ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ, ಚಂದನವನದಲ್ಲಿ ಭಾರೀ ಕುತೂಹಲ ಮೂಡಿಸಿದ್ದ ‘ಕ್ರಾಂತಿ’ ಸಿನಿಮಾ ನಿನ್ನೆ ಬಿಡುಗಡೆ ಆಗಿದ್ದು, ಮಿಶ್ರ ಪ್ರತಿಕ್ರಿಯೆ ನಡುವೆಯೂ ಭರ್ಜರಿ ಓಪನಿಂಗ್ ಪಡೆದು ಅತೀ ಹೆಚ್ಚು ಗಳಿಕೆ ಪಡೆದ 5ನೇ ಕನ್ನಡ ಚಿತ್ರ ಎಂಬ ದಾಖಲೆ ಮಾಡಿದೆ.
ಹೌದು, ‘ಕ್ರಾಂತಿ’ ಸಿನಿಮಾ ಮಾಧ್ಯಮಗಳ ಬಹಿಷ್ಕಾರದ ನಡುವೆಯೂ ಅಭಿಮಾನಿಗಳ ಪ್ರಚಾರದಿಂದ ಕುತೂಹಲ ಮೂಡಿಸಿತ್ತು. ಅದರಂತೆ ‘ಕ್ರಾಂತಿ’ ಸಿನಿಮಾ ಮೂಲಗಳ ಪ್ರಕಾರ ಮೊದಲ ದಿನವೇ 12ರಿಂದ 13 ಕೋಟಿ ರೂ ಗಳಿಸಿದೆ ಎನ್ನಲಾಗಿದೆ.
ಇನ್ನು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಚಿತಾ ರಾಮ್ ನಟಿಸಿರುವ ‘ಕ್ರಾಂತಿ’ ಚಿತ್ರವನ್ನು ಮೀಡಿಯಾ ಹೌಸ್ ಬ್ಯಾನರ್ನಲ್ಲಿ ನಿರ್ಮಾಣವಾಗಿದ್ದು, ವಿ.ಹರಿಕೃಷ್ಣ ನಿರ್ದೇಶಿಸಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.