ಯೋಗ ಮ್ಯಾರಥಾನ್: ದಾವಣಗೆರೆಯಲ್ಲಿ ನಡೆದ ಯೋಗಥಾನ್‌ನಲ್ಲಿ ಏಕಕಾಲದಲ್ಲಿ ಯೋಗ ಮಾಡಿದ 8000 ಮಂದಿ!

ದಾವಣಗೆರೆ: ರಾಜ್ಯ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡೆ, ಆಯುಷ್ ಇಲಾಖೆ ಹಾಗೂ ಜಿಲ್ಲಾ ಯೋಗ ಒಕ್ಕೂಟದ ಸಹಭಾಗಿತ್ವದಲ್ಲಿ ಯೋಗ ಮ್ಯಾರಥಾನ್ ಆಯೋಜಿಸಲಾಗಿದ್ದು, ಏಕಕಾಲಕ್ಕೆ ಯೋಗ ಮಾಡಿ ವಿಶ್ವದಾಖಲೆಗೆ ಸೇರುವ…

Yogathon

ದಾವಣಗೆರೆ: ರಾಜ್ಯ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡೆ, ಆಯುಷ್ ಇಲಾಖೆ ಹಾಗೂ ಜಿಲ್ಲಾ ಯೋಗ ಒಕ್ಕೂಟದ ಸಹಭಾಗಿತ್ವದಲ್ಲಿ ಯೋಗ ಮ್ಯಾರಥಾನ್ ಆಯೋಜಿಸಲಾಗಿದ್ದು, ಏಕಕಾಲಕ್ಕೆ ಯೋಗ ಮಾಡಿ ವಿಶ್ವದಾಖಲೆಗೆ ಸೇರುವ ಯೋಗಥಾನ್‌ನಲ್ಲಿ ದಾವಣಗೆರೆಯಲ್ಲಿ 8 ಸಾವಿರ ಮಂದಿ ಭಾಗವಹಿಸಿದರು.

ಯೋಗದ ಮಹತ್ವ ಅರಿತು ತೀವ್ರ ಚಳಿಯ ನಡುವೆಯೂ ಟೀ ಶರ್ಟ್‌ಗಳನ್ನು ಮಕ್ಕಳು, ಯುವಕರು ಮತ್ತು ಮಹಿಳೆಯರು ಧರಿಸಿ ಕ್ರೀಡಾಂಗಣಕ್ಕೆ ಹಸಿರು ಚಾಪೆ ಹಾಸಿದರು. ಇದಲ್ಲದೆ, ಪದಾಧಿಕಾರಿಗಳು ಮತ್ತು ಕೆಲವು ಹಿರಿಯರು ಸಹ ಸಕ್ರಿಯವಾಗಿ ಭಾಗವಹಿಸಿದರು.

ಇನ್ನು, ಯೋಗ ಮ್ಯಾರಥಾನ್ 8.15 ಕ್ಕೆ ಪ್ರಾರಂಭವಾಯಿತು. ಆರಂಭದಲ್ಲಿ ಶ್ವಾಸಗುರು ವಚನಾನಂದ ಸ್ವಾಮೀಜಿ ಯೋಗ ತಂತ್ರಗಳನ್ನು ಹೇಳಿಕೊಟ್ಟರು. ಯೋಗಾಭ್ಯಾಸವು ನಮಸ್ಕಾರ ಮುದ್ರೆಯಲ್ಲಿ ಕುಳಿತು ಆಳವಾದ ಉಸಿರಿನೊಂದಿಗೆ ಓಂಕಾರ ಮಂತ್ರವನ್ನು ಪಠಿಸುವ ಮೂಲಕ ಪ್ರಾರಂಭವಾಯಿಯಿತು. ಅವರೆಲ್ಲರೂ 40 ನಿಮಿಷಗಳ ಹೆಚ್ಚು ಕಾಲ ಯೋಗಾಭ್ಯಾಸ ಮಾಡಿದರು.

Vijayaprabha Mobile App free

ಈ ಯೋಗಾಭ್ಯಾಸದಲ್ಲಿ ಪ್ರತಿ 50 ವಿದ್ಯಾರ್ಥಿಗಳಿಗೆ ಒಬ್ಬ ಇನ್ವಿಜಿಲೇಟರ್ ಮತ್ತು ಪ್ರತಿ ಸಾವಿರ ವಿದ್ಯಾರ್ಥಿಗಳಿಗೆ ಒಬ್ಬ ತರಬೇತುದಾರನನ್ನು ನೇಮಕ ಮಾಡಲಾಗಿತ್ತು. ಅಷ್ಟೇ ಅಲ್ಲದೆ ಯೋಗಾಭ್ಯಾಸಕ್ಕೆ ತೊಂದರೆಯಾಗದಂತೆ 20 ಸಣ್ಣ ವೇದಿಕೆಗಳನ್ನು ಮಾಡಿದ್ದು, ಧ್ವನಿ ವ್ಯವಸ್ಥೆ, ಪ್ರಥಮ ಚಿಕಿತ್ಸೆ, ಶುದ್ಧ ಕುಡಿಯುವ ನೀರು, ತಿಂಡಿ-ತಿನಿಸುಗಳ ವ್ಯವಸ್ಥೆ ಮಾಡಲಾಗಿತ್ತು.

ಇನ್ನು, ಈ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎ. ಚನ್ನಪ್ಪ, ಮೇಯರ್ ಆರ್. ಜಯಮ್ಮ, ಜವಳಿ ವರ್ತಕ ಬಿ.ಸಿ. ಉಮಾಪತಿ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಶಂಕರಗೌಡ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಸುಚೇತನಾ ನೆಲೋಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಜಿಲ್ಲಾ ಯೋಗ ಒಕ್ಕೂಟದ ವಾಸುದೇವ ರಾಯ್ಕರ್ ಇದ್ದರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.