ಪೈಲ್ಸ್ ಅಥವಾ ಮೂಲವ್ಯಾಧಿಗೆ ಮನೆಮದ್ದುಗಳು
ನಿಮಗೆ ಗೊತ್ತೇ?
ಪ್ರತಿ ವರ್ಷ 1 ಕೋಟಿ ಮಂದಿ ಪೈಲ್ಸ್ ನಿಂದ ಬಳಲುತ್ತಾರೆ.
ಇದರಿಂದ ಅಪಾಯ ಯಾರಿಗೆ?
45-65 ವರ್ಷದವರಿಗೆ
ಗರ್ಭಿಣಿಯರಿಗೆ
ಹದಿಹರೆಯದವರಿಗೆ
‘ಪೈಲ್ಸ್ ಶೇ.100ರಷ್ಟು ಗುಣಮುಖವಾಗಬಲ್ಲದು.
ಪೈಲ್ಸ್‌ಗೆ ಕಾರಣ:
ಒತ್ತಡ, ನಿದ್ರಾಹೀನತೆ, ಮಲಬದ್ಧತೆ ಮತ್ತು ಹೆಚ್ಚು ‘ಫಾಸ್ಟ್ ಫುಡ್’ ಸೇವಿಸುವುದರಿಂದ ಈ ರೋಗ ಬೇಗ ಬರುತ್ತದೆ.
ಅಧಿಕ ತೂಕ
ಫೈಬರ್ ಆಹಾರದ ಕಡಿಮೆ ಸೇವನೆ.
ಪೈಲ್ಸ್ ಆನುವಂಶಿಕವಾಗಿರಬಹುದು.
ಬಹಳ ಹೊತ್ತು ಕುಳಿತುಕೊಂಡೇ ಇರುವುದು.
ಪೈಲ್ಸ್ ಲಕ್ಷಣಗಳು:
ಮಲ ವಿಸರ್ಜನೆ ವೇಳೆ ರಕ್ತ ಬರುವುದು.
ಗುದ ದ್ವಾರದ ಸುತ್ತಲೂ ನೋವು, ತುರಿಕೆ ಮತ್ತು ಕಿರಿಕಿರಿ.
ಮಲ ವಿಸರ್ಜನೆಯಾದರೂ ಇನ್ನೂ ಆಗೇ ಇಲ್ಲ ಎಂದು ಅನಿಸುವುದು.
ಗುದ ದ್ವಾರದ ಸುತ್ತ ಊತ (ನೋವು)
ಇತ್ತೀಚಿನ ದಿನಗಳಲ್ಲಿ ಯುವ ಜನರ ಆಹಾರ ಪದ್ಧತಿ ಮತ್ತು ಅನಾರೋಗ್ಯಕರ ಜೀವನ ಶೈಲಿಯಿಂದ ಪೈಲ್ಸ್ ಸಮಸ್ಯೆ ಎದುರಿಸುವಂತಾಗಿದೆ.
ಅಲೋವೆರಾ.
‘ಅಲೋವೆರಾ ಜೆಲ್ ಅನ್ನು ಪೈಲ್ಸ್ ಚಿಕಿತ್ಸೆಗಾಗಿ ಹಿಂದಿನ ಕಾಲದಿಂದಲೂ ಬಳಸಲಾಗುತ್ತಿದೆ.
ಹೊರ ಮೂಲವ್ಯಾಧಿಯಿದ್ದರೆ ಹೊರಗಿನಿಂದ ಜೆಲ್ ಹಚ್ಚಿ 10-15 ನಿಮಿಷ ಹಾಗೆಯೇ ಬಿಡಿ.
ಒಳ ಮೂಲವ್ಯಾಧಿಯಿದ್ದರೆ..ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಅಲೋವೆರಾ ರಸವನ್ನು ಕುಡಿಯಬಹುದು. ಇದು ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ಮಲಭದ್ಧತೆಯನ್ನು ಹೋಗಲಾಡಿಸುತ್ತದೆ.
ಕುಳಿತು ಸ್ನಾನ:
“ನೋವು, ತುರಿಕೆ ಕಡಿಮೆಯಾಗಲು ಮತ್ತು ಇನ್ಸೆಕ್ಷನ್ ಆಗದಂತೆ ತಡೆಯಲು ಬೆಚ್ಚಗಿನ ನೀರಿನಲ್ಲಿ
ಕುಳಿತುಕೊಳ್ಳುವುದು.
