ಮಗಳನ್ನು ಕಾಲುವೆಗೆ ತಳ್ಳಿ ಕೊಂದ ಅಪ್ಪ; ಯಾವ ಸಿನಿಮಾಗೂ ಕಮ್ಮಿಯಿಲ್ಲ ಈ ಕೊಲೆ!

ಬಳ್ಳಾರಿ ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸುವ ಮರ್ಯಾದ ಹತ್ಯೆ ಪ್ರಕರಣವೊಂದು ಬಯಲಾಗಿದ್ದು, ಅನ್ಯಕೋಮಿನ ಯುವಕನನ್ನು ಪ್ರೀತಿಸಿದ್ದಕ್ಕೆ ತಂದೆಯೇ ಮಗಳನ್ನು ಕೊಂದ ಘಟನೆ ಬಳ್ಳಾರಿಯ ಕುಡುತಿನಿಯಲ್ಲಿ ನಡೆದಿದೆ. ಹೌದು, ಮಗಳು ಅನ್ಯ ಜಾತಿಯ ಹುಡುಗನನ್ನು ಪ್ರೀತಿಸುತ್ತಿದ್ದಾಳೆ ಎಂದು…

father killed his daughter

ಬಳ್ಳಾರಿ ಜಿಲ್ಲೆಯಲ್ಲಿ ಬೆಚ್ಚಿ ಬೀಳಿಸುವ ಮರ್ಯಾದ ಹತ್ಯೆ ಪ್ರಕರಣವೊಂದು ಬಯಲಾಗಿದ್ದು, ಅನ್ಯಕೋಮಿನ ಯುವಕನನ್ನು ಪ್ರೀತಿಸಿದ್ದಕ್ಕೆ ತಂದೆಯೇ ಮಗಳನ್ನು ಕೊಂದ ಘಟನೆ ಬಳ್ಳಾರಿಯ ಕುಡುತಿನಿಯಲ್ಲಿ ನಡೆದಿದೆ.

ಹೌದು, ಮಗಳು ಅನ್ಯ ಜಾತಿಯ ಹುಡುಗನನ್ನು ಪ್ರೀತಿಸುತ್ತಿದ್ದಾಳೆ ಎಂದು ತಿಳಿದ ಅಪ್ಪ, ಆಕೆಯನ್ನು ಕಾಲುವೆಗೆ ತಳ್ಳಿ ಕೊಲೆ ಮಾಡಿದ್ದಾನೆ. ಓಂಕಾರ್ ಗೌಡ ಎಂಬಾತ ಮಗಳನ್ನು ಕೊಲೆಗೈದ ಆರೋಪಿ. ಈತನ ಮಗಳು ಅನ್ಯ ಜಾತಿಯ ಹುಡುಗನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ.

ಮಗಳು ಹೈಸ್ಕೂಲ್ ವಿದ್ಯಾರ್ಥಿನಿ. ಪ್ರೀತಿ-ಪ್ರೇಮದಿಂದ ದೂರವಿರು ಎಂದು ಹೇಳಿದರೂ ಕೇಳದ ಆಕೆಯನ್ನು ತಂದೆ ಓಂಕಾರಗೌಡ, ಸಿನಿಮಾ ತೋರಿಸುವುದಾಗಿ ಕರೆದೊಯ್ದು ತಿಂಡಿ ತಿನ್ನಿಸಿ, ದೇವರ ದರ್ಶನ ಮಾಡಿಸಿ, ಚಿನ್ನದ ಓಲೆ, ಉಂಗುರ ಕೊಡಿಸಿದ್ದಾನೆ. ನಂತರ ಬಳ್ಳಾರಿಯ ಕುಡಿತಿನಿ ಪಟ್ಟಣದ ಸಿದ್ಧಮ್ಮನಹಳ್ಳಿ ಬಳಿಯ ತುಂಗಭದ್ರ ಹೆಚ್ ಎಲ್ ಸಿ ಕಾಲುವೆ ಬಳಿ ಕರೆತಂದು ಹಿಂದಿನಿಂದ ತಳ್ಳಿದ್ದಾನೆ. ಬಳಿಕ ಬೈಕನ್ನು ಗೆಳೆಯನ ಮನೆಯಲ್ಲಿ ಬಿಟ್ಟು ತಿರುಪತಿಗೆ ರೈಲು ಹತ್ತಿದ್ದಾನೆ.

Vijayaprabha Mobile App free

ಇನ್ನು, ಅಕ್ಟೋಬರ್ 31ರಂದು ಈ ಘಟನೆ ನಡೆದಿದ್ದು, ಪ್ರಕರಣ ಬೇಧಿಸಿದ ಪೊಲೀಸರು ನಿನ್ನೆ (ಮಂಗಳವಾರ) ಆರೋಪಿಯನ್ನು ಬಂಧಿಸಿದ್ದಾರೆ.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.