State budget 2023: ಯಾವ್ಯಾವ ಇಲಾಖೆಗೆ ಎಷ್ಟೆಷ್ಟು ದುಡ್ಡು? ಬಜೆಟ್‌ ಘೋಷಣೆಯ ಪ್ರಮುಖ ಮುಖ್ಯಾಂಶಗಳು ಹೀಗಿದೆ

ಸಿಎಂ ಬಸವರಾಜ ಬೊಮ್ಮಾಯಿಯವರು ತಮ್ಮ 2ನೇ ಬಜೆಟ್ ಅನ್ನು ಮಂಡಿಸಿದ್ದು, ಶಿಕ್ಷಣ ಕ್ಷೇತ್ರಕ್ಕೆ 37,960 ಕೋಟಿ ರೂಪಾಯಿ ಮೀಸಲು, ಜಲಸಂಪನ್ಮೂಲ ಇಲಾಖೆಗೆ 22,854 ರೂ. ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌ಗೆ 20,494 ರೂ, ನಗರಾಭಿವೃದ್ಧಿ ಇಲಾಖೆಗೆ…

state-Budget-2023

ಸಿಎಂ ಬಸವರಾಜ ಬೊಮ್ಮಾಯಿಯವರು ತಮ್ಮ 2ನೇ ಬಜೆಟ್ ಅನ್ನು ಮಂಡಿಸಿದ್ದು, ಶಿಕ್ಷಣ ಕ್ಷೇತ್ರಕ್ಕೆ 37,960 ಕೋಟಿ ರೂಪಾಯಿ ಮೀಸಲು, ಜಲಸಂಪನ್ಮೂಲ ಇಲಾಖೆಗೆ 22,854 ರೂ. ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌ಗೆ 20,494 ರೂ, ನಗರಾಭಿವೃದ್ಧಿ ಇಲಾಖೆಗೆ ಈ ಬಾರಿ 17,938 ಕೋಟಿ ರೂ, ಕಂದಾಯ ಇಲಾಖೆಗೆ 15,943 ಕೋಟಿ ಘೋಷಣೆ ಮಾಡಿದ್ದಾರೆ.

ಇನ್ನು, ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ 15,151 ಕೋಟಿ, ಒಳಾಡಳಿತ ಹಾಗೂ ಸಾರಿಗೆ ಇಲಾಖೆಗೆ 14,509 ಕೋಟಿ, ಇಂಧನ ಇಲಾಖೆಗೆ 13,803 ಕೋಟಿ ರೂ, ಸಮಾಜಕಲ್ಯಾಣ ಇಲಾಖೆಗೆ 11,163 ಕೋಟಿ ರೂ ಲೋಕೋಪಯೋಗಿ ಇಲಾಖೆಗೆ 10,741 ಕೋಟಿ ರೂ., ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ 9,456 ಕೋಟಿ ರೂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 5,676 ಕೋಟಿ, ಆಹಾರ ಇಲಾಖೆಗೆ 4,600 ಕೋಟಿ ರೂ ಮೀಸಲು, ವಸತಿ ಇಲಾಖೆಗೆ 3,787 ಕೋಟಿ ರೂ ಗಳನ್ನು ವಿವಿಧ ಇಲಾಖೆಗಳ ಅಬಿವೃದ್ಧಿಗೆ ಸಿಎಂ ಬೊಮ್ಮಾಯಿ ಅವರು ಬಜೆಟ್ ಘೋಷಿಸಿದ್ದಾರೆ.

state budget 2023 highlets :ಬಜೆಟ್‌ ಘೋಷಣೆಯ ಪ್ರಮುಖ ಮುಕ್ಯಾಂಶಗಳು

Vijayaprabha Mobile App free

ಕಳೆದ ವರ್ಷ ಬೊಮ್ಮಾಯಿ ತಮ್ಮ ಚೊಚ್ಚಲ ಬಜೆಟ್‌ನಲ್ಲಿ ಆದಾಯಕ್ಕಿಂತ 5000ಕೋಟಿ ರೂ.ಗಳ ಹೆಚ್ಚಿನ ಕೊರತೆ ಬಜೆಟ್‌ ಮಂಡನೆ

ಕೃಷಿ & ಪೂರಕ ವಲಯಕ್ಕೆ 33,700ಕೋ., ಕ್ಷೇಮಾಭಿವೃದ್ಧಿಗೆ 68,479ಕೋ.

