ದೀಪಾವಳಿ ಹಬ್ಬಕ್ಕೆ ಮಳೆ ಬ್ರೇಕ್ ಕೊಟ್ಟ ನಡುವೆಯೇ, ಈ ಬಾರಿಯ ವರ್ಷಧಾರೆ ಮುಕ್ತಾಯ ಕಂಡಂತಿದ್ದು, ಮಳೆಗಾಲ ಹೋಗಿ ಚಳಿಗಾಲ ಶುರುವಾದ ಅನುಭವ ರಾಜ್ಯದ ಜನತೆಗೆ ಆಗುತ್ತಿದೆ.
ಮಳೆ ನಿಂತ ಒಂದು ದಿನದ ಬಳಿಕ ರಾಜ್ಯದಲ್ಲಿ ಚಳಿಯ ಪ್ರಭಾವ ಹೆಚ್ಚಾಗಿದ್ದು, ಬೆಳ್ಳಂಬೆಳಗ್ಗೆ ರಾಜ್ಯದಾದ್ಯಂತ ಜನರು ಚಳಿಚಳಿ ಅಂತ ನಡುಗುತ್ತಿರುವುದು ಸಾಮಾನ್ಯವಾಗಿ ಕಂಡುಬಂದಿದೆ. ಈ ಬಾರಿ ಮಳೆ ನಿಗದಿತ ಸಮಯ ಹಾಗೂ ವಾಡಿಕೆಗಿಂತ ಹೆಚ್ಚಾಗಿ ಸುರಿದು ಹೊಸ ದಾಖಲೆ ಬರೆದಿತ್ತು.
ಪ್ರಮುಖ ನಗರಗಳ ತಾಪಮಾನ :
ಬೆಂಗಳೂರು: 27-15, ಮಂಗಳೂರು: 31-22, 27-16, ಚಿತ್ರದುರ್ಗ: 28-16, ಹಾವೇರಿ: 30-17, ಬಳ್ಳಾರಿ: 30-18, ಗದಗ: 29-17, ಕೊಪ್ಪಳ: 30-18, ಶಿವಮೊಗ್ಗ: 29-16, ಬೆಳಗಾವಿ: 28-16, ಮೈಸೂರು: 29-17, ಮಂಡ್ಯ: 29-15, ಮಡಿಕೇರಿ: 26-13, ರಾಮನಗರ: 28-15, ಹಾಸನ: 28-14, ಚಾಮರಾಜನಗರ: 29-18, ಚಿಕ್ಕಬಳ್ಳಾಪುರ: 26-14, ಕೋಲಾರ, ರಾಯಚೂರು: 30-18 ಡಿಗ್ರಿ ಸೆಲ್ಸಿಯಸ್ ಇರಲಿದೆ.