ಪೋಷಕರಿಗೆ ಬಿಗ್ ಶಾಕ್: ಪಠ್ಯ ಪುಸ್ತಕಗಳ ದರ ಏರಿಕೆ!

ಖಾಸಗಿ ಶಾಲಾ, ಕಾಲೇಜುಗಳ ಪಠ್ಯ ಪುಸ್ತಕಕ್ಕೂ ಬೆಲೆ ಏರಿಕೆ ಬಿಸಿ ತಟ್ಟಿದ್ದು, ಶಾಲೆಗಳಿಗೆ ಕರ್ನಾಟಕ ಪಠ್ಯಪುಸ್ತಕ ಸೊಸೈಟಿ(KTBS) ಪೂರೈಸುವ ಪುಸ್ತಕ ಬೆಲೆ ಏರಿಕೆ ಮಾಡಿದೆ. ಇದರಿಂದ ಈಗಾಗಲೇ ಬೆಲೆ ಏರಿಕೆ ಮಧ್ಯೆ ತತ್ತರಿಸಿ ಹೋಗತ್ತಿರುವ…

book fair vijayaprabha news

ಖಾಸಗಿ ಶಾಲಾ, ಕಾಲೇಜುಗಳ ಪಠ್ಯ ಪುಸ್ತಕಕ್ಕೂ ಬೆಲೆ ಏರಿಕೆ ಬಿಸಿ ತಟ್ಟಿದ್ದು, ಶಾಲೆಗಳಿಗೆ ಕರ್ನಾಟಕ ಪಠ್ಯಪುಸ್ತಕ ಸೊಸೈಟಿ(KTBS) ಪೂರೈಸುವ ಪುಸ್ತಕ ಬೆಲೆ ಏರಿಕೆ ಮಾಡಿದೆ.

ಇದರಿಂದ ಈಗಾಗಲೇ ಬೆಲೆ ಏರಿಕೆ ಮಧ್ಯೆ ತತ್ತರಿಸಿ ಹೋಗತ್ತಿರುವ ಜನತೆಗೆ ಈಗ ಮಕ್ಕಳ ಪಠ್ಯಪುಸ್ತಕದ ಬೆಲೆ ಏರಿಕೆ ಇನ್ನಷ್ಟು ಗಾಯದ ಮೇಲೆ ಬರೆ ಎಳೆದಂತಾಗಿದೆ. ಖಾಸಗಿ ಶಾಲಾ ಕಾಲೇಜುಗಳಿಗೆ ಕೆಟಿಬಿಎಸ್‌ ಒದಗಿಸುವ ಪಠ್ಯಪುಸ್ತಕ ದರ ಶೇ.25 ರಷ್ಟು ದುಬಾರಿ ಆಗಿದೆ.

ಕಳೆದ ವರ್ಷ 46 ರೂ.ಇದ್ದ ಗಣಿತ ಭಾಗ-2 ಪುಸ್ತಕದ ಮಾರಾಟ ಬೆಲೆ 60 ರೂ.ಗೆ ಏರಿಕೆಯಾಗಿದೆ. ವಿಜ್ಞಾನ ಭಾಗ-2, 34 ರೂ.ನಿಂದ 44 ರೂ.ಗೆ ಹೆಚ್ಚಳವಾಗಿದೆ. ಕಾಗದದ ಬೆಲೆ, ಮುದ್ರಣ ವೆಚ್ಚ, GST ಕಾರಣದಿಂದ ಬೆಲೆ ಏರಿಕೆ ಮಾಡಲಾಗಿದೆ. ರಷ್ಯಾ-ಉಕ್ರೇನ್ ಯುದ್ಧದಿಂದಾಗಿ ಜಾಗತಿಕವಾಗಿ ಕಾಗದದ ಕೊರತೆಯಿದೆ.

Vijayaprabha Mobile App free

ಇದರಿಂದ 19000 ಶಾಲೆ-ಕಾಲೇಜುಗಳ 52 ಲಕ್ಷ ವಿದ್ಯಾರ್ಥಿಗಳ ಪೋಷಕರಿಗೆ ಹೊರೆಯಾಗಲಿದೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.