ಬಿಗ್ಬಾಸ್ OTT ಮೂಲಕ ದೇಶಾದ್ಯಂತ ಮನೆಮಾತಾಗಿರುವ ಭೋಜ್ಪುರಿ ನಟಿ ಅಕ್ಷರಾ ಸಿಂಗ್ ಮತ್ತೆ ಸುದ್ದಿಯಲ್ಲಿದ್ದು, ಸೋಶಿಯಲ್ ಮೀಡಿಯಾದಲ್ಲಿ ಆಕೆಯದ್ದು ಎನ್ನಲಾದ MMS ವಿಡಿಯೋ ಹರಿದಾಡುತ್ತಿದ್ದು, ವೈರಲ್ ಆಗಿದೆ.
ಈ ಬಗ್ಗೆ ನಟಿ ಅಕ್ಷರಾ ಸಿಂಗ್ ಮೌನ ಮುರಿದಿದ್ದು, ʻಆ ವಿಡಿಯೋ ನನ್ನದಲ್ಲʼ ಎಂದು ಹೇಳಿದ್ದಾರೆ. ಮಾನಸಿಕವಾಗಿ ಈ ವಿಚಾರ ನನ್ನನ್ನು ಗಾಢವಾಗಿ ಕಾಡಿದೆ. ನಾನು ಆ ವಿಡಿಯೋವನ್ನು ನೋಡಿಲ್ಲ. ಆದರೆ ಯಾರು ಇಂಥದ್ದನ್ನು ಮಾಡಿದ್ದಾರೋ ಅವರು ಕೀಳು ಮನಸ್ಥಿತಿಯವರು. ನನಗೆ ಬಹಳ ನೋವಾಗಿದೆ. ಇಂಥ ಕೃತ್ಯ ಎಸಗಿದವರ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಇದು ಭೋಜ್ಪುರಿ ಪುರಿ ಸಿನಿಮಾ ಇಂಡಸ್ಟ್ರಿಯ ಕೊಳಕು ತಂತ್ರಗಳಲ್ಲೊಂದು. ನನ್ನ ಮಾನಹಾನಿ ಮಾಡಲು ಇದನ್ನೆಲ್ಲ ಮಾಡಲಾಗಿದೆ ಎಂದು ನಟಿ ಅಕ್ಷರಾ ಸಿಂಗ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.