ಬೆಂಗಳೂರಲ್ಲಿ ಧಾರಾಕಾರ ಮಳೆ ಸುರಿದು ಅವಾಂತರ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ನಟಿ, ಕಾಂಗ್ರೆಸ್ ನಾಯಕಿ, ಮಾಜಿ ಸಂಸದೆ, ನಟಿ ರಮ್ಯಾ ರಾಜ್ಯ ಸರ್ಕಾರದ ವಿರುದ್ಧ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
ಹೌದು, ಬೆಂಗಳೂರಿನ ರಣಮಳೆ ಕುರಿತು ಟ್ವೀಟ್ ಮಾಡಿರುವ ರಮ್ಯಾ, ‘ತುಂಬಾ ಚೆನ್ನಾಗಿದೆ ನಮ್ಮ ಸ್ಮಾರ್ಟ್ ಸಿಟಿ. ಕಾನೂನುಬಾಹಿರವಾಗಿ ನಡೆಯುವ ಕಾಮಗಾರಿಗಳಿಗೆ ಕಡಿವಾಣ ಹಾಕುವ ಸರ್ಕಾರಕ್ಕೆ ನನ್ನ ಮತ’ ಎಂದು ಲೇವಡಿ ಮಾಡಿದ್ದಾರೆ.
ಅಲ್ಲದೆ ರಸ್ತೆ ಸಂಪೂರ್ಣವಾಗಿ ಜಲಾವೃತಗೊಂಡಿರುವ ಫೋಟೋವೊಂದನ್ನೂ ಹಾಕಿ, ನಮ್ಮ ಬೆಂಗಳೂರು ಎಂದು ಮಾರ್ಮಿಕವಾಗಿ ಮಾಜಿ ಸಂಸದೆ ರಮ್ಯಾ ರಾಜ್ಯ ಸರ್ಕಾರಕ್ಕೆ ತಿರುಗೇಟು ನೀಡಿದ್ದಾರೆ.
Very smart city!! 🤯😭My vote is for the govt that will clamp down on illegal construction 👀 #Nammabengaluru pic.twitter.com/2uiEGkFTXv
— Divya Spandana/Ramya (@divyaspandana) September 5, 2022




