ಪಡಿತರ ಚೀಟಿ ಹೊಂದಿರುವವರಿಗೆ ಗುಡ್ ನ್ಯೂಸ್.. ಮೋದಿ ಸರ್ಕಾರ್ ಮಹತ್ವದ ನಿರ್ಧಾರ!

Link ration card with Aadhaar card: ಕೇಂದ್ರ ಸರ್ಕಾರ ದೇಶದಲ್ಲಿ ಪಡಿತರ ಚೀಟಿ(Ration Card) ಹೊಂದಿರುವ ಬಡ ಜನರಿಗೆ ಶುಭ ಸುದ್ದಿ ನೀಡಿದ್ದು, ಪಡಿತರ ಚೀಟಿಯನ್ನು ಆಧಾರ್ ಕಾರ್ಡ್‌ನೊಂದಿಗೆ(Aadhaar Card) ಲಿಂಕ್ ಮಾಡಲು…

ration card and Aadhaar card

Link ration card with Aadhaar card: ಕೇಂದ್ರ ಸರ್ಕಾರ ದೇಶದಲ್ಲಿ ಪಡಿತರ ಚೀಟಿ(Ration Card) ಹೊಂದಿರುವ ಬಡ ಜನರಿಗೆ ಶುಭ ಸುದ್ದಿ ನೀಡಿದ್ದು, ಪಡಿತರ ಚೀಟಿಯನ್ನು ಆಧಾರ್ ಕಾರ್ಡ್‌ನೊಂದಿಗೆ(Aadhaar Card) ಲಿಂಕ್ ಮಾಡಲು ಗಡುವನ್ನು ವಿಸ್ತರಿಸಲಾಗಿದೆ ಎಂದು ಪ್ರಕಟಿಸಿದೆ. ಮಾರ್ಚ್ 31ಕ್ಕೆ ಗಡುವು ಮುಕ್ತಾಯವಾಗಬೇಕಿತ್ತು, ಆದರೆ ಅದನ್ನು ಇನ್ನೂ ಮೂರು ತಿಂಗಳು ವಿಸ್ತರಿಸಲಾಗಿದೆ. ಇನ್ನೂ ಯಾರಾದರೂ ಆನ್‌ಲೈನ್‌ನಲ್ಲಿ ಪಡಿತರ ಚೀಟಿಯೊಂದಿಗೆ ಆಧಾರ್ ಲಿಂಕ್ (link ration card with Aadhaar card) ಮಾಡದಿದ್ದರೆ, ತಕ್ಷಣ ಅದನ್ನು ಮಾಡುವುದು ಉತ್ತಮ. ಇಲ್ಲದಿದ್ದರೆ ಅವಧಿ ಮುಗಿದ ನಂತರ ಪಡಿತರ ಚೀಟಿ ಅಮಾನ್ಯವಾಗುವ ಅಪಾಯವಿದೆ. ಇನ್ನು, ಆಫ್‌ಲೈನ್ ಅಥವಾ ಆನ್‌ಲೈನ್ ಮೋಡ್‌ನಲ್ಲಿ ಆಧಾರ್ ಅನ್ನು ಹೇಗೆ ಲಿಂಕ್ ಮಾಡುವುದು ಎಂದು ತಿಳಿಯೋಣ.

ಇದನ್ನು ಓದಿ:ನರೇಗಾ ಯೋಜನೆ: ಈ ಯೋಜನೆಯಡಿ 2.5 ಲಕ್ಷ ರೂಪಾಯಿ ಸಹಾಯಧನ, ನೂರು ದಿನಗಳ ಉದ್ಯೋಗ, ಜಾಬ್‌ಕಾರ್ಡ್ ಪಡೆಯುವುದು ಹೇಗೆ?

ಆಧಾರ್‌ನೊಂದಿಗೆ ಪಡಿತರ ಚೀಟಿ ಆನ್‌ಲೈನ್ ಲಿಂಕ್ ಸಾಮಾನ್ಯವಾಗಿ ಮಾರ್ಚ್ 31 ರಂದು ಮುಕ್ತಾಯಗೊಳ್ಳುತ್ತದೆ. ಆದರೆ ಕೇಂದ್ರ ಸರ್ಕಾರ ಈ ಗಡುವನ್ನು ಜೂನ್ 30ರವರೆಗೆ ವಿಸ್ತರಿಸಿದೆ. ಈ ಕುರಿತು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಇತ್ತೀಚೆಗೆ ಅಧಿಸೂಚನೆ ಹೊರಡಿಸಿದೆ. ಇನ್ನು, ಪ್ರಮುಖ ದಾಖಲೆಗಳಲ್ಲಿ ಪಡಿತರ ಚೀಟಿಯೂ ಒಂದು ಎಂದು ಪರಿಗಣಿಸಲಾಗಿದೆ. ಪಡಿತರ ಚೀಟಿಯು ಪಾಸ್‌ಪೋರ್ಟ್ ಮತ್ತು ಪ್ಯಾನ್ ಕಾರ್ಡ್‌ನಂತಹ ಪ್ರಮುಖ ದಾಖಲೆಯಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಬ್ಸಿಡಿಯಲ್ಲಿ ಅಕ್ಕಿ ಮತ್ತು ಗೋಧಿಯಂತಹ ಅಗತ್ಯ ವಸ್ತುಗಳನ್ನು ಒದಗಿಸುತ್ತವೆ. ಇದಲ್ಲದೇ ಪಡಿತರ ಚೀಟಿಯನ್ನು ಗುರುತಿನ ಚೀಟಿಯಾಗಿಯೂ ಬಳಸಬಹುದು.

