ಖ್ಯಾತ ನಟಿ ಶಿಲ್ಪಾ ಶೆಟ್ಟಿಗೆ ಕಾಡಿತ್ತು ಆ್ಯಂಟಿ ಫಾಸ್ಫೋಲಿಪಿಡ್​ ಸಿಂಡ್ರೋಮ್​ ಕಾಯಿಲೆ; ಆರೋಗ್ಯ ಸಮಸ್ಯೆಯಿಂದ ಬಾಡಿಗೆ ತಾಯ್ತನದ ನಿರ್ಧಾರ..!

ಖ್ಯಾತ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು 2 ವರ್ಷಗಳ ಹಿಂದೆ ತನಗೆ ಕಾಡಿದ ಆ್ಯಂಟಿ ಫಾಸ್ಫೋಲಿಪಿಡ್​ ಸಿಂಡ್ರೋಮ್​ ಬಗ್ಗೆ ಹೇಳಿಕೊಂಡಿದ್ದರು. ಆ್ಯಂಟಿ ಫಾಸ್ಫೋಲಿಪಿಡ್​ ಸಿಂಡ್ರೋಮ್ ಕಾಯಿಲೆ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿದ್ದರು.…

ಖ್ಯಾತ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು 2 ವರ್ಷಗಳ ಹಿಂದೆ ತನಗೆ ಕಾಡಿದ ಆ್ಯಂಟಿ ಫಾಸ್ಫೋಲಿಪಿಡ್​ ಸಿಂಡ್ರೋಮ್​ ಬಗ್ಗೆ ಹೇಳಿಕೊಂಡಿದ್ದರು. ಆ್ಯಂಟಿ ಫಾಸ್ಫೋಲಿಪಿಡ್​ ಸಿಂಡ್ರೋಮ್ ಕಾಯಿಲೆ ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿದ್ದರು.

shilpashetty vijayaprabha news

ಏನಿದು ಆ್ಯಂಟಿ ಫಾಸ್ಫೋಲಿಪಿಡ್​ ಸಿಂಡ್ರೋಮ್​?:

Vijayaprabha Mobile App free

ಹೌದು, ದೇಹದ ರೋಗ ನಿರೋಧಕ ಶಕ್ತಿಯು ತನ್ನದೇ ಅಂಗಾಂಶಗಳ ವಿರುದ್ಧ ಆ್ಯಂಟಿಬಾಡಿಸ್​ ಬೆಳೆಯುವಂತೆ ಮಾಡುವ ಸ್ಥಿತಿಯೇ ಆ್ಯಂಟಿ ಫಾಸ್ಫೋಲಿಪಿಡ್​ ಸಿಂಡ್ರೋಮ್​. ಇದರಿಂದ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ದೇಹವು ತನ್ನದೇ ಜೀವಕೋಶಗಳ ವಿರುದ್ಧ ಸಮರ ಸಾರುತ್ತದೆ. ನರಗಳಲ್ಲಿ ರಕ್ತ ಹೆಪ್ಪುಗಟ್ಟುವುದು ಸೇರಿದಂತೆ ಅನೇಕ ತೊಂದರೆಗಳು ಎದುರಾಗಬಹುದಾಗಿದ್ದು, ಹೃದಯಾಘಾತಕ್ಕೂ ಕಾರಣ ಆಗಬಹುದು.

ಆರೋಗ್ಯ ಸಮಸ್ಯೆಯಿಂದ ಬಾಡಿಗೆ ತಾಯ್ತನದ ನಿರ್ಧಾರ:

ಇನ್ನು, ಆರೋಗ್ಯ ಸಮಸ್ಯೆ ಪರಿಣಾಮ ಶಿಲ್ಪಾ ಶೆಟ್ಟಿ ಅವರು 2020ರಲ್ಲಿ ಬಾಡಿಗೆ ತಾಯಿ ಮೂಲ ಹೆಣ್ಣು ಮಗು ಪಡೆದ ಬಗ್ಗೆ ಅವರು ಸೋಶಿಯಲ್​ ಮೀಡಿಯಾ ಮೂಲಕ ಸುದ್ದಿ ಹಂಚಿಕೊಂಡರು. ತಾವೇ ಗರ್ಭ ಧರಿಸಬೇಕು ಎಂಬುದು ಶಿಲ್ಪಾ ಶೆಟ್ಟಿ ಬಯಕೆ ಆಗಿತ್ತು. ಆದರೆ ಆ್ಯಂಟಿ ಫಾಸ್ಫೋಲಿಪಿಡ್​ ಸಿಂಡ್ರೋಮ್​ ಕಾಯಿಲೆ ಕಾರಣದಿಂದ ಅದು ಸಾಧ್ಯವಾಗಲಿಲ್ಲ. ಅಷ್ಟೇ ಅಲ್ಲ, ಗರ್ಭ ಧರಿಸುವಲ್ಲಿ ಒಂದೆರಡು ಬಾರಿ ವಿಫಲವಾದ ನಂತರ ಶಿಲ್ಪಾ ಶೆಟ್ಟಿ ಅವರು ಬಾಡಿಗೆ ತಾಯ್ತನದ ಮೂಲಕ ಮಗು ಪಡೆದುಕೊಂಡರು.

WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.