ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ನಟ ಅನಿರುದ್ಧ್ ಅವರನ್ನು ಬ್ಯಾನ್ ಮಾಡಲು ನಿರ್ದರಿಸಲಾಗಿದೆ ಎನ್ನಲಾಗಿದೆ. ಹೌದು,ಈ ಕುರಿತು ಸಭೆ ಕೂಡ ನಡೆದಿದ್ದು, ಸಭೆಯ ನಿರ್ಧಾರದಂತೆ ಅನಿರುದ್ಧ್ರನ್ನು ಸೀರಿಯಲ್ನಿಂದ ಮಾತ್ರವಲ್ಲ ಕಿರುತೆರೆಯಿಂದಲೇ ಬ್ಯಾನ್ ಮಾಡಲಾಗಿದೆ ಎನ್ನಲಾಗಿದ್ದು, ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.

ಜೊತೆ ಜೊತೆಯಲಿ ಧಾರಾವಾಹಿ ಬಹಳ ದಿನಗಳ ಕಾಲ ಟಿಆರ್ಪಿಯಲ್ಲಿ ನಂಬರ್ ಒನ್ ಸ್ಥಾನದಲ್ಲೇ ಇತ್ತು. ಅದಾದ ಬಳಿಕವೂ ಇದರ ಟಿಆರ್ಪಿ ಚೆನ್ನಾಗಿಯೇ ಇತ್ತು. ಇದರೊಂದಿಗೆ ಜೊತೆ ಜೊತೆಯಲಿ ಧಾರಾವಾಹಿ ನಟ ಅನಿರುದ್ದ್ ಅವರಿಗೂ ಮತ್ತೆ ಮರು ಜನ್ಮ ನೀಡಿತ್ತು.

ಇನ್ನು, ನಟ ಅನಿರುದ್ಧ್ ಶೂಟಿಂಗ್ ಸೆಟ್ನಲ್ಲಿ ಕಿರಿಕಿರಿ ಮಾಡುತ್ತಿದ್ದುದ್ದು ಒಂದೇ ಅಲ್ಲದೇ ತಮ್ಮ ಪಾತ್ರದ ಕಥೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರು ಎನ್ನಲಾಗಿದೆ. ತಮಗೆ ಬೇಕಾದಂತೆ ಕಥೆ, ಸಂಭಾಷಣೆ ಬದಲಾಯಿಸುತ್ತಿದ್ದರಂತೆ ಅಂತ ಧಾರಾವಾಹಿ ತಂಡದವರೇ ಆರೋಪಿಸುತ್ತಿದ್ದಾರೆ ಎನ್ನಲಾಗಿದೆ.