ಆರ್ಥಿಕ ಅಭಿವೃದ್ಧಿಗೆ 55,657ಕೋಟಿ, ಬೆಂಗಳೂರಿಗೆ 8,409ಕೋಟಿ

ಸಂಸ್ಕೃತಿ-ಪರಂಪರೆ & ನೈಸರ್ಗಿಕ ಸಂಪತ್ತು ರಕ್ಷಣೆಗೆ 3102 ಕೋಟಿ

ಆಡಳಿತ ಸುಧಾರಣೆ & ಸಾರ್ವಜನಿಕ ಸೇವೆಗೆ 56,710 ಕೋಟಿ

ಮಹಿಳೆಯರ ಸಬಲೀಕರಣಕ್ಕೆ 43,188 ಕೋಟಿ

ಮಕ್ಕಳ ಅಭ್ಯುದಯಕ್ಕೆ 40,944 ಕೋಟಿ ಮೀಸಲು

ಬೊಮ್ಮಾಯಿ ಬಜೆಟ್‌ ಘೋಷಣೆಗಳು:

4 ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ IVF ಕೇಂದ್ರ ಬೆಂಗಳೂರು, ಹುಬ್ಬಳ್ಳಿ, ಮೈಸೂರು, ಕಲಬುರಗಿಯಲ್ಲಿ IVF ಕೇಂದ್ರ

IVF ಕ್ಲಿನಿಕ್​ಗಳ ಸ್ಥಾಪನೆಗೆ ₹6 ಕೋಟಿ ಮೀಸಲು

ಕನ್ನಡ ಚಿತ್ರ ರಂಗಕ್ಕೆ ಪ್ರೋತ್ಸಾಹ ನೀಡುವುದಕ್ಕಾಗಿ ಎರಡನೇ ಹಂತದ ನಗರಗಳಲ್ಲಿ 100ರಿಂದ 200 ಆಸನಗಳುಳ್ಳ ಮಿನಿ ಥಿಯೇಟರ್​ಗಳ ಸ್ಥಾಪನೆಗೆ ಪ್ರೋತ್ಸಾಹ

1 ಕೋಟಿವರೆಗಿನ ಸಣ್ಣ ಕಾಮಗಾರಿಯಲ್ಲಿ SC/ST ಗುತ್ತಿಗೆದಾರರಿಗೆ ಮೀಸಲಾತಿ SC/ST ಗುತ್ತಿಗೆದಾರರಿಗೆ ಶೇ.24ರವರೆಗೆ ಮೀಸಲಾತಿ

ಉಡುಪಿ, ದ.ಕನ್ನಡ, ಉ.ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ನಾರಾಯಣ ಗುರು ವಸತಿ ಶಾಲೆ ಆರಂಭ

ಧಾರವಾಡದಲ್ಲಿ ವಿಧಿವಿಜ್ಞಾನ ಪ್ರಯೋಗಾಲಯ ಸ್ಥಾಪನೆ

Tourist guide ಗಳ ಗೌರವ ಧನ 2000 ನಿಂದ 5000 ರೂಗಳಿಗೆ ಹೆಚ್ಚಳ

IIT, IIM, IISc, NIT ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವ ಪ್ರೋತ್ಸಾಹ ಧನ 2 ರಿಂದ 4 ಲಕ್ಷಕ್ಕೆ ಏರಿಕೆ

ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆ ಘೋಷಣೆ

ರಾಮನಗರದ ರಾಮದೇವರ ಬೆಟ್ಟದಲ್ಲಿ ರಾಮಮಂದಿರ ನಿರ್ಮಾಣ

ಶಿರಸಿಯಲ್ಲಿ ರಾಜ್ಯದ ಪರಿಸರ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ

ಉತ್ತರ ಕನ್ನಡ ಜಿಲ್ಲೆಗೆ ಕೊನೆಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ

ರಾಜ್ಯದಲ್ಲಿ ಹೆಚ್ಚುವರಿಯಾಗಿ 1,230 ಶಾಲಾ ಕೊಠಡಿ ನಿರ್ಮಾಣ

ಆರೋಗ್ಯ ದಾಖಲೆಗಳನ್ನು ಒಂದೆಡೆ ಸುರಕ್ಷಿತವಾಗಿ ಕ್ರೂಢೀಕರಿಸಲು, ರೋಗಿಗಳ ಸಮ್ಮತಿಯೊಂದಿಗೆ ವೈದ್ಯಕೀಯ ದಾಖಲಾತಿಗಳನ್ನು ಡಿಜಿಟಲೀಕರಣ

69,000 ಬೀದಿ ವ್ಯಾಪಾರಿಗಳಿಗೆ 70 ಕೋಟಿ ಸಾಲ ಮಂಜೂರು

100 ಕೋಟಿ ವೆಚ್ಚದಲ್ಲಿ ಮಕ್ಕಳ ಬಸ್​ ಯೋಜನೆ ಅನುಷ್ಠಾನ- 2 ಲಕ್ಷ ವಿದ್ಯಾರ್ಥಿಗಳಿಗೆ ಲಾಭ

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.