Aadhar and Pan Card Link: ಆಧಾರ್ ಕಾರ್ಡ್ (Aadhar Card) ಮತ್ತು ಪ್ಯಾನ್ ಕಾರ್ಡ್ (Pan Card) ಲಿಂಕ್ ಕೆಲವೇ ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ. ಮಾರ್ಚ್ 31 ಸಮೀಪಿಸುತ್ತಿದ್ದು, ಪ್ರತಿಯೊಬ್ಬರೂ ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳನ್ನು ಲಿಂಕ್ ಮಾಡಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಇಲ್ಲದಿದ್ದರೆ ಏಪ್ರಿಲ್ 1 ರಿಂದ ಎಲ್ಲಾ ಬ್ಯಾಂಕ್ ವಹಿವಾಟುಗಳನ್ನು (Bank transaction) ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುವುದು ಮತ್ತು ಆದಾಯ ತೆರಿಗೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಇದನ್ನು ಓದಿ: LIC ಬಿಮಾ ರತ್ನ ಪಾಲಿಸಿಯಲ್ಲಿದೆ ಮಲ್ಟಿಪಲ್ ಬೆನಿಫಿಟ್ಸ್; ಈ ಪಾಲಿಸಿಯೊಂದಿಗೆ ಕೈಗೆ ಬರೋಬ್ಬರಿ 76 ಲಕ್ಷ ರೂ..!
ಅಸ್ಸಾಂ, ಜಮ್ಮು, ಕಾಶ್ಮೀರ ಮತ್ತು ಮೇಘಾಲಯದಂತಹ ರಾಜ್ಯಗಳನ್ನು ಹೊರತುಪಡಿಸಿ ಭಾರತದ ಎಲ್ಲಾ ರಾಜ್ಯಗಳ ಜನರು ಪ್ಯಾನ್ ಮತ್ತು ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಬೇಕು ಮತ್ತು ಎಲ್ಲಾ ಲಿಂಕ್ ಮಾಡದ ಎಲ್ಲಾ ಖಾತೆಗಳನ್ನು ಮುಚ್ಚಲಾಗುವುದು ಎಂದು ಭಾರತ ಸರ್ಕಾರ ಘೋಷಿಸಿದೆ. ಆದ್ದರಿಂದ ಆದಷ್ಟು ಬೇಗ ಇವೆರಡನ್ನು ಲಿಂಕ್ ಮಾಡಿ. ಈ ಸಂದರ್ಭದಲ್ಲಿ ಪ್ಯಾನ್‌ಕಾರ್ಡ್ ಅನ್ನು ಆಧಾರ್ ಕಾರ್ಡ್‌ಗೆ ಲಿಂಕ್ (Link Pancard to Aadhaar Card Online) ಮಾಡುವುದು ಹೇಗೆ ಎಂಬ ಸಂಪೂರ್ಣ ವಿವರಗಳನ್ನು ಈಗ ಹಂತ ಹಂತವಾಗಿ ಸಂಪೂರ್ಣ ಪರಿಶೀಲಿಸಿ
ಈ ಎರಡು ಕಾರ್ಡ್‌ಗಳನ್ನು ಲಿಂಕ್ ಮಾಡಲು ರೂ1000 ಸಾವಿರ ಪಾವತಿಸಲಬೇಕು. ಈ ಎಲ್ಲಾ ಪ್ರಕ್ರಿಯೆಯನ್ನು ಅಧಿಕೃತ ವೆಬ್‌ಸೈಟ್ ಮೂಲಕ ಅಥವಾ SMS ಮೂಲಕ ಮಾಡಬಹುದು.
ಇದನ್ನು ಓದಿ: ‘ಆರ್ ಯು ವರ್ಜಿನ್’ ಎಂದವನಿಗೆ.. ನಟಿ ಶ್ರುತಿ ಹಾಸನ್ ಶಾಕಿಂಗ್ ಉತ್ತರ..!
ಆನ್‌ಲೈನ್‌ನಲ್ಲಿಯೂ ಸುಲಭವಾಗಿ ಆಧಾರ್ ಕಾರ್ಡ್ ಜೊತೆ ಪ್ಯಾನ್ ಕಾರ್ಡ್ ಲಿಂಕ್
ನಿಮ್ಮ ಕೈಯಲ್ಲಿರುವ ಫೋನ್‌ನಿಂದ ಅಥವಾ ಸಿಸ್ಟಮ್‌ನಿಂದಲೇ ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳನ್ನು ಸುಲಭವಾಗಿ ಲಿಂಕ್ ಮಾಡಬಹುದು.
* ಹೌದು, ಇದಕ್ಕಾಗಿ ಮೊದಲು https://www.incometax.gov.in/ ವೆಬ್‌ಸೈಟ್‌ಗೆ ಹೋಗಿ.
* ಮುಖಪುಟದ ಎಡಭಾಗದಲ್ಲಿರುವ ಲಿಂಕ್ ಆಧಾರ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ಅಲ್ಲಿ ನಿಮ್ಮ ಹತ್ತು ಅಂಕಿಯ ಪ್ಯಾನ್ ಸಂಖ್ಯೆಯನ್ನು ನಮೂದಿಸಿ. ಅದರ ನಂತರ ಮುಂದುವರಿಸಿ ಕ್ಲಿಕ್ ಮಾಡಿ. ಅದರ ನಂತರ ಇತರ ವಿವರಗಳನ್ನು ಪೂರ್ಣಗೊಳಿಸಿ ಮತ್ತು ಪಾಸ್ವರ್ಡ್ ಅನ್ನು ಹೊಂದಿಸಿ.
ಇದನ್ನು ಓದಿ: ʻವೀಕೆಂಡ್ ವಿಥ್ ರಮೇಶ್ ಸೀಸನ್ 5ʼಗೆ ದಿನಾಂಕ ಫಿಕ್ಸ್; ಈ ಸೀಸನ್ ಮೊದಲ ಅಥಿತಿ ಯಾರು ಗೊತ್ತಾ?
* ಅದರ ನಂತರ ನಿಮ್ಮ ಪ್ಯಾನ್ ಐಡಿ ಸಂಖ್ಯೆ, ಪಾಸ್‌ವರ್ಡ್, ಜನ್ಮ ದಿನಾಂಕದ ವಿವರಗಳನ್ನು ನಮೂದಿಸಿ.
* ಲಾಗಿನ್ ಪುಟ ತೆರೆದ ನಂತರ ಆಧಾರ್ ಲಿಂಕ್‌ಗಾಗಿ ಮತ್ತೊಂದು ಹೊಸ ವಿಂಡೋ ಪುಟ ತೆರೆಯುತ್ತದೆ.
* ಪ್ಯಾನ್‌ಕಾರ್ಡ್‌ನಲ್ಲಿ ಹೆಸರು ಮತ್ತು ಜನ್ಮ ದಿನಾಂಕದ ಎಲ್ಲಾ ವಿವರಗಳನ್ನು ಅಲ್ಲಿ ನೋಡಲಾಗುತ್ತದೆ. ನಿಮ್ಮ ಆಧಾರ್ ಮತ್ತು ಪ್ಯಾನ್ ಕಾರ್ಡ್‌ನಲ್ಲಿ ವಿವರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿ.
* ಎಲ್ಲವೂ ಸರಿಯಾಗಿದೆ ಎಂದು ಖಚಿತಪಡಿಸಿಕೊಂಡ ನಂತರ ಲಿಂಕ್ ಬಟನ್ ಕ್ಲಿಕ್ ಮಾಡಿ.
* ಅದರ ನಂತರ ಪಾವತಿಗಾಗಿ ಮತ್ತೊಂದು ಪುಟ ತೆರೆಯುತ್ತದೆ. ಅದರಲ್ಲಿ ನಿಮ್ಮ ಆದಾಯದ ವಿವರಗಳನ್ನು ನಮೂದಿಸಿ. ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡದಿದ್ದರೆ 1000 ಸಾವಿರ ರೂ ಪಾವತಿಸಬೇಕು. ಅದರ ನಂತರ ನೀವು ಆಧಾರ್ ಅನ್ನು ಪ್ಯಾನ್ ಕಾರ್ಡ್‌ಗೆ ಯಶಸ್ವಿಯಾಗಿ ಲಿಂಕ್ ಮಾಡಲಾಗಿದೆ ಎಂಬ ವಿವರಗಳನ್ನು ನೀವು ನೋಡುತ್ತೀರಿ.
ಇದನ್ನು ಓದಿ: ಕಬ್ಜ ಸಿನಿಮಾ ಮೂಲಕ ಗ್ರ್ಯಾಂಡ್ ಎಂಟ್ರೀ ಕೊಟ್ಟ ಉಪ್ಪಿ, ಸುದೀಪ್, ಶಿವಣ್ಣ; ಸಿನಿಮಾ ನೋಡಿ ಪ್ರೇಕ್ಷಕ ಪ್ರಭುಗಳು ಹೇಳಿದ್ದೇನು?