ರಾಜ್ಯದಲ್ಲಿ ಮುಂಗಾರು ಮಳೆ ಆರ್ಭಟ ಇನ್ನೂ ಮೂರು ದಿನ ಮುಂದುವರಿಯುವ ಸಂಭವವಿದ್ದು, ಮುಂದಿನ ನಾಲ್ಕು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕೊಡಗು ಜಿಲ್ಲೆಯಲ್ಲಿ ಸೋಮವಾರದಿಂದ ಶುಕ್ರವಾರ ಬೆಳಗ್ಗೆಯವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಇದರ ಜೊತೆಗೆ ಬೆಂಗಳೂರಿನಲ್ಲಿ ಯಲ್ಲೋ ಅಲರ್ಟ್ ಅನ್ನು ಘೋಷಿಸಲಾಗಿದೆ. ರಾಜಧಾನಿ ಬೆಂಗಳೂರು ನಗರದಲ್ಲಿ ಗುಡುಗು ಮಿಂಚಿನ ಆರ್ಭಟ ಮತ್ತೆ ಆರಂಭವಾಗಿದ್ದು, ಬೆಂಗಳೂರು ಗ್ರಾಮಾಂತರ, ಮೈಸೂರು ಜಿಲ್ಲೆಗಳಲ್ಲೂ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇನ್ನು, ಭಾನುವಾರ ಸಂಜೆ ವೇಳೆಗೆ ಮೋಡ ಕವಿದ ವಾತಾವರಣ ಕಂಡು ಬರುವ ಮೂಲಕ, ಭಾರೀ ಮಳೆಯ ಸೂಚನೆ ನೀಡಿದ ಮಳೆರಾಯ ನಿರೀಕ್ಷೆಯಂತೆಯೇ ಗುಡುಗು ಮತ್ತು ಮಿಂಚಿನ ಸಮೇತ ಮತ್ತೊಮ್ಮೆ ಹಾವಳಿ ಇಟ್ಟಿದ್ದಾನೆ. ನಿನ್ನೆ ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆಯಾಗಿದೆ.
ವಿವಿಧ ನಗರಗಳ ಹವಾಮಾನ ವರದಿ:
ಬೆಂಗಳೂರು: 26- 20, ಚಿತ್ರದುರ್ಗ:27-21, ಹಾವೇರಿ: 29-21, ಬಳ್ಳಾರಿ:30-23, ಗದಗ: 29-21, ಕೊಪ್ಪಳ: 29-22, ಮಂಗಳೂರು: 28-24 ಶಿವಮೊಗ್ಗ: 29-21, ಬೆಳಗಾವಿ: 28-19, ಮೈಸೂರು: 28-21, ಚಾಮರಾಜನಗರ: 28-21, ಚಿಕ್ಕಬಳ್ಳಾಪುರ:25-18, ಕೋಲಾರ: 27-21, ತುಮಕೂರು: 27-21, ಮಂಡ್ಯ:28-21, ಕೊಡಗು:24-18, ರಾಮನಗರ:31-24, ಹಾಸನ:27-19, ಉಡುಪಿ:28-24, ಕಾರವಾರ:29-25, ಚಿಕ್ಕಮಗಳೂರು:26-18, ರಾಯಚೂರು:31-24, ಯಾದಗಿರಿ: 32-24, ವಿಜಯಪುರ: 31-22, ಬೀದರ್:29-22, ಕಲಬುರಗಿ:31-23, ಬಾಗಲಕೋಟೆ:31-22 ಡಿಗ್ರಿ ಸೆಲ್ಸಿಯಸ್ ಇರಲಿದೆ.