ದಾವಣಗೆರೆ ಆ.10 :2022-23ನೇ ಸಾಲಿನ ಕೃಷಿ ಮತ್ತು ಪ್ರಶಸ್ತಿ ಬೆಳೆ ಸ್ಪರ್ಧೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು. ಜಿಲ್ಲಾ ಮಟ್ಟಕ್ಕೆ ಮುಸುಕಿನಜೋಳ ಮಳೆಯಾಶ್ರಿತ ಬೆಳೆಯನ್ನು ನಿಗದಿಪಡಿಸಲಾಗಿದ್ದು. ತಾಲ್ಲೂಕು ಮಟ್ಟಕ್ಕೆ ದಾವಣಗೆರೆ, ಚನ್ನಗಿರಿ, ಹರಿಹರ ಹಾಗೂ ಹೊನ್ನಾಳಿ ತಾಲ್ಲೂಕುಗಳಿಗೆ ಭತ್ತ ನೀರಾವರಿ ಮತ್ತು ನ್ಯಾಮತಿ ತಾಲ್ಲೂಕಿಗೆ ಶೇಂಗಾ ಮಳೆಯಾಶ್ರಿತ ಹಾಗೂ ಜಗಳೂರು ತಾಲ್ಲೂಕಿಗೆ ಮುಸುಕಿನ ಜೋಳ ಮಳೆಯಾಶ್ರಿತ ಬೆಳೆಗಳನ್ನು ನಿಗದಿಪಡಿಸಲಾಗಿದೆ. ಮುಂಗಾರು ಅಂಗಾಮಿಗೆ ಅರ್ಜಿ ಸಲ್ಲಿಸಲು ಆಗಸ್ಟ್ 31 ಹಾಗೂ ಹಿಂಗಾರು ಹಂಗಾಮಿಗೆ ನವಂಬರ್ 30 ಕೊನೆಯ ದಿನ ಆಗಿರುತ್ತದೆ.
ಪ್ರಸಕ್ತ ಸಾಲಿನಲ್ಲಿ ಕೃಷಿ ಪ್ರಶಸ್ತಿಗೆ ಪ್ರತ್ಯೇಕವಾಗಿ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಕೂಡಲೇ ರೈತ ಬಾಂಧವರು ನಿಗಧಿತ ದಿನಾಂಕದೊಳಗೆ ಕೃಷಿ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಸಂಪರ್ಕಿಸಬಹುದು ಎಂದು ದಾವಣಗೆರೆ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