ಕಳೆದೆರಡು ದಿನಗಳಿಂದ ಯತಾಸ್ಥಿತಿಯಲ್ಲಿದ್ದ ಚಿನ್ನ, ಬೆಳ್ಳಿ ದರ ಗೌರಿ ಹಬ್ಬದ ದಿನವಾದ ಇಂದು ದೇಶದ ಚಿನಿವಾರ ಪೇಟೆಯಲ್ಲಿ ಕಡಿಮೆಯಾಗಿದ್ದು, ಬೆಳ್ಳಿಯ ಬೆಲೆ 800 ರೂ ಕುಸಿತವಾಗಿದ್ದು, ಚಿನ್ನದ ಬೆಲೆ 170 ರೂ ಇಳಿಕೆಯಾದೆ.
ಹೌದು, 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 150 ರೂ ಇಳಿಕೆಯಾಗಿ 47,150 ರೂ ಇದ್ದು, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 170 ರೂ ಇಳಿಕೆಯಾಗಿ 51,430 ರೂ. ದಾಖಲಾಗಿದ್ದು,1 ಕೆಜಿ ಬೆಳ್ಳಿ ದರ ಬರೋಬ್ಬರಿ 800 ಇಳಿಕೆಯಾಗಿ 54,000 ದಾಖಲಾಗಿದೆ.
ಇನ್ನು, ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದ್ದು, ಚೆನ್ನೈ- 52,040 ರೂ, ಮುಂಬೈ- 51,430 ರೂ, ದೆಹಲಿ- 51,600 ರೂ, ಹೈದರಾಬಾದ್- 51,430 ರೂ, ಮಂಗಳೂರು- 51,490 ರೂ, ಬೆಂಗಳೂರು- 51,490 ರೂ ಇದ್ದು,1 ಕೆಜಿ ಬೆಳ್ಳಿ ದರ 54,000 ಆಗಿದೆ.