ಒಡೆಯನ ಅಂತ್ಯಸಂಸ್ಕಾರಕ್ಕೆ ಬಂದ ಆಕಳ ಕರು; ಹಣೆಗೆ ಮುತ್ತಿಟ್ಟು ಕಣ್ಣೀರು ಸುರಿಸಿದ ಮೂಕ ಪ್ರಾಣಿ

ಆಕಳು ಕರುವೊಂದು ತನ್ನ ಮಾಲೀಕ ಸತ್ತಾಗ ತೋರಿದ ಪ್ರೀತಿ ಎಲ್ಲರ ಕಣ್ಣುಗಳನ್ನು ತೇವವಾಗಿಸಿದೆ. ಹೌದು, ವ್ಯಕ್ತಿಯ ಮೃತಪಟ್ಟ ನಂತರ ಅತ ಸಾಕಿದ್ದ ಆಕಳು ಕರು ಅವನ ಮೃತದೇಹದ ಬಳಿಗೆ ತಲುಪಿತು. ಅಷ್ಟೇ ಆದರೆ ಅಂತಹ…

ಆಕಳು ಕರುವೊಂದು ತನ್ನ ಮಾಲೀಕ ಸತ್ತಾಗ ತೋರಿದ ಪ್ರೀತಿ ಎಲ್ಲರ ಕಣ್ಣುಗಳನ್ನು ತೇವವಾಗಿಸಿದೆ. ಹೌದು, ವ್ಯಕ್ತಿಯ ಮೃತಪಟ್ಟ ನಂತರ ಅತ ಸಾಕಿದ್ದ ಆಕಳು ಕರು ಅವನ ಮೃತದೇಹದ ಬಳಿಗೆ ತಲುಪಿತು.

ಅಷ್ಟೇ ಆದರೆ ಅಂತಹ ವಿಶೇಷ ಇರಲಿಲ್ಲ. ಆದರೆ ಆ ಕರು ಆತನ ಮೃತ ದೇಹದ ಹತ್ತಿರ ಹೋಗಿ ಪ್ರದಕ್ಷಿಣೆ ಹಾಕಿ ತನ್ನ ಯಜಮಾನನ ಪಾದಗಳಿಗೆ ಮತ್ತು ಹಣೆಗೆ ಮುತ್ತಿಟ್ಟು ನಂತರ ಆತನ ಸಾವಿಗೆ ಮೃತದೇಹದ ಮುಂದೆ ಕಣ್ಣೀರು ಸುರಿಸಿದ್ದು, ಈ ದೃಶ್ಯವನ್ನು ನೋಡಿದ ಜನರ ಕಣ್ಣಲ್ಲಿಯೂ ನೀರು ಜಿನುಗಿದೆ ಎಂದು ವರದಿಯಾಗಿದೆ.

ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ನಡೆದ ಮಾನವ ಮತ್ತು ಪ್ರಾಣಿ ನಡುವಿನ ಬಾಂಧವ್ಯದ ಈ ವಿಶಿಷ್ಟ ಘಟನೆ ಇಡೀ ಪ್ರದೇಶದಲ್ಲಿ ಈಗ ಚರ್ಚೆಯ ವಿಷಯವಾಗಿದೆ. ಪಾರ್ಥಿವ ಶರೀರ ಪಂಚಭೂತಗಳಲ್ಲಿ ಲೀನವಾಗುವವರೆಗೂ ಆ ಕರು ಅಲ್ಲಿಂದ ಕದಲಲಿಲ್ಲ ಎಂದು ವರದಿಯಾಗಿದೆ.

Vijayaprabha Mobile App free
WhatsApp Group Join Now
Telegram Group Join Now
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ‌ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮ‌vijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.