ದಾವಣಗೆರೆ: ಮಾ. 4, 5ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ; ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜಾನಪದ ಕವಿ ಯುಗಧರ್ಮ ರಾಮಣ್ಣ ಆಯ್ಕೆ

ದಾವಣಗೆರೆ: ಮಾರ್ಚ್‌ 4 ಮತ್ತು 5ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಾವಣಗೆರೆ ಜಿಲ್ಲೆಯ ಬಸವಾಪಟ್ಟಣ ಸಮೀಪದ ಹರನಹಳ್ಳಿ ಕೆಂಗಾಪರದ ರಾಮಲಿಂಗೇಶ್ವರ ವಿದ್ಯಾಸಂಸ್ಥೆಯಲ್ಲಿ ನಡೆಸಲು ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಮಾಡಲಾಯಿತು. ‘ಸಮ್ಮೇಳನದ…

District Kannada Sahitya Sammelan

ದಾವಣಗೆರೆ: ಮಾರ್ಚ್‌ 4 ಮತ್ತು 5ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಾವಣಗೆರೆ ಜಿಲ್ಲೆಯ ಬಸವಾಪಟ್ಟಣ ಸಮೀಪದ ಹರನಹಳ್ಳಿ ಕೆಂಗಾಪರದ ರಾಮಲಿಂಗೇಶ್ವರ ವಿದ್ಯಾಸಂಸ್ಥೆಯಲ್ಲಿ ನಡೆಸಲು ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನ ಮಾಡಲಾಯಿತು.

‘ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಜಾನಪದ ಕವಿ ಯುಗಧರ್ಮ ರಾಮಣ್ಣ ಅವರನ್ನು ಆಯ್ಕೆ ಮಾಡಲಾಗಿದ್ದು, ಎರಡು ದಿನ ನಡೆಯುವ ಈ ಸಮ್ಮೇಳನದಲ್ಲಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ, ವಿವಿಧ ಗೋಷ್ಠಿಗಳು, ನಾಡು, ನುಡಿ, ಕಲೆ, ಸಾಹಿತ್ಯ ಸಂಸ್ಕೃತಿಯನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದು ಕ.ಸಾ.ಪ. ಜಿಲ್ಲಾ ಘಟಕದ ಅಧ್ಯಕ್ಷ ಬಿ.ವಾಮದೇವಪ್ಪ ಅವರು ತಿಳಿಸಿದ್ದಾರೆ.

ಅಷ್ಟೇ ಅಲ್ಲ, ಊಟ, ಉಪಾಹಾರ, ಶಾಮಿಯಾನ ವ್ಯವಸ್ಥೆ, ಅತಿಥಿಗಳ ಸ್ವಾಗತ ಮುಂತಾದ ವಿಷಯಗಳನ್ನು ಚರ್ಚಿಸಲಾಗಿದ್ದು, ಪೂರ್ವಭಾವಿ ಸಭೆಗೆ ಆಗಮಿಸಿದ್ದ ಜನಪ್ರತಿನಿಧಿಗಳು, ಗಣ್ಯರು ಸಮ್ಮೇಳನದ ಸಂಪೂರ್ಣ ಯಶಸ್ಸಿಗೆ ಬೆಂಬಲ ನೀಡುವುದಾಗಿ ಭರವಸೆ ನೀಡಿದರು’ ಎಂದು ಬಿ.ವಾಮದೇವಪ್ಪ ಅವರು ತಿಳಿಸಿದ್ದಾರೆ.

Vijayaprabha Mobile App free

ಇನ್ನು, ಕಾರ್ಯಕ್ರಮದಲ್ಲಿ ರಾಜ್ಯ ರೈತ ಮುಖಂಡ ತೇಜಸ್ವಿ ಪಟೇಲ್‌, ಬಿಜೆಪಿಮುಖಂಡ ಅನಿಲ್‌ನಾಯ್ಕ್‌, ರಾಷ್ಟ್ರೀಯ ಗೋ ಸಂಸರಕ್ಷಣಾ ಸಮಿತಿಯ ಅಧ್ಯಕ್ಷ ಬಿ.ಟಿ. ಸಿದ್ಧಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಾನಿಬಾಯಿ, ಸದಸ್ಯರಾದ ಪರಶುರಾಮಪ್ಪ, ರಾಜಪ್ಪ, ಎಸ್‌. ಅಣ್ಣೋಜಿರಾವ್‌, ರಾಮಲಿಂಗೇಶ್ವರ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ರಾಘು ದೊಡ್ಡಮನಿ, ಕಣಿವೆಬಿಳಚಿ ಕೆಂಗಾಪುರದ ಮುಖಂಡರಾದ ಪಿ.ಮಂಜಪ್ಪ, ಮಂಜುನಾಥಜಾಧವ್‌, ಕೆ.ಪಿ.ಓಂಕಾರನಾಯ್ಕ್‌, ಬಾಬುರಾವ್‌, ಜಿಲ್ಲಾ ಕ.ಸಾ.ಪ. ಪದಾಧಿಕಾರಿಗಳಾದ ಬಿ.ದಿಳ್ಳೆಪ್ಪ, ರಾಘವೇಂದ್ರನಾಯರಿ, ಎ.ಆರ್‌. ಉಜ್ಜಿನಪ್ಪ, ಎಂ.ವಿ. ಚನ್ನಬಸಪ್ಪ, ರೇವಣಸಿದ್ಧಪ್ಪ, ಜಿಗಳಿ ಪ್ರಕಾಶ್‌, ಕೆ.ಎಸ್‌. ವೀರೇಶ್‌ಪ್ರಸಾದ್‌, ಸಾಹಿತಿ ಫೈಜ್ನಟ್ರಾಜ್‌, ಶಿಕ್ಷಕರಾದ ಎಚ್‌.ಆರ್‌.ಸತೀಶ್‌. ಎಚ್‌.ಆರ್‌.ಹಾಲೇಶ್‌ ಭಾಗವಹಿಸಿದ್ದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.