ದಾವಣಗೆರೆ ಆ.10: ಲಿಡ್‍ಕರ್ ನಿಗಮದಿಂದ ಚರ್ಮವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ನಗರದ ಎ.ವಿ.ಕೆ ಕಾಲೇಜ್ ರಸ್ತೆಯಲ್ಲಿರುವ ರಂಗಮಹಲ್ ಹಾಲ್‍ನಲ್ಲಿ ಏರ್ಪಡಿಸಲಾಗಿದೆ.
ಮಾರಾಟ ಮೇಳದಲ್ಲಿ ಅಪ್ಪಟ ಚರ್ಮದ ಪಾದರಕ್ಷೆ, ಶೂ, ಬೆಲ್ಟ್, ಪರ್ಸ್, ಮಹಿಳೆಯರ ಪರ್ಸ್, ವ್ಯಾನಟಿ ಬ್ಯಾಗ್‍ಗಳು ಹೊಸ ಮಾದರಿಯಲ್ಲಿ ಲಭ್ಯವಿದ್ದು, ದಾಸ್ತಾನುಗಳ ಮೇಲೆ ಶೇ.20 ರಷ್ಟು ರಿಯಾಯಿತಿ ಹಾಗೂ ಆಯ್ದ ವಸ್ತುಗಳ ಮೇಲೆ ಶೇ.30 ಹಾಗೂ ಶೇ.40 ರಷ್ಟು ರಿಯಾಯಿತಿ ದರಕ್ಕೆ ಮಾರಾಟ ಲಭ್ಯವಿದೆ ಎಂದು ಲಿಡ್‍ಕರ್ ನಿಗಮದ ವ್ಯವಸ್ಥಾಪಕ ಎ.ಎಸ್ ರುದ್ರೇಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶೇಷ ಸೂಚನೆ: ಪ್ರಿಯ ಓದುಗರೆ ವಸ್ತುನಿಷ್ಠ ವರದಿ ಹಾಗೂ ಮಾಹಿತಿ ನೀಡಲು ವಿಜಯಪ್ರಭಾ.ಕಾಂ ಸಂಪಾದಕೀಯ ತಂಡ ಬದ್ಧವಾಗಿದೆ. ಒಂದು ವೇಳೆ ನಾವು ನೀಡುವ ಮಾಹಿತಿ ಬಗ್ಗೆ ತಕರಾರಿದ್ದರೆ ನಮ್ಮvijayaprabhanews@gmail.com ಈಮೇಲ್ ಮಾಡಿ ತಕ್ಷಣ ಪರಿಶೀಲಿಸಿ ತಿದ್ದಿಕೊಳ್ಳುತ್ತೇವೆ.