ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ ಹಿನ್ನೆಲೆ ದೆಹಲಿಯ ARDOR 2.1 ಎಂಬ ರೆಸ್ಟೋರೆಂಟ್ ’56inch Modi Ji’ ಹೆಸರಿನಲ್ಲಿ ಬೃಹತ್ ತಟ್ಟೆಯ ಭೋಜನಕೂಟ ಏರ್ಪಡಿಸಿದ್ದು, ಈ ಕೂಟವು ನಾಳೆಯಿಂದ ಸೆ.26ರವರೆಗೆ ಜಾರಿಯಲ್ಲಿರಲಿದೆ.
ಹೌದು, ’56inch Modi Ji’ ಹೆಸರಿನಲ್ಲಿ ಬೃಹತ್ ತಟ್ಟೆಯ ಭೋಜನಕೂಟ ಏರ್ಪಡಿಸಿದ್ದು ಇದರಲ್ಲಿ 56 ಬಗೆಯ ಖಾದ್ಯಗಳಿರಲಿದ್ದು, ಒಂದು ಜೋಡಿ ಇಲ್ಲವೇ ಇಬ್ಬರು ಸೇರಿ 40 ನಿಮಿಷದಲ್ಲಿ ತಿಂದು ಮುಗಿಸಬೇಕು. ಸ್ಪರ್ಧೆಯಲ್ಲಿ ಗೆದ್ದ ಜೋಡಿಗೆ ಬರೋಬ್ಬರಿ 8.5 ಲಕ್ಷ ರೂ ನಗದು ಬಹುಮಾನ ನೀಡಲಾಗುತ್ತದೆ. ಅಲ್ಲದೆ ಜೋಡಿಯನ್ನು ಕೇದಾರನಾಥಕ್ಕೆ ಪ್ರವಾಸಕ್ಕೂ ಕಳುಹಿಸಿಕೊಡಲಾಗುತ್ತದೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.