ʻವೀಕೆಂಡ್ ವಿಥ್ ರಮೇಶ್‌ ಸೀಸನ್ 5ʼಗೆ ದಿನಾಂಕ ಫಿಕ್ಸ್; ಈ ಸೀಸನ್‌ ಮೊದಲ ಅಥಿತಿ ಯಾರು ಗೊತ್ತಾ?

ಸಾಧಕರ ಬದುಕಿನ ಚಿತ್ರಣ ಪರಿಚಯಿಸುವ, ಜನಪ್ರಿಯ ಶೋ ʻವೀಕೆಂಡ್ ವಿಥ್ ರಮೇಶ್‌ʼ ಮತ್ತೆ ಪ್ರಸಾರವಾಗುತ್ತಿದೆ. ಎಲ್ಲರೂ ವೀಕೆಂಡ್ ವಿಥ್ ರಮೇಶ್‌ ಸೀಸನ್ 5 ಪ್ರಸಾರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಇದೀಗ ಕೊನೆಗೂ ವೀಕೆಂಡ್ ವಿಥ್ ರಮೇಶ್…

Weekend with Ramesh5

ಸಾಧಕರ ಬದುಕಿನ ಚಿತ್ರಣ ಪರಿಚಯಿಸುವ, ಜನಪ್ರಿಯ ಶೋ ʻವೀಕೆಂಡ್ ವಿಥ್ ರಮೇಶ್‌ʼ ಮತ್ತೆ ಪ್ರಸಾರವಾಗುತ್ತಿದೆ. ಎಲ್ಲರೂ ವೀಕೆಂಡ್ ವಿಥ್ ರಮೇಶ್‌ ಸೀಸನ್ 5 ಪ್ರಸಾರಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ.

ಇದೀಗ ಕೊನೆಗೂ ವೀಕೆಂಡ್ ವಿಥ್ ರಮೇಶ್ ಸೀಸನ್ 5ರ ಪ್ರಸಾರದ ದಿನಾಂಕ ಹಾಗೂ ಸಮಯ ರಿವೀಲ್‌ ಆಗಿದೆ. ಅಧಿಕೃತ ಮೂಲಗಳ ಪ್ರಕಾರ, ಇದೇ ಮಾರ್ಚ್ 25 ರಿಂದ ವೀಕೆಂಡ್ ವಿಥ್ ರಮೇಶ್‌ ಸೀಸನ್ 5, ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.

ಇದನ್ನು ಓದಿ: ಖ್ಯಾತ ನಟಿ ಪವಿತ್ರಾ ಲೋಕೇಶ್ ಮಕ್ಕಳ ತಂದೆ ಇವರಲ್ಲ..!

Vijayaprabha Mobile App free

‘ವೀಕೆಂಡ್ ವಿತ್ ರಮೇಶ್’​ನ ಈ ಸೀಸನ್‌ ಮೊದಲ ಅಥಿತಿ ಯಾರು ಗೊತ್ತಾ?

ಇನ್ನು, ಈ ಶೋನ ಪ್ರೋಮೋ ಇದಾಗಲೇ ಬಿಡುಗಡೆ ಆಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಎಪಿಸೋಡ್ ಪ್ರಸಾರ ಆರಂಭವಾಗಲಿದೆ. ಆದರೆ ಗೆಸ್ಟ್ ಗಳ ಪಟ್ಟಿಯನ್ನ ಈ ವರೆಗೂ ಎಲ್ಲೂ ಕೂಡ ಬಿಡುಗಡೆ ಮಾಡಿಲ್ಲ. ಆದ್ದರಿಂದ ಊಹಪೋಹಗಳು ಸ್ವಲ್ಪ ಮಟ್ಟಿಗೆ ಹರಿದಾಡುತ್ತಿವೆ.

ಇದನ್ನು ಓದಿ: ಆಧಾರ್ ಕಾರ್ಡ್ ಹೊಂದಿರುವವರಿಗೆ ಭರ್ಜರಿ ಗುಡ್ ನ್ಯೂಸ್

ಹೌದು, ಈ ಸೀಸನ್​ನ ಮೊದಲ ಎಪಿಸೋಡ್​ಗೆ ಕಾಂತಾರ ನಾಯಕ ರಿಷಬ್ ಶೆಟ್ಟಿ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ, ಭಾರತದಾದ್ಯಂತ ಹೆಸರು ಮಾಡಿರುವ ನಟ, ನಿರ್ದೇಶಕ, ಕೊರಿಯೋಗ್ರಾಫರ್ ಪ್ರಭುದೇವ ಅವರು ಮೊದಲ ಅತಿಥಿ ಎನ್ನಲಾಗುತ್ತಿದೆ. ಈಗ ಇನ್ನುಳಿದ ಅತಿಥಿಗಳ ಲಿಸ್ಟ್ ಇಲ್ಲಿದೆ.

ಆದರೆ ಈ ಮಾಹಿತಿಯ ಬಗ್ಗೆ ವಾಹಿನಿ ಅಧಿಕೃತ ಹೇಳಿಕೆ ಕೊಟ್ಟಿಲ್ಲವಾದರೂ ʻವೀಕೆಂಡ್ ವಿಥ್ ರಮೇಶ್‌ ಸೀಸನ್ 5ಗೆ ಕಾಂತಾರ ಸಿನಿಮಾ ಖ್ಯಾತಿಯ ನಟ ರಿಷಬ್ ಶೆಟ್ಟಿ, ಧ್ರುವ ಸರ್ಜಾ, ಡಾಲಿ ಧನಂಜಯ , ಕ್ರಿಕೆಟಿಗ ಕೆ ಎಲ್ ರಾಹುಲ್, ನಟಿಯರಾದ ರಚಿತಾ ರಾಮ್, ಮೋಹಕ ತಾರೆ ರಮ್ಯ ಅವರು ಅತಿಥಿಗಳಾಗಿ ಬರಬಹುದು ಎನ್ನಲಾಗಿದೆ.

ಇದನ್ನು ಓದಿ: ಖ್ಯಾತ ನಟಿ ಪವಿತ್ರಾ ಲೋಕೇಶ್ -ನರೇಶ್‌ LOVE ಟ್ರ್ಯಾಕ್‌ಗೆ BIG ಟ್ವಿಸ್ಟ್‌!

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.