ದೇಶದ ಚಿನಿವಾರ ಪೇಟೆಯಲ್ಲಿ ಕಳೆದೆರಡು ದಿನದಿಂದ ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಏರಿಳಿತ ಕಾಣುತ್ತಿದ್ದು, ಇಂದು ಚಿನ್ನದ ಬೆಲೆಯಲ್ಲಿ 540 ರೂ ಇಳಿಕೆಯಾಗಿದ್ದು, ಬೆಳ್ಳಿಯ ಬೆಲೆ 400 ರೂ ಏರಿಕೆ ಕಂಡಿದೆ.
ಹೌದು, 22 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 500 ರೂ ಇಳಿಕೆಯಾಗಿ 46,500 ರೂ ಆಗಿದ್ದು,, 24 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 540 ರೂ ಇಳಿಕೆಯಾಗಿ 50,730 ರೂ. ದಾಖಲಾಗಿದ್ದು, 1 ಕೆಜಿ ಬೆಳ್ಳಿ ಬೆಲೆ 51,600 ರೂ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಇಂದಿನ 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದ್ದು, ಬೆಂಗಳೂರಿನಲ್ಲಿ 22 ಕ್ಯಾರೆಟ್‍ನ 10 ಗ್ರಾಂ ಚಿನ್ನದ ಬೆಲೆ 46,550 ರೂ ಆಗಿದ್ದು, 24 ಕ್ಯಾರೆಟ್‍ನ ಗ್ರಾಂ 10 ಚಿನ್ನದ ಬೆಲೆ 50,780 ರೂ ಇದ್ದು,1 ಕೆಜಿ ಬೆಳ್ಳಿ ದರ 58,000 ರೂ ಆಗಿದೆ. ಉಳಿದಂತೆ ಚೆನ್ನೈ- 47,100 ರೂ, ಮುಂಬೈ- 46,500 ರೂ, ದೆಹಲಿ- 46,700 ರೂ, ಕೊಲ್ಕತ್ತಾ- 46,500 ರೂ ದಾಖಲಾಗಿದೆ.