ಬಿಗ್ ಬಾಸ್ ಒಟಿಟಿಯಲ್ಲಿ 4ನೇ ವಾರದ ಎಲಿಮಿನೇಷನ್ ಮುಗಿದಿದೆ. ಕುತೂಹಲ ಎಂದರೆ ಈ ವಾರ ಇಬ್ಬರನ್ನು ಮನೆಯಿಂದ ಹೊರಗೆ ಕಳಿಸಲಾಗಿದ್ದು, ಅಕ್ಷತಾ ಕುಕ್ಕಿ ಮತ್ತು ಚೈತ್ರಾ ಹಳ್ಳಿಕೇರಿ ದೊಡ್ಮನೆಯಿಂದ ಹೊರಹೋಗಿದ್ದಾರೆ.
ಬಿಗ್ ಬಾಸ್ ಒಟಿಟಿ ಕೊನೆಯ ಹಂತಕ್ಕೆ ಬಂದಿದ್ದು ಆಟ 27ನೇ ದಿನ ಪೂರೈಸಿದೆ. ಚೈತ್ರಾ ಹಳ್ಳಿಕೇರಿ, ಜಶ್ವಂತ್, ಜಯಶ್ರೀ ಆರಾಧ್ಯ, ನಂದಿನಿ, ಸಾನ್ಯಾ ಐಯ್ಯರ್, ಅಕ್ಷತಾ ಕುಕ್ಕಿ, ರಾಕೇಶ್ ಅಡಿಗ, ಸೋನು ಶ್ರೀನಿವಾಸ್ ಗೌಡ ಈ ವಾರ ನಾಮಿನೇಟ್ ಆಗಿದ್ದರು.
ಇನ್ನು, ವೀಕ್ಷಕರಿಂದ ಕಡಿಮೆ ವೂಟ್ ಪಡೆದ ಕಾರಣದಿಂದ ಅಕ್ಷತಾ ಕುಕ್ಕಿ ಮತ್ತು ಚೈತ್ರಾ ಹಳ್ಳಿಕೇರಿ ಅವರ ‘ಬಿಗ್ ಬಾಸ್ ಕನ್ನಡ ಒಟಿಟಿ’ ಪಯಣ ಅಂತ್ಯವಾಗಿದೆ. ಇನ್ನು 14ದಿನ ಮಾತ್ರ ಉಳಿದಿದೆ. ಈ ನಡುವೆ ಡಬಲ್ ಎಲಿಮಿನೇಷನ್ ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ಚುರುಕು ಮುಟ್ಟಿಸಿದೆ.