ಟಾಯ್ಲೆಟ್‌ಗೆ ಹೋಗಿ ಬಂದ ಮೇಲೆ 15 20 ನಿಮಿಷಗಳ ಕಾಲ ಬೆಚ್ಚಗಿನ ಸ್ನಾನ ಮಾಡಿ.
ಎಪ್ಸಮ್ ಸಾಲ್ಟ್ ನೀರಿಗೆ ಸೇರಿಸಿ ಅದರಲ್ಲಿ ಕುಳಿತುಕೊಳ್ಳುವುದರಿಂದ ನೋವು ಉಪಶಮನವಾಗುತ್ತದೆ.
ಹರಳೆಣ್ಣೆ :
ಪೈಲ್ಸ್ ಲಕ್ಷಣಗಳಿದ್ದರೆ ಪ್ರತಿ ರಾತ್ರಿ 3 ಮಿ.ಲಿ. ಕ್ಯಾಸ್ಟರ್ ಆಯಿಲ್ (ಹರಳೆಣ್ಣೆ) ಅನ್ನು ಹಾಲಿನಲ್ಲಿ ಹಾಕಿ ಸೇವಿಸಿ. ನೋವಿರುವ ಜಾಗಕ್ಕೆ ಹಚ್ಚಿ.
ತೆಂಗಿನ ಎಣ್ಣೆ:
ತೆಂಗಿನ ಎಣ್ಣೆಯನ್ನು ಹಚ್ಚುವುದರಿಂದ ಮೂಲವ್ಯಾಧಿಯಿಂದ ಉಂಟಾಗುವ ನೋವು, ಕಿರಿಕಿರಿ, ಊತ ಮತ್ತು ತುರಿಕೆ ಕಡಿಮೆಯಾಗುತ್ತದೆ.
ಸರಳ ಮನೆ ಮದ್ದುಗಳು :
ಮಲಬದ್ಧತೆ ತಡೆಯಲು ಸಾಕಷ್ಟು ನೀರು ಕುಡಿಯಿರಿ.
ಕಾಟನ್ ಮತ್ತು ಸಡಿಲವಾದ ಬಟ್ಟೆಗಳನ್ನು ಧರಿಸಿ.
ದಿನವೂ ವ್ಯಾಯಾಮ ಮಾಡಿ
ಈ ಅಭ್ಯಾಸ ರೂಢಿಸಿಕೊಳ್ಳಿ:
ಮಲ ವಿಸರ್ಜನೆ ವೇಳೆ ಹೆಚ್ಚು ಒತ್ತಡ ಹಾಕಬೇಡಿ.
ಶೌಚಾಲಯದಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳಬೇಡಿ.
ಯಾವ ಆಹಾರ ಬೇಕು..ಯಾವುದು ಬೇಡಾ:
ಇವುಗಳನ್ನು ತಿನ್ನಿ:
ಧಾನ್ಯಗಳು, ಕಾಳುಗಳು, ಗೆಡ್ಡೆ ಗೆಣಸು, ಸೌತೆಕಾಯಿ, ಕಲ್ಲಂಗಡಿ, ಸೇಬು, ಕಪ್ಪು ದ್ರಾಕ್ಷಿ ಮತ್ತು ಬಾಳೆಹಣ್ಣು ನಿಯಮಿತವಾಗಿ ತಿಂದರೆ ಪೈಲ್ಸ್ ಬೇಗ ಗುಣವಾಗುತ್ತದೆ.
ಇವುಗಳನ್ನು ತಿನ್ನಬೇಡಿ:
ಡೈರಿ ಉತ್ಪನ್ನ, ಮೈದಾ, ಕೆಂಪು ಮಾಂಸ, ಕರಿದ ಪದಾರ್ಥ, ಉಪ್ಪು ಮತ್ತು ಮಸಾಲೆಯುಕ್ತ ಆಹಾರ, ಸೋಡಾ, ಆಲ್ಕೋಹಾಲ್ ಸೇವಿಸಬಾರದು.