ವಿಜಯನಗರ: ಕಾಂಗ್ರೆಸ್ ಪ್ರಜಾ ಧ್ವನಿ ಯಾತ್ರೆ; ಬೆಂಬಲಿಗರ ನಡುವೆ ಜಗಳ, ಕಾಂಗ್ರೆಸ್ ಮುಖಂಡರ ಫ್ಲೆಕ್ಸ್ ತೆರವು

ಹೊಸಪೇಟೆ: ಇಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಪುನೀತ್ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಪ್ರಜಾ ಧ್ವನಿ ಯಾತ್ರೆ ಅಂಗವಾಗಿ ಹಾಕಲಾಗಿದ್ದ ಫ್ಲೆಕ್ಸ್‌ಗಳನ್ನು ವಿವಿಧ ಮುಖಂಡರ ಬೆಂಬಲಿಗರು ತೆರವುಗೊಳಿಸಿದರು. ಹೌದು, ಮುಖಂಡ ಎಚ್.ಆರ್.ಗವಿಯಪ್ಪ ಬೆಂಬಲಿಗರು ರಾಜಶೇಖರ್…

congress leaders flex vacated

ಹೊಸಪೇಟೆ: ಇಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಪುನೀತ್ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಕಾಂಗ್ರೆಸ್ ಪ್ರಜಾ ಧ್ವನಿ ಯಾತ್ರೆ ಅಂಗವಾಗಿ ಹಾಕಲಾಗಿದ್ದ ಫ್ಲೆಕ್ಸ್‌ಗಳನ್ನು ವಿವಿಧ ಮುಖಂಡರ ಬೆಂಬಲಿಗರು ತೆರವುಗೊಳಿಸಿದರು.

ಹೌದು, ಮುಖಂಡ ಎಚ್.ಆರ್.ಗವಿಯಪ್ಪ ಬೆಂಬಲಿಗರು ರಾಜಶೇಖರ್ ಹಿಟ್ನಾಳ್ ಮತ್ತು ಸಿರಾಜ್ ಶೇಖ್ ಅವರ ಫ್ಲೆಕ್ಸ್ ತೆಗೆಯಲು ಯತ್ನಿಸಿದ್ದು, ಇದರಿಂದ ಎರಡು ಕಡೆಯವರ ನಡುವೆ ಮಾತಿನ ಚಕಮಕಿ ನಡೆಡಿದ್ದು, ನಂತರ ಮುಖಂಡರು ಮಧ್ಯ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.

ಇನ್ನು, ಪ್ರಜಾ ಧ್ವನಿ ಯಾತ್ರೆಯ ಉತ್ತರ ಕರ್ನಾಟಕ ಉಸ್ತುವಾರಿ ಬಸವರಾಜ ರಾಯರಡ್ಡಿ ಅವರುಮುಖಂಡರ ಸಭೆ ಕರೆದು, ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಯಾರೂ ಫ್ಲೆಕ್ಸ್ ಹಾಕುವಂತಿಲ್ಲ. ಇದು ಪಕ್ಷದ ಕಾರ್ಯಕ್ರಮವಾಗಿದ್ದು, ಕಾರ್ಯಕ್ರಮ ನಡೆಯಲಿರುವ ಸ್ಥಳದಲ್ಲಿ ಯಾರೂ ಫ್ಲೆಕ್ಸ್ ಹಾಕುವಂತಿಲ್ಲ. ನಗರದಲ್ಲಿ ಎಲ್ಲಿ ಬೇಕಾದರೂ ಇರಿಸಬಹುದು. ಫ್ಲೆಕ್ಸ್ ಹಾಕಿದವರೇ ತೆರವುಗೊಳಿಸಬೇಕು ಎಂದು ಸೂಚಿಸಿದ್ದು, ಬಳಿಕ ಆಯಾ ಮುಖಂಡರ ಬೆಂಬಲಿಗರು ಫ್ಲೆಕ್ಸ್ ತೆರವುಗೊಳಿಸಿದರು.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.