SSCಯಲ್ಲಿ 5,369 ಸರ್ಕಾರಿ ಹುದ್ದೆಗಳು: SSLC, ಪಿಯುಸಿ, ಡಿಗ್ರಿ ಪಾಸ್ ಆದವರು ಅರ್ಜಿ ಸಲ್ಲಿಸಿ, ಮಾರ್ಚ್ 27 ಕೊನೆಯ ದಿನ

ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಮತ್ತೊಂದು ಬೃಹತ್ ಉದ್ಯೋಗ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಪರೀಕ್ಷೆ ಮೂಲಕ ಕೇಂದ್ರ ಸರ್ಕಾರದ ಇಲಾಖೆ / ಸಂಸ್ಥೆ / ಸಚಿವಾಲಯ / ಕಛೇರಿಗಳಲ್ಲಿ ಒಟ್ಟು 5369 ಹುದ್ದೆಗಳನ್ನು ಭರ್ತಿ…

SSC

ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಮತ್ತೊಂದು ಬೃಹತ್ ಉದ್ಯೋಗ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಪರೀಕ್ಷೆ ಮೂಲಕ ಕೇಂದ್ರ ಸರ್ಕಾರದ ಇಲಾಖೆ / ಸಂಸ್ಥೆ / ಸಚಿವಾಲಯ / ಕಛೇರಿಗಳಲ್ಲಿ ಒಟ್ಟು 5369 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಇದನ್ನು ಓದಿ: ವೀಕೆಂಡ್ ವಿತ್ ರಮೇಶ್​ಗೆ ಇವರೇ ಮೊದಲ ಅತಿಥಿ, ರಾಜಕಾರಣಿಗಳಿಗಿಲ್ಲ ಪ್ರವೇಶ; ಇಲ್ಲಿದೆ ಸಾಧಕರ ಲಿಸ್ಟ್

ಹತ್ತನೇ ತರಗತಿ, ಪಿಯುಸಿ ಮತ್ತು ಪದವಿ ಪಾಸಾದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಲ್ಲಿ ಆಸಕ್ತಿ ಇರುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು https://ssc.nic.in ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಮಾರ್ಚ್ 27 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ.

Vijayaprabha Mobile App free

ಇದನ್ನು ಓದಿ: ಗುಡ್ ನ್ಯೂಸ್: ಇಂದೇ ನಿಮ್ಮ ಖಾತೆಗೆ 2000ರೂ; ಖಾತೆಗೆ 2000ರೂ ಜಮಾ ಆಗಿಲ್ವಾ, ಹೀಗೆ ಮಾಡಿ

ಹುದ್ದೆಗಳ ವಿವರ ಸಂಪೂರ್ಣ ವಿವರ:

ಸಂಸ್ಥೆ: ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC)

ಒಟ್ಟು: ಹುದ್ದೆಗಳು: 5,369

ಹುದ್ದೆಗಳ ಹೆಸರು: ವಿದ್ಯಾರ್ಹತೆಗೆ ಅನುಗುಣವಾಗಿ ಅಕೌಂಟಂಟ್‌, ಹೆಡ್‌ ಕ್ಲರ್ಕ್‌, ಜೂನಿಯರ್ ಸೀಡ್ ಅನಾಲಿಸ್ಟ್‌, ಗರ್ಲ್ಸ್‌ ಕೆಡೆಟ್‌ ಇನ್‌ಸ್ಟ್ರಕ್ಟರ್, ಮೆಕ್ಯಾನಿಕಲ್‌ ವಿಭಾಗ ಚಾರ್ಜ್‌ಮನ್, ಮಲ್ಟಿಟಾಸ್ಕಿಂಗ್ ಸ್ಟಾಫ್‌, ಸ್ಟಾಫ್‌ ಕಾರ್‌ ಡ್ರೈವರ್, ಟೆಕ್ನಿಕಲ್ ಸೂಪರಿಂಟೆಂಡಂಟ್‌, ಸೈಂಟಿಫಿಕ್‌ ಅಸಿಸ್ಟಂಟ್, ರಿಹ್ಯಾಬಿಲಿಟೇಶನ್‌ ಕೌನ್ಸೆಲರ್, ಕಂಸರ್‌ವೇಶನ್‌ ಅಸಿಸ್ಟಂಟ್‌, ಟೆಕ್ನಿಕಲ್ ಅಸಿಸ್ಟಂಟ್, ರಿಸರ್ಚ್‌ ಇನ್ವೆಸ್ಟಿಗೇಟರ್ ಮಾತ್ರವಲ್ಲದೇ ಇನ್ನೂ ಹಲವು ಪದನಾಮಕಗಳ ಒಟ್ಟು 5369 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ಇದನ್ನು ಓದಿ: ನಿರುದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್: ಯುವನಿಧಿ ಹೆಸರಿನಲ್ಲಿ ಪ್ರತಿ ತಿಂಗಳು 3000ರೂ ನಿರುದ್ಯೋಗ ಭತ್ಯೆ..!

ವಿದ್ಯಾರ್ಹತೆ: ಹುದ್ದೆಗಳಿಗೆ ಅನುಗುಣವಾಗಿ ಹತ್ತನೇ ತರಗತಿ, ಪಿಯುಸಿ ಮತ್ತು ಪದವಿ ಪಾಸಾದ ಅಭ್ಯರ್ಥಿಗಳು

ಪರೀಕ್ಷೆ ಕೇಂದ್ರಗಳು: ಕರ್ನಾಟಕದಲ್ಲಿ ಕವರಟ್ಟಿ, ಬೆಳಗಾವಿ, ಕಲಬುರಗಿ, ಮಂಗಳೂರು, ಮೈಸೂರು, ಬೆಂಗಳೂರು, ಹುಬ್ಬಳ್ಳಿ,, ಶಿವಮೊಗ್ಗ, ಉಡುಪಿ ಜಿಲ್ಲಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್ 27

ಅರ್ಜಿ ಸಲ್ಲಿಸಲು ಶುಲ್ಕ: ಅರ್ಜಿ ಸಲ್ಲಿಸಲು ರೂ.100 ಶುಲ್ಕವನ್ನು ಆನ್‌ಲೈನ್‌ ಮೂಲಕ ಮತ್ತು ಆಫ್‌ಲೈನ್‌ ಚಲನ್‌ ಮೂಲಕ ಸಹ ಪಾವತಿಸಬಹುದು.

ಅಧಿಕೃತ ವೆಬ್ ಸೈಟ್ : ssc.nic.in

ನೋಟಿಫಿಕೇಶನ್ ಡೌನ್ಲೋಡ್: https://ssc.nic.in/SSCFileServer/PortalManagement/UploadedFiles/notice_rhq_06032023.pdf

ಇದನ್ನು ಓದಿ: ಸ್ವಸಹಾಯ ಗುಂಪುಗಳಿಗೆ 10,000 ರೂ ಮತ್ತು 5 ಲಕ್ಷ ರೂ ಸಾಲ ಸೌಲಭ್ಯ; ಏನಿದು ಯುವಶಕ್ತಿ ಯೋಜನೆ, ಈ ಗುಂಪಿಗೆ ಸಿಗುವ ಸೌಲಭ್ಯಗಳೇನು?

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.