Vijayaprabha Mobile App free

ಇದನ್ನು ಓದಿ : ನಿಮ್ಮ ಆಧಾರ್‌-ಪ್ಯಾನ್‌ ಲಿಂಕ್‌ ಆಗದಿದ್ದರೆ ಸಮಸ್ಯೆ ಏನು? 1000 ರೂ ದಂಡದೊಂದಿಗೆ ಸುಲಭವಾಗಿ ಆಧಾರ್ ಜೊತೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿ

ಪಡಿತರ ಚೀಟಿಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವ ಮೂಲಕ ಪಡಿತರ ವಂಚನೆಯನ್ನು ತಡೆಯಬಹುದು. ಒಂದೇ ವ್ಯಕ್ತಿ ಒಂದಕ್ಕಿಂತ ಹೆಚ್ಚು ಕಾರ್ಡ್‌ಗಳ ಮೂಲಕ ಪಡಿತರ ಪಡೆಯುವುದನ್ನು ತಡೆಯಲು ಆಧಾರ್ ಲಿಂಕ್ ಉಪಯುಕ್ತವಾಗಿದೆ. ನಕಲಿ ಪಡಿತರ ಚೀಟಿಗಳನ್ನು ಗುರುತಿಸಲು ಕೂಡ ಆಧಾರ್ ಲಿಂಕ್ ಉಪಯುಕ್ತವಾಗಿದೆ. ಇದರಿಂದ ನಿಜವಾದ ಅರ್ಹತೆ ಇರುವವರು ಮಾತ್ರ ಯೋಜನೆಯ ಪ್ರಯೋಜನಗಳನ್ನು ಪಡೆಯುತ್ತಾರೆ. ಅದಕ್ಕಾಗಿ ಕೇಂದ್ರ ಸರ್ಕಾರ ಪಡಿತರ ಚೀಟಿ ಮತ್ತು ಆಧಾರ್ ಲಿಂಕ್ ಅನ್ನು ಕಡ್ಡಾಯಗೊಳಿಸಿದೆ.

ಇದನ್ನು ಓದಿ: PPF Account: ಸರ್ಕಾರದ ಈ ಯೋಜನೆ ಲಕ್ಷಾಧಿಪತಿಗಳನ್ನಾಗಿಸುತ್ತದೆ; ಹೂಡಿಕೆ ಕಡಿಮೆ, ಬಡ್ಡಿಯೊಂದಿಗೆ ಕೋಟಿಗೂ ಹೆಚ್ಚು ಲಾಭ..!

ಪಡಿತರ ಚೀಟಿಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಲಿಂಕ್ ಮಾಡುವುದು ಹೇಗೆ?

ಪಡಿತರ ಚೀಟಿಯೊಂದಿಗೆ ಆಧಾರ್ ಲಿಂಕ್ ಮಾಡಲು ಬಯಸುವವರು ಮೊದಲು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಪೋರ್ಟಲ್‌ಗೆ ಹೋಗಬೇಕು. ಪಡಿತರ ಚೀಟಿಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವ ಆಯ್ಕೆ ಇದೆ. ಅದರ ಮೇಲೆ ಕ್ಲಿಕ್ ಮಾಡಿ ಮತ್ತು ಪಡಿತರ ಚೀಟಿ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ, ನೋಂದಾಯಿತ ಮೊಬೈಲ್ ಸಂಖ್ಯೆ ನಮೂದಿಸಿ. ಸಲ್ಲಿಸು ಬಟನ್ ಕ್ಲಿಕ್ ಮಾಡಿ. ನಂತರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಬಂದ OTP ಅನ್ನು ನಮೂದಿಸಿ. ಪ್ರಕ್ರಿಯೆಯು ಪೂರ್ಣಗೊಂಡ ನಂತರ ದೃಢೀಕರಣ ಸಂದೇಶವು ಕಾಣಿಸಿಕೊಳ್ಳುತ್ತದೆ.

ಇದನ್ನು ಓದಿ: ಸರ್ಕಾರದಿಂದ ಎಲ್‌ಪಿಜಿ 200 ರೂ ಸಬ್ಸಿಡಿ ಘೋಷಣೆ; ಏನಿದು ಉಜ್ವಲ ಯೋಜನೆ, ಉಚಿತ ಸಂಪರ್ಕ ಪಡೆಯುವುದು ಹೇಗೆ?

ಮತ್ತೊಂದೆಡೆ.. ಪಡಿತರ ಚೀಟಿ, ಕುಟುಂಬದ ಸದಸ್ಯರ ಆಧಾರ್ ಜೆರಾಕ್ಸ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್, ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಇತ್ಯಾದಿಗಳನ್ನು ಪಡಿತರ ಕಚೇರಿ ಅಥವಾ ಸಾರ್ವಜನಿಕ ವಿತರಣಾ ವ್ಯವಸ್ಥೆ ಅಥವಾ ಪಡಿತರ ಅಂಗಡಿಗೆ ಸಲ್ಲಿಸಬಹುದು. ಅವರು ಆಧಾರ್, ಪಡಿತರ ಚೀಟಿ ಲಿಂಕ್ ಮಾಡುತ್ತಾರೆ.

ಇದನ್ನು ಓದಿ : ಕ್ರಿಕೆಟ್ ಅಭಿಮಾನಿಗಳಿಗೆ Jio ವಿಶೇಷ ಕೊಡುಗೆ; 40 GB ವರೆಗೆ ಉಚಿತ ಡೇಟಾ, Jio 3 ಪ್ರಿಪೇಯ್ಡ್ ಯೋಜನೆಗಳು ಇವೆ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.