇಲ್

B ಕೆಟಗರಿ (3 ಕೋಟಿ ರೂ.): ಚೇತೇಶ್ವರ್ ಪೂಜಾರ, ಕೆ ಎಲ್ ರಾಹುಲ್‌, ಶ್ರೇಯಸ್‌ ಅಯ್ಯರ್, ಮಹಮದ್ ಸಿರಾಜ್, ಸೂರ್ಯಕುಮಾರ್‌ ಯಾದವ್ , ಶುಭ್ಮಂ ಗಿಲ್

C ಕೆಟಗರಿ (1 ಕೋಟಿ ರೂ.): ಶಿಖರ್ ಧವನ್, ಶಾರ್ದುಲ್ ಠಾಕೂರ್, ಇಶಾನ್ ಕಿಶನ್, ದೀಪಕ್ ಹೂಡ, ಯಜುವೇಂದ್ರ ಚಹಲ್, ಕುಲ್ದೀಪ್‌ ಯಾದವ್, ವಾಷಿಂಗ್ ಟನ್ ಸುಂದರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆ ಎಸ್ ಭರತ್

ಇದನ್ನು ಓದಿ: ಏರ್‌ಟೆಲ್ ಗ್ರಾಹಕರಿಗೆ ಭರ್ಜರಿ ಗುಡ್ ನ್ಯೂಸ್: ಒಂದೇ ಕನೆಕ್ಷನ್‌ನಲ್ಲಿ 2 ಸಿಮ್‌ಗಳು, ಉಚಿತ DTH, OTT, ಅನಿಯಮಿತ ಡೇಟಾ!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.