ಈ ನಟನನ್ನು ಕೊಲ್ಲುವುದೇ ನನ್ನ ಜೀವನದ ಗುರಿ; ಜೀವ ಬೆದರಿಕೆ, ಮನೆ ಖಾಲಿ ಮಾಡಿದ ಸಲ್ಮಾನ್ ಖಾನ್‌

ಬಾಲಿವುಡ್ ನಟ ಸಲ್ಮಾನ್ ಖಾನ್ ಕೊಲ್ಲುವುದೇ ನನ್ನ ಜೀವನದ ಗುರಿ ಎಂದು ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೇಳಿದ್ದಾನೆ. ‘ಕೃಷ್ಣಮೃಗ ಹತ್ಯೆಗೈದಿರುವ ಸಲ್ಮಾನ್, ಬಿಕಾನೇರ್ ನಲ್ಲಿರುವ ನಮ್ಮ ಸಮುದಾಯದ ದೇವಸ್ಥಾನಕ್ಕೆ ತೆರಳಿ ಕ್ಷಮೆಯಾಚಿಸಬೇಕು. ಇದನ್ನು…

Salman Khan

ಬಾಲಿವುಡ್ ನಟ ಸಲ್ಮಾನ್ ಖಾನ್ ಕೊಲ್ಲುವುದೇ ನನ್ನ ಜೀವನದ ಗುರಿ ಎಂದು ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೇಳಿದ್ದಾನೆ. ‘ಕೃಷ್ಣಮೃಗ ಹತ್ಯೆಗೈದಿರುವ ಸಲ್ಮಾನ್, ಬಿಕಾನೇರ್ ನಲ್ಲಿರುವ ನಮ್ಮ ಸಮುದಾಯದ ದೇವಸ್ಥಾನಕ್ಕೆ ತೆರಳಿ ಕ್ಷಮೆಯಾಚಿಸಬೇಕು.

ಇದನ್ನು ಓದಿ: ಖ್ಯಾತ ನಟಿ ಪವಿತ್ರಾ ಲೋಕೇಶ್ ಎಷ್ಟು ಮದುವೆಯಾಗಿದ್ದಾರೆ? 1500 ಕೋಟಿ ಆಸ್ತಿ ಕಬಳಿಸಲು ಈ ಮದುವೆಯಾದ್ರಾ ಪವಿತ್ರಾ..!

ಆ ನಂತರವೇ ಈ ವಿಷಯ ಕೊನೆಗೊಳ್ಳುತ್ತದೆ’ ಎಂದು ಸುದ್ದಿ ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಹೇಳಿದ್ದಾನೆ. ‘ಸಲ್ಮಾನ್ ತುಂಬಾ ಅಹಂಕಾರಿ, ಮೂಸೇವಾಲಾ ಕೂಡ ಅದೇ ರೀತಿ ಇದ್ದರು. ಆದರೆ, ಸಲ್ಮಾನ್ ಅಹಂ ರಾವಣನಿಗಿಂತ ದೊಡ್ಡದು’ ಎಂದು ಹೇಳಿದ್ದಾನೆ.

Vijayaprabha Mobile App free

ಇದನ್ನು ಓದಿ: ಖ್ಯಾತ ನಟಿಗೆ ಈ ಹೆಸರೇ ಸಮಸ್ಯೆ; ವಿಚ್ಛೇದನ ಬಳಿಕ ಎದುರಾದ ಸಮಸ್ಯೆ ಬಿಚ್ಚಿಟ್ಟ ಮಲೈಕಾ ಆರೋರ

ಗೋಲ್ಡಿ ಜೊತೆ ಮಾತಾಡು.. ಸಲ್ಮಾನ್‌ಗೆ ಬೆದರಿಕೆ

Actor Salman Khan

ಸಲ್ಮಾನ್ ನೀನು ಗೋಲ್ಡಿ ಬ್ರಾರ್‌ನ್ನು ಮುಖಾಮುಖಿಯಾಗಿ ಭೇಟಿಯಾಗಿ ಮಾತನಾಡಬೇಕು. ಇಲ್ಲದಿದ್ದರೇ ಮುಂದಾಗುವ ಅನಾಹುತಕ್ಕೆ ನೀನೆ ಹೊಣೆ ಎಂದು ಇಮೇಲ್‌ ಮೂಲಕ ಬೆದರಿಕೆ ಹಾಕಲಾಗಿದೆ. ಗ್ಯಾಂಗ್‌ಸ್ಟರ್‌ಗಳಾದ ಲಾರೆನ್ಸ್‌ ಬಿಷ್ಣೊಯ್‌ನಿಂದ ಹಾಗೂ ಗೋಲ್ಡಿ ಬ್ರಾರ್‌ ಕಡೆಯಿಂದ ಜೀವ ಬೆದರಿಕೆ ಬಂದಿದೆ ಎನ್ನಲಾಗಿದೆ.

ಇದನ್ನು ಓದಿ: ಸ್ವಸಹಾಯ ಗುಂಪುಗಳಿಗೆ 10,000 ರೂ ಮತ್ತು 5 ಲಕ್ಷ ರೂ ಸಾಲ ಸೌಲಭ್ಯ; ಏನಿದು ಯುವಶಕ್ತಿ ಯೋಜನೆ, ಈ ಗುಂಪಿಗೆ ಸಿಗುವ ಸೌಲಭ್ಯಗಳೇನು?

ಇನ್ನು, ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಮತ್ತೆ ಜೀವ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ. ಜೀವ ಬೆದರಿಕೆ ಬಂದ ಹಿನ್ನೆಲೆ ನಟ ಸಲ್ಮಾನ್ ಖಾನ್ ಮುಂಬೈನ ಮನೆ ತೊರೆದಿದ್ದಾರೆ ಎಂಬ ಮಾಹಿತಿ ದೊರೆತಿದ್ದು, ಅವರು ಪ್ರಸ್ತುತ ಎಲ್ಲಿದ್ದಾರೆ ಎಂಬುವುದು ಗೊತ್ತಿಲ್ಲ. ಸದ್ಯಕ್ಕೆ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದಂತೆ ಸಲ್ಮಾನ್ ಖಾನ್ ಗೆ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ವರದಿಗಳು ಹೇಳಿವೆ.

ಇದನ್ನು ಓದಿ: ಸರ್ಕಾರದ ಅದ್ಬುತ ಯೋಜನೆ: ತಿಂಗಳಿಗೆ 200 ರೂ ಕಟ್ಟಿದರೆ ಸಾಕು, ಪ್ರತಿ ತಿಂಗಳು 5 ಸಾವಿರ ರೂ, ಒಂದೇ ಬಾರಿಗೆ 8.5 ಲಕ್ಷ ರೂ.!

ಸಲ್ಮಾನ್ ಮನೆಯ ಭದ್ರತೆ ಹೆಚ್ಚಿಸಲಾಗಿದ್ದು, ಹೆಚ್ಚುವರಿ ಪೊಲೀಸರನ್ನು ಮನೆ ಬಳಿ ನೇಮಿಸಲಾಗಿದೆ. ಜೀವ ಬೆದರಿಕೆ ಸಂಬಂಧ ದರೋಡೆಕೋರರಾದ ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ವಿರುದ್ಧ ಐಪಿಸಿ ಸೆಕ್ಷನ್ 506(2),120(ಬಿ) ಮತ್ತು 34 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನು ಓದಿ: ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್; ಇನ್ಮುಂದೆ ಸಿಗಲಿದೆ ಎಟಿಎಂನಿಂದ ರೇಷನ್

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.