ದಾವಣಗೆರೆ ಸೆ.14: ಎ.ಆರ್.ಟಿ ಪ್ಲಸ್ ವಿಭಾಗಕ್ಕೆ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ವೈದ್ಯಾಧಿಕಾರಿಗಳ ಹುದ್ದೆಗೆ ನೇರ ನೇಮಕಾತಿ ಮಾಡಿಕೊಳ್ಳಲು ಸಂದರ್ಶನ ಆಯೋಜಿಸಲಾಗಿದೆ.
ಸೆ.21 ರಂದು ಬೆಳಿಗ್ಗೆ 11 ಗಂಟೆಗೆ ಎ.ಆರ್.ಟಿ ಪ್ಲಸ್ ವಿಭಾಗ, ಚಿಗಟೇರಿ ಜಿಲ್ಲಾ ಆಸ್ಪತ್ರೆ ಇಲ್ಲಿಗೆ ಸಂದರ್ಶನಕ್ಕೆ ಆಸಕ್ತ ಅಭ್ಯರ್ಥಿಗಳು ತಮ್ಮ ಮೂಲ ದಾಖಲಾತಿಗಳೊಂದಿಗೆ ಹಾಜರಾಗಬಹುದು.
ಒಂದು ವೈದ್ಯಾಧಿಕಾರಿ ಹುದ್ದೆ ಖಾಲಿಯಿದ್ದು, ಅವಧಿ ಒಂದು ವರ್ಷದ್ದಾಗಿದೆ. ಮಾಸಿಕ ರೂ. 50 ಸಾವಿರ ವೇತನ ನೀಡಲಾಗುವುದು. ಅಭ್ಯರ್ಥಿಯು ಎಂ.ಬಿ.ಬಿ.ಎಸ್ನಲ್ಲಿ ಉತ್ತೀಣರಾಗಿರಬೇಕು. ಹೆಚ್.ಐ.ವಿ ವಿಭಾಗದಲ್ಲಿ ಅನುಭವ ಹೊಂದಿದವರಿಗೆ ಮೊದಲ ಆದ್ಯತೆ ನೀಡಲಾಗುವುದು. ವಯೋಮಿತಿ 70 ವರ್ಷದೊಳಗಿರಬೇಕು ಎಂದು ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಅಧೀಕ್ಷಕರು ತಿಳಿಸಿದ್ದಾರೆ.